ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ದರ್ಶನ್ ಮಾತನ್ನು ಒಮ್ಮೆ ಕೇಳಿಸಿಕೊಳ್ಳಿ!

Recommended Video

ಅಪಘಾತದ ನಂತರ ದರ್ಶನ್ ಆಡಿದ ಮಾತುಗಳಿವು..! | Filmibeat Kannada

ನಟ ದರ್ಶನ್ ಕಾರು ಅಪಘಾತದ ಸುದ್ದಿ ಎಲ್ಲರಿಗೂ ಗಾಬರಿ ಪಡುವಂತೆ ಮಾಡಿದೆ. ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ದರ್ಶನ್ ಗೆ ಏನಾಯ್ತು ಎಂಬ ಆತಂಕ ಸೃಷ್ಟಿಯಾಗಿದೆ.

ಈಗಾಗಲೇ ಅನೇಕರು ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಇದೀಗ ನಟ ದರ್ಶನ್ ಅವರೇ ಸ್ವತಃ ದೂರವಾಣಿ ಮೂಲಕ ಸುದ್ದಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.

ಅಂದಹಾಗೆ, ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸ್ವತಃ ದರ್ಶನ್ ಏನು ಹೇಳಿದ್ದಾರೆ ಎಂದು ಮಾಹಿತಿ ಮುಂದಿದೆ ಓದಿ...

ನನಗೆ ಏನು ಆಗಿಲ್ಲ

ನನಗೆ ಏನು ಆಗಿಲ್ಲ

''ಎಲ್ಲರಿಗೂ ನಮಸ್ಕಾರ. ಅಭಿಮಾನಿಗಳನ್ನು ನಾನು ಅನ್ನದಾತರು ಎಂದು ಕರೆಯಲು ಇಷ್ಟ ಪಡುತ್ತಾನೆ. ನಿಮ್ಮ ದಯೆಯಿಂದ ನಾನು ಆರಾಮಾಗಿದ್ದೇನೆ. ನನಗೆ ಏನು ಆಗಿಲ್ಲ.'' ಎಂದು ಹೇಳುವ ಮೂಲಕ ಎಲ್ಲರಲ್ಲಿ ಇದ್ದ ಆತಂಕದ ವಾತವರಣವನ್ನು ಮರೆಯಾಗುವಂತೆ ಮಾಡಿದ್ದಾರೆ.

ಆಸ್ಪತ್ರೆಗೆ ಯಾರು ಬರಬೇಡಿ

ಆಸ್ಪತ್ರೆಗೆ ಯಾರು ಬರಬೇಡಿ

''ದಯವಿಟ್ಟು ಆಸ್ಪತ್ರೆಗೆ ಯಾರು ಬರಬೇಡಿ. ಇದು ನನ್ನ ಮನವಿ ಅಂತ ತಿಳಿದುಕೊಳ್ಳಿ. ಆಸ್ಪತ್ರೆಯಲ್ಲಿ ಇರುವ ಬೇರೆ ರೋಗಿಗಳಿಗೆ ನಮ್ಮಿಂದ ತೊಂದರೆ ಆಗಬಾರದು. ಇಂದು ಸಂಜೆ ಅಥವಾ ನಾಳೆ ನಿಮ್ಮ ಮುಂದೆ ನಾನೇ ಬರುತ್ತೇನೆ'' ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸಂದೇಶ್ ನಾಗರಾಜ್ ಸ್ಪಷ್ಟನೆ

ಸಂದೇಶ್ ನಾಗರಾಜ್ ಸ್ಪಷ್ಟನೆ

ಈಗಾಗಲೇ ನಿರ್ಮಾಪಕ ಸಂದೇಶ್ ನಾಗರಾಜ್ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ದರ್ಶನ್ ಗೆ ಮೈನರ್ ಆಗಿ ಗಾಯ ಆಗಿದೆ. ಬಲಗೈ ನ ಮೂಳೆ ಫ್ರಾಕ್ಚರ್ ಆಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ದರ್ಶನ್ ಚೆನ್ನಾಗಿ ಇದ್ದಾರೆ. ಕೈಗೆ ಪ್ಲೇಟ್ ಹಾಕಿದ್ದು, ಎರಡು ವಾರದ ನಂತರ ಅದನ್ನು ತೆಗೆಯುತ್ತಾರೆ.'' ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.

ಜಗ್ಗೇಶ್ ಟ್ವೀಟ್

ಜಗ್ಗೇಶ್ ಟ್ವೀಟ್

ಈ ಘಟನೆಯ ಬಗ್ಗೆ ಈಗ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಕಲಾ ಬಂಧು ದರ್ಶನ್ ಗೆ ಅಪಘಾತವಾದ ಸುದ್ದಿ ಕೇಳಿ ದಿಘ್ಬ್ರಾಂತನಾದೆ!!. ಕೊಟ್ಯಾಂತರ ಕನ್ನಡದ ಆತ್ಮಗಳು ಹಾಗೂ ಅಮ್ಮನ ಆಶೀರ್ವಾದ ದರ್ಶನ್ ಅನ್ನು ಕಾಪಾಡಿದೆ. ಕ್ಷೇಮವಾಗಿದ್ದಾರೆ ರಾಯರದಯೇ.. ಯಾರ ಕಣ್ಣು ತಾಕದೆ ಸುಖವಾಗಿ ಬಾಳಿ.. ಶುಭಹಾರೈಕೆ.'' ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ

ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯೆ

''ಇನ್ನು ಕೆಲವು ಗಂಟೆಗಳಲ್ಲಿ ವಾರ್ಡ್ ಗೆ ಶಿಫ್ಟ್ ಮಾಡುತ್ತಾರೆ. ಅವರ ಬಲಗೈಗೆ ಸಣ್ಣ ಪುಟ್ಟ ಗಾಯಗಳು ಆಗಿವೆ. ಈಗ ಆರಾಮಾಗಿದ್ದು, ನಮ್ಮ ಜೊತೆಗೆ ಮಾತನಾಡಿದ್ದಾರೆ. ಡಾಕ್ಟರ್ ಎಲ್ಲ ಚಿಕಿತ್ಸೆ ನೀಡಿದ್ದಾರೆ. ಇನ್ನು ಎರಡು ವಾರಗಳಲ್ಲಿ ಅವರು ಶೂಟಿಂಗ್ ಗೆ ಮರಳಬಹುದು.'' - ವಿಜಯಲಕ್ಷ್ಮಿ, ದರ್ಶನ್ ಪತ್ನಿ

More from Filmibeat

English summary
Kannada actor Darshan clarification about his health condition. Darshan along with actors Devraj and Prajwal Devraj met with an accident near Mysuru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X