'ಕಾಟೇರ' ಸೆಲೆಬ್ರಿಟಿ ಶೋ; ದರ್ಶನ್ ಸರಳತೆಗೂ ಜೈ, ಸಿನಿಮಾಗೂ ಜೈ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಸಾಬೀತಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ 100 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ. ಕೇವಲ ಕನ್ನಡದಲ್ಲಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾಗೆ ರಾಜ್ಯದೆಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಇಷ್ಟು ದಿನ ದರ್ಶನ್ ಅಭಿಮಾನಿಗಳು ಹಾಗೂ ಸಿನಿಪ್ರಿಯರ 'ಕಾಟೇರ' ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಕನ್ನಡ ಚಿತ್ರರಂಗದ ತಾರೆಯರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆಯೇ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲ ಈ ಸಿನಿಮಾ ನೋಡಿ ಶುಭ ಹಾರೈಸಿದ್ದಾರೆ.

Darshans Kaatera red carpet show Sumalatha, Ramesh Aravind, and many others were present

ನಿನ್ನೆ (ಜನವರಿ 3) ಬೆಂಗಳೂರಿನ ಒರಾಯನ್ ಮಾಲ್‌ನ ಪಿವಿಆರ್‌ನಲ್ಲಿ 'ಕಾಟೇರ' ಸೆಲೆಬ್ರೆಟಿ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ದರ್ಶನ್ ಹೊಸ ಅವತಾರವನ್ನು ನೋಡುವುದಕ್ಕೆ ಕನ್ನಡದ ತಾರೆಯರು ಉತ್ಸಾಹದಲ್ಲಿ ಇದ್ದರು. ಈ ಸಿನಿಮಾವನ್ನು ನೋಡಿ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ದರ್ಶನ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ಕಾಟೇರ' ಸಿನಿಮಾ ನೋಡುವುದಕ್ಕೆ ಹಿರಿಯ ನಟಿ ಬಿ ಸರೋಜಾದೇವಿ, ರಮೇಶ್‌ ಅರವಿಂದ್‌, ಪ್ರಿಯಾಂಕಾ ಉಪೇಂದ್ರ, ಸುಮಲತಾ, ನಟಿ ಶ್ರುತಿ, ಮಾಲಾಶ್ರೀ, ಧನಂಜಯ್‌, ವಿನೋದ್‌ ಪ್ರಭಾಕರ್, ಸತೀಶ್‌ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್‌ ಗೌಡ, ಅರವಿಂದ್‌ ಕೆಪಿ, ದಿವ್ಯಾ ಉರುಡುಗ, ರಕ್ಷಿತಾ ಪ್ರೇಮ್, ಕುಮಾರ್‌ ಗೋವಿಂದ್‌, ವಿಕ್ರಂ ರವಿಚಂದ್ರನ್‌, ಮನೋರಂಜನ್‌ ರವಿಚಂದ್ರನ್‌, ನಿರ್ದೇಶಕರಾದ ಯೋಗರಾಜ್‌ ಭಟ್‌, ಚೇತನ್‌ ಕುಮಾರ್‌, ಕೃಷ್ಣ, ನಿಶ್ವಿಕಾ ನಾಯ್ಡು, ಎಸ್‌ ನಾರಾಯಣ್, ಮೇಘನಾ ಗಾಂವ್ಕರ್‌, ವಸಿಷ್ಠ ಸಿಂಹ, ಹರಿಪ್ರಿಯಾ, ಅಭಿಷೇಕ್‌ ಅಂಬರೀಶ್‌, ಸಾಧುಕೋಕಿಲ, ದೊಡ್ಡಣ್ಣ ಸೇರಿ ಇನ್ನೂ ಹಲವು ಮಂದಿ 'ಕಾಟೇರ' ಸಿನಿಮಾ ನೋಡಿದ್ದಾರೆ.

Darshans Kaatera red carpet show Sumalatha, Ramesh Aravind, and many others were present

'ಕಾಟೇರ' ಸಿನಿಮಾ ನೋಡುವುದಕ್ಕೆ ಬಂದಿದ್ದ ಸೆಲೆಬ್ರೆಟಿಗಳನ್ನು ದರ್ಶನ್ ಕುದ್ದಾಗಿ ಸ್ವಾಗತ ಮಾಡಿದ್ದು ವಿಶೇಷವಾಗಿತ್ತು. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ ಸೆಲೆಬ್ರೆಟಿಗಳಿಗೂ ಈ ಸಿನಿಮಾ ಇಷ್ಟ ಆಗಿದೆ. ದರ್ಶನ್ ಹೊಸ ಲುಕ್, ಸಿನಿಮಾದ ಕಥೆ, ಪ್ರತಿಯೊಂದು ಇಷ್ಟ ಆಗಿದೆ. ಇದೇ ವೇಳೆ ಸಿನಿಮಾ ಗೆದ್ದಿದ್ದಕ್ಕೆ ದರ್ಶನ್ ಫುಲ್ ಹ್ಯಾಪಿಯಾಗಿದ್ದಾರೆ. "ಈ ಸಿನಿಮಾದ ಗೆಲುವು ಕರ್ನಾಟಕದ ಗೆಲುವು. ನಾನು ಮಾಡೋದು ಕನ್ನಡ ಸಿನಿಮಾ ಎಂದು ಅದಕ್ಕೆ ಹೇಳಿದ್ದು" ಎಂದು ದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ.

ದರ್ಶನ್ ಸಿನಿಮಾ 'ಕಾಟೇರ' ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಮೊದಲ ನಾಲ್ಕು ದಿನಗಳ ಕಲೆಕ್ಷನ್ ಸ್ಯಾಂಡಲ್‌ವುಡ್ ಮಟ್ಟಿಗೆ ದಾಖಲೆ ಬರೆದಿದೆ ಎನ್ನಬಹುದು. 'ಕಾಟೇರ' ಡಿಸೆಂಬರ್ 29ರಂದು ರಿಲೀಸ್ ಆಗಿತ್ತು. ಅಂದು 19.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ (ಡಿಸೆಂಬರ್ 30) 17.35 ಕೋಟಿ ರೂಪಾಯಿ, ಮೂರನೇ ದಿನ (ಡಿಸೆಂಬರ್ 31) 20.94 ಕೋಟಿ ರೂ. ನಾಲ್ಕನೇ ದಿನ (ಜನವರಿ 1) 18.26 ಕೋಟಿ ರೂಪಾಯಿ ಹಾಗೂ ಐದನೇ ದಿನ (ಜನವರಿ 2) 9.24 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಒಟ್ಟು ಗಳಿಕೆ 86.84 ಕೋಟಿ ರೂಪಾಯಿ ಆಗಿದೆ.

More from Filmibeat

English summary
Darshan movie Kaatera Celebrity show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X