ಡಿ ಡಿ ಡಿ... 'ಡಿ ಬಾಸ್' ಅಭಿಮಾನಿಗಳು ಫಿದಾ: 'ರಾಬರ್ಟ್' ಹಾಡು ಹೇಗಿದೆ?

'ಹಡಗು ಹಿಡಿದು ಪಡೆಯೆ ಬರಲಿ ಹೊಸಕಿ ಬಿಡುವೆ ಕಾಲಡಿ... ಡಿ ಡಿ ಡಿ

ಗುಡುಗು ಸಿಡಿಲು ಜತೆಗೆ ಬರಲಿ ಕೆಡವಿ ಹೊಡೆಯೊ ಗಾರುಡಿ ಡಿ ಡಿ ಡಿ

ಮೀಸೆ ತಿರುವದೆ ಪೊಗರು ಅದುಮಿಡಿ

ಅಹಂಕಾರ ಅನುವುದ ಮೊದಲು ಹೊರಗಿಡಿ

ಕಾಲು ಕೆರೆದರೆ ಎಲುಬು ಪುಡಿ ಪುಡಿ

ಚಾರ್ಜು ಮಾಡೋ ಪವರಿದೆ ಇವನು ಎವರೆಡಿ

ಧೂಮಕೇತು ನಾನು ದಮ್ ಇದ್ದರೆ ತಡಿ ....

ಬಾ ಬಾ ಬಾ ನಾ ರೆಡಿ...

'ರಾಬರ್ಟ್' ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚಿಂದಿ ಮಾಡುತ್ತಿದೆ. ಮಂಗಳವಾರ ಸಂಜೆ 5.01ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಅದಕ್ಕೆ ಕಾದು ಕುಳಿತಿದ್ದರು. ಹಾಡು ಬಿಡುಗಡೆಯಾಗುವ ಮುನ್ನ ಚಿತ್ರತಂಡ ಲೈವ್ ಸ್ಟ್ರೀಮ್ ಲಿಂಕ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಗಲೇ ಲೈಕ್, ಕಾಮೆಂಟ್‌ಗಳ ಸುರಿಮಳೆಗೈದಿದ್ದರು.

ಫ್ಯಾನ್ಸ್ ಬಯಸಿದ್ದೇ ಸಿಕ್ಕಿದೆ

ಫ್ಯಾನ್ಸ್ ಬಯಸಿದ್ದೇ ಸಿಕ್ಕಿದೆ

ಸುಮಾರು ಮೂರು ನಿಮಿಷ ಅವಧಿ ಇರುವ ರಾಬರ್ಟ್ ಚಿತ್ರದ ಹಾಡು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಡಿ ಬಾಸ್‌ನ ವ್ಯಕ್ತಿತ್ವ ಹಾಗೂ ರಾಬರ್ಟ್ ಚಿತ್ರದ ಪಾತ್ರ ಎರಡನ್ನೂ ಕೊಂಡಾಡುವ ಹಾಡಿನ ಸಾಹಿತ್ಯಕ್ಕೆ ಸಿನಿ ಪ್ರಿಯರು ಮುದಗೊಂಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ದರ್ಶನ್ ಫ್ಯಾನ್ಸ್ ಬಯಸಿದ್ದನ್ನು ನೀಡಿದೆ.

ಪ್ರತಿ ಸಾಲೂ 'ಡಿ'ಯಿಂದ ಅಂತ್ಯ

ಪ್ರತಿ ಸಾಲೂ 'ಡಿ'ಯಿಂದ ಅಂತ್ಯ

'ರಾಬರ್ಟ್' ಚಿತ್ರತಂಡ ಬಿಡುಗಡೆ ಮಾಡಿರುವ ಮೊದಲ ಹಾಡು ಇದು. ಪ್ರತಿ ಸಾಲಿನ ಅಂತ್ಯವೂ 'ಡಿ' ಅಕ್ಷರದಿಂದ ಕೊನೆಗೊಳ್ಳುವಂತೆ ಹಾಗೂ ಅದರಲ್ಲಿ ದಮ್ ಇರುವಂತೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಹೊಸೆದಿದ್ದಾರೆ. ಹೀಗಾಗಿ 'ಡಿ' ಬಾಸ್ ಅಭಿಮಾನಿಗಳಿಗೆ ಇದು ಹಬ್ಬವಾಗುವುದರಲ್ಲಿ ಅನುಮಾನವಿಲ್ಲ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡಿನಲ್ಲಿ ಅಭಿಮಾನಿಗಳಿಗೆ ಖುಷಿ ನೀಡುವಂತಹ ಕಿಕ್ ಇದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ವ್ಯಾಸರಾಜ್ ಸೋಸಲೆ ಗಾಯನ

ವ್ಯಾಸರಾಜ್ ಸೋಸಲೆ ಗಾಯನ

ವ್ಯಾಸರಾಜ್ ಸೋಸಲೆ ಈ ಹಾಡಿಗೆ ದನಿ ನೀಡಿದ್ದರೆ, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಾಲ್ಗುಣ ಮತ್ತು ನಿಖಿಲ್ ಪಾರ್ಥಸಾರಥಿ ಸಹ ಗಾಯನ ಮಾಡಿದ್ದಾರೆ. ಈ ಹಾಡಿಗೆ ಸಂತೋಷ್ ಶೇಖರ್ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡು ಬೆಳ್ಳಿಪರದೆ ಮೇಲೆ ಹೇಗೆ ಕಾಣಿಸಲಿದೆ ಎಂಬ ಕುತೂಹಲ ಮೂಡಿದೆ.

ವಿಭಿನ್ನ ಲುಕ್‌ಗಳಲ್ಲಿ ದರ್ಶನ್

ವಿಭಿನ್ನ ಲುಕ್‌ಗಳಲ್ಲಿ ದರ್ಶನ್

ಈ ಹಾಡಿನಲ್ಲಿ ದರ್ಶನ್ ಅವರ ಹಲವು ವಿಭಿನ್ನ ಲುಕ್‌ಗಳನ್ನು ತೋರಿಸಲಾಗಿದೆ. ರಾಬರ್ಟ್‌ನ ವಿಶಿಷ್ಟ ಶೈಲಿಯ ಬೇಕ್ ಮೇಲೆ ದರ್ಶನ್ ಸ್ಪೆಷಲ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಖಳರೊಂದಿಗೆ ಕಾದಾಡುವ ಕೆಲವು ದೃಶ್ಯಗಳನ್ನೂ ಅಳವಡಿಸಲಾಗಿದೆ.

ಮುಗಿಬಿದ್ದ ಅಭಿಮಾನಿಗಳು

ಮುಗಿಬಿದ್ದ ಅಭಿಮಾನಿಗಳು

ಈ ಹಾಡು ಬಿಡುಗಡೆಯಾದ ಅರ್ಧ ಗಂಟೆಯಲ್ಲಿಯೇ 51 ಸಾವಿರ ಲೈಕ್‌ಗಳನ್ನು ಎಂಟು ಸಾವಿರಕ್ಕೂ ಅಧಿಕ ಕಾಮೆಂಟ್‌ಗಳನ್ನು ಯೂಟ್ಯೂಬ್‌ನಲ್ಲಿ ಪಡೆದಿದೆ. ಸಾವಿರಾರು ಮಂದಿ ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
One of the most expected movie of Challenging Star Darshan's Roberrt movie's first single lyrical video is storming in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X