ದರ್ಶನ್ ಈಸ್ ಬ್ಯಾಕ್, ಫೀಲ್ಡ್ ಗೆ ಇಳಿದ ದಾಸ

ಕಾರು ಅಪಘಾತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈಗೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಬಲಗೈಗೆ ಕಟ್ಟು ಕಟ್ಟಿದ್ದರು. ಇದರ ಪರಿಣಾಮ ಸುಮಾರು ಒಂದು ತಿಂಗಳು ವಿಶ್ರಾಂತಿ ಸೂಚಿಸಿದ್ದರು.

ಬಹುಶಃ ದರ್ಶನ್ ಅವರ ಕೈ ಗಮನಿಸಿದ್ದ ಅಭಿಮಾನಿಗಳು, ಡಿ ಬಾಸ್ ಮತ್ತೆ ಮೊದಲಿನಂತೆ ಆಗಲು ತುಂಬಾ ದಿನ ಬೇಕಾಗಬಹುದು ಎಂದುಕೊಂಡಿದ್ದರು. ಆದ್ರೆ, ಚಕ್ರವರ್ತಿ ಸ್ವಲ್ಪ ಬೇಗನೇ ರೆಡಿಯಾಗ್ತಿದ್ದಾರೆ.

Darshans wildlife photography

ಮತ್ತೆ ಮೊದಲಿನಂತೆ ತಮ್ಮ ಸಹಜ ಸ್ಥಿತಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಇದಕ್ಕೆ ಪುಷ್ಠಿಯೆಂಬಂತೆ ಈಗ ಕೆಲವು ಫೋಟೋಗಳು ಸಿಕ್ಕಿದೆ. ಅಭಯಾರಣ್ಯದಲ್ಲಿ ದರ್ಶನ್ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋ ವೈರಲ್ ಆಗಿದ್ದು, ದರ್ಶನ್ ತಮ್ಮ ಎರಡೂ ಕೈಗಳಿಂದ ಫೋಟೋ ತೆಗೆಯುತ್ತಿದ್ದಾರೆ.

Darshans wildlife photography

ಕ್ಯಾಮೆರಾವನ್ನ ತಮ್ಮ ಎರಡು ಕೈಗಳಿಂದ ನಿಯಂತ್ರಿಸುತ್ತಿದ್ದಾರೆ. ಆದ್ರೆ, ಕೈಗೆ ಹಾಕಿರುವ ಕಟ್ಟನ್ನ ಇನ್ನು ಬಿಚ್ಚಿಲ್ಲ. ಬಟ್, ಇದನ್ನ ನೋಡಿದ್ರೆ, ದರ್ಶನ್ ಅವರ ತಮ್ಮ ಕೈಗಳನ್ನ ಮೊದಲಿನಂತೆ ಸರಾಗವಾಗಿ ಬಳಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ.

ಸದ್ಯ, ದರ್ಶನ್ ಅವರ ವಿಶ್ರಾಂತಿಯಿಂದ 'ಯಜಮಾನ', 'ಒಡೆಯ' ಸಿನಿಮಾಗಳು ಬ್ರೇಕ್ ತೆಗೆದುಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸುತ್ತಿದ್ದು, ಬಾಕಿ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ಈ ಮಧ್ಯೆ 'ಗಂಡುಗಲಿ ಮದಕರಿ ನಾಯಕ' ಹಾಗೂ ತರುಣ್ ಸುಧೀರ್ ಸಿನಿಮಾ ಕೂಡ ಸೆಟ್ಟೇರಲಿದೆ. ದರ್ಶನ್ ವಾಪಸ್ ಆಗುತ್ತಿದ್ದಂತೆ ಈ ಎಲ್ಲ ಚಿತ್ರಗಳನ್ನ ಶುರು ಮಾಡಲಿದ್ದಾರೆ.

More from Filmibeat

English summary
Challenging star darshan new photos are becoming viral on the social networking site.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X