'777 ಚಾರ್ಲಿ' ಪೋಸ್ಟ್ ಮಾಡಿದ್ದು ಸಿನಿಮಾಗಾ? ಇಲ್ಲ ಕೋಪಕ್ಕಾ? "ಬ್ರೋ ನಾಯಿ ನಿಯತ್ತು" ಅಂತಿರೋದ್ಯಾಕೆ ನೆಟ್ಟಿಗರು?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಳೆದ ಕೆಲವು ತಿಂಗಳಿಂದ ಯಾರ ಕೈಗೂ ಸಿಕ್ಕಿರಲಿಲ್ಲ. ಇನ್ನು ಸೋಶಿಯಲ್ ಮೀಡಿಯಾದಿಂದ ಅಂತೂ ದೂರವೇ ಉಳಿದಿದ್ದರು. ಆದ್ರೀಗ ದಿಢೀರನೇ ಕೆಲವು ದಿನಗಳಿಂದ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ '777 ಚಾರ್ಲಿ' ಸಿನಿಮಾದ ಇಮೇಜ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ನೋಡುತ್ತಿದ್ದಂತೆ ನೆಟ್ಟಿಗರು ಡಿಕೋಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ರಕ್ಷಿತ್ ಶೆಟ್ಟಿಯ ಪೋಸ್ಟ್ ಇಷ್ಟೊಂದು ಸದ್ದು ಮಾಡುತ್ತಿರುವುದಕ್ಕೆ ಕಾರಣವಿದೆ. '777 ಚಾರ್ಲಿ'ಯ ಇಮೇಜ್ ಹಾಕಿ ಅದಕ್ಕೆ ಏನಾದರೂ ಒಂದೆರಡು ಸಾಲು ಬರೆದಿದ್ದರೆ, ಕ್ಲಾರಿಟಿ ಸಿಗುತ್ತಿತ್ತು. ಆದರೆ, ರಕ್ಷಿತ್ ಶೆಟ್ಟಿ ಕೇವಲ ಸಿನಿಮಾ ಇಮೇಜ್ ಹಾಕಿ ಸುಮ್ಮನಾಗಿದ್ದಾರೆ. ಅದನ್ನು ನೋಡುತ್ತಿದ್ದಂತೆ ಒಬ್ಬೊಬ್ಬರು ಒಂದೊಂದು ಅರ್ಥದಲ್ಲಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

Decoding Rakshit Shetty shared 777 Charlie movie image in social media

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅವರೇ ನಿರ್ದೇಶಿಸಲಿರುವ 'ರಿಚರ್ಡ್ ಆಂಟನಿ' ಸಿನಿಮಾ ಸ್ಕ್ರೀಪ್ಟ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಅಲ್ಲದೇ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದು ಕೂಡ ಕಡಿಮೆನೇ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೇ '777 ಚಾರ್ಲಿ' ಸಿನಿಮಾದ ಪೋಸ್ಟರ್ ಹಾಕಿ ಎಲ್ಲರನ್ನೂ ನೆಟ್ಟಿಗರು ಗೊಂದಲಕ್ಕೆ ಬೀಳುವಂತೆ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಇತ್ತೀಚೆಗೆ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಮಾಡುವುದಕ್ಕೆಂದು ಗಾಯಬ್ ಆಗಿದ್ದರು. ಅಮೆರಿಕದಲ್ಲಿ ಒಂದಿಷ್ಟು ತಿಂಗಳು ಅವರ ತಂಡದೊಂದಿಗೆ ಕೂತು ಸ್ಕ್ರಿಪ್ಟ್ ಮುಗಿಸಿ ಬಂದಿದ್ದಾರೆ. ಇಲ್ಲಿವರೆಗೂ ಒಂದೇ ಸಿನಿಮಾಗೆ ಸ್ಕ್ರಿಪ್ಟ್ ಮಾಡುವುದಕ್ಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರಲ್ಲ ಅನ್ನೋ ಟೀಕೆಗಳು ಕೂಡ ವ್ಯಕ್ತವಾಗಿದ್ದವು. ಆದರೆ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬಿಗ್ ಅಪ್‌ಡೇಟ್ ಕೊಟ್ಟಿದ್ದರು.

ರಕ್ಷಿತ್ ಶೆಟ್ಟಿ ಇಷ್ಟು ದಿನ ಸ್ಕ್ರಿಪ್ಟ್ ಮಾಡಿದ್ದು ಕೇವಲ 'ರಿಚರ್ಡ್ ಆಂಟನಿ'ಗಾಗಿ ಅಷ್ಟೇ ಅಲ್ಲ. ಬದಲಿಗೆ ಐದು ಸಿನಿಮಾಗಳಿಗೆ ಸ್ಕ್ರಿಪ್ಟ್ ಮಾಡಿದ್ದಾರೆ. ಬಹುಶ: ಒಂದು ಸಿನಿಮಾ ಮುಗಿಯುತ್ತಿದ್ದಂತೆ ಇನ್ನೊಂದು ಸಿನಿಮಾಗೆ ಕೈ ಹಾಕುತ್ತಾರೆ. ಹೀಗಾಗಿ 'ರಿಚರ್ಡ್ ಆಂಟನಿ' ಮುಗಿಯುತ್ತಿದ್ದಂತೆ ಮತ್ತೊಂದಿಷ್ಟು ದಿನ ಕಾಯುವ ಸ್ಥಿತಿ ಇರೋದಿಲ್ಲ ಅನ್ನೋ ನಂಬಿಕೆ ಅವರ ಅಭಿಮಾನಿಗಳದ್ದು. ಹೀಗಾಗಿ ಸೀ ಐದು ಸ್ಕ್ರಿಪ್ಟ್‌ಗಳಲ್ಲಿ '777 ಚಾರ್ಲಿ 2' ಇರಬಹುದಾ? ಅಂತನೂ ಕೆಲವರು ಗೆಸ್ ಮಾಡುತ್ತಿದ್ದಾರೆ.

ಆದರೆ, ಬಹುತೇಕ ಮಂದಿ ರಕ್ಷಿತ್ ಶೆಟ್ಟಿಗೆ ಸಮಾಧಾನ ಹೇಳುವುದಕ್ಕೆ ಶುರು ಮಾಡಿದ್ದಾರೆ. '777 ಚಾರ್ಲಿ' ಪೋಸ್ಟ್ ಹಾಕಿದ್ದಕ್ಕೆ ರಶ್ಮಿಕಾ ಮಂದಣ್ಣರನ್ನು ಎಳೆದು ತಂದಿದ್ದಾರೆ. ಇತ್ತೀಚೆಗೆ ರಶ್ಮಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಬೇಸರದಲ್ಲಿ ರಕ್ಷಿತ್ ಶೆಟ್ಟಿ ಶ್ವಾನದೊಂದಿಗೆ ಇರುವ ಫೋಟೊವನ್ನು ಪೋಸ್ಟ್ ಮಾಡಿರಬಹುದೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. "ಒಬ್ಬರು ಮತ್ತೆ ಮತ್ತೆ ಹೇಳುತ್ತಿದ್ದೇನೆ ಬ್ರೋ.. ವ್ಯಕ್ತಿಗಿಂತ ನಾಯಿಗೆ ನೀಯತ್ತು ಜಾಸ್ತಿ" ಎಂದಿದ್ದಾರೆ. "ಇನ್ನೊಬ್ಬರು ನಿಮ್ಮ ಕಮ್‌ ಬ್ಯಾಕ್ ಸರಿಯಾದ ಉತ್ತರ" ಎಂದು ಕಾಮೆಂಟ್ ಮಾಡಿದ್ದಾರೆ. " ಹೌದು.. ರಿಚರ್ಡ್ ಆಂಟನಿಯಿಂದಲೇ ಅವರ ಕಮ್‌ ಬ್ಯಾಕ್ ಆಗೋದು ಗ್ಯಾರಂಟಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಶ್ವಾನದೊಂದಿಗೆ ಇರುವ '777 ಚಾರ್ಲಿ'ಯ ಫೋಟೊವನ್ನು ಹಾಕಿದ್ದು ಇದೇ ಕಾರಣಕ್ಕೆ ಹಲವರ ನಂಬಿಕೆ. ಆದರೆ, ರಕ್ಷಿತ್ ಯಾಕೆ ಪೋಸ್ಟ್ ಮಾಡಿದರು? ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಇದರ ಹಿಂದಿನ ಉದ್ದೇಶ ಇನ್ನೂ ಹೊರಬಿದ್ದಿಲ್ಲ. ನೆಟ್ಟಿಗರು ಇಷ್ಟೆಲ್ಲ ಕಾಮೆಂಟ್ ಮಾಡಿದರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. ಇದು ರಿಲೀಸ್ ಡೇಟ್ ಕೂಡ ಅಲ್ಲ. ಹೀಗಾಗಿ ರಕ್ಷಿತ್ ಶೆಟ್ಟಿಯೇ ಹೇಳುವವರೆಗೂ ಈ ಪೋಸ್ಟ್‌ನ ಉದ್ದೇಶ ಏನು ಅನ್ನೋದು ಗುಟ್ಟಾಗಿಯೇ ಇರುತ್ತೆ.

More from Filmibeat

English summary
Decoding Rakshit Shetty shared 777 Charlie movie image in social media. Some people thinking it is befitting replay to Rashmika Mandanna marriage. Some people thinking he is doing 777 Charlie 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X