ದೀಪಿಕಾ ದಾಸ್ ಅಮ್ಮನಿಗೆ ಕಿಡಿಗೇಡಿಯಿಂದ ಬೆದರಿಕೆ; ಪುನೀತ್ ಸಮಾಧಿಗೆ ಬಂದು ಆಣೆ ಮಾಡುವಂತೆ ಒತ್ತಡ

ಬೆಂಗಳೂರು; ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ದೀಪಿಕಾ ತಾಯಿ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಿಡಿಗೇಡಿಗಳಿಗಾಗಿ ಬಲೆ ಬೀಸಿದ್ದಾರೆ.

ದೀಪಿಕಾ ದಾಸ್ ಕೆಲವು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್ ಎಂಬುವವರನ್ನು ವಿವಾಹವಾಗಿದ್ದರು. ಇವರ ಮೇಲೂ ಕಿಡಿಗೇಡಿಗಳು ಆರೋಪ ಮಾಡಿದ್ದರು. ನಟಿ ದೀಪಿಕಾ ದಾಸ್ ಹಾಗೂ ಅವರ ಅಮ್ಮ ಪದ್ಮಲತಾ ಅವರಿಗೆ ಫೋನ್ ಮಾಡಿ ಆರೋಪ ಮಾಡಿದ್ದು, ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ.

Deepika Das Mother filed complaint in Madanayakanahalli police station against a man for threatening

ಕೆಲವು ದಿನಗಳಿಂದ ಕಿಡಿಗೇಡಿ ಪೋನ್ ಮೂಲಕ ಬೆದರಿಕೆ ಹಾಕುತ್ತಿದ್ದು ತನ್ನ ಮಗಳು ದೀಪಿಕಾ ದಾಸ್ ಹಾಗೂ ಅಳಿಯ ದೀಪಕ್ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ ಎಂದು ಪದ್ಮಲತಾ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾದನಾಯಕಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ವರದಿ ಆಗಿವೆ. ಆದರೆ, ಕಿಡಿಗೇಡಿ ಪುನೀತ್ ರಾಜ್‌ಕುಮಾರ್ ಸಮಾಧಿ ಬಗ್ಗೆ ಆಣೆ ಮಾಡುವಂತೆ ಒತ್ತಡ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಸಲಿ ಈ ಘಟನೆ ಬಗ್ಗೆ ನೋಡುವುದಾದರೆ..

ಅಪರಿಚಿತ ವ್ಯಕ್ತಿಯೊಬ್ಬ ದೀಪಿಕಾ ದಾಸ್ ಅವರ ಅಮ್ಮ ಪದ್ಮಲತಾ ಅವರಿಗೆ ನಿರಂತರವಾಗಿ ಕರೆ ಮಾಡಿ ಅಳಿಯ ದೀಪಿಕ್ ಕುಮಾರ್ ಬಗ್ಗೆ ದೂರಿದ್ದಾನೆ. ಬಳಿಕ ದೀಪಿಕಾ ದಾಸ್‌ಗೂ ಕರೆ ಮಾಡಿ, ಪತಿಯ ಬಗ್ಗೆ ಇದೇ ಕಂಪ್ಲೇಟ್ ಮಾಡಿದ್ದಾನೆ. ಅಲ್ಲದೆ ಮಾಧ್ಯಮಗಳ ಮುಂದೆ ಈ ವಿಚಾರ ತಂದು ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ ಎಂದು ಕಿಡಿಗೇಡಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅಷ್ಟಕ್ಕೂ ದೀಪಿಕಾ ದಾಸ್ ಅಮ್ಮ ಪದ್ಮಲತಾ ದೂರಿನಲ್ಲಿ ನೀಡಿದ ಹೇಳಿಕೆಯ ಅಂಶಗಳು ಹೀಗಿವೆ. ತನ್ನ ಮಗಳು ದೀಪಿಕಾದಾಸ್ ಸಿನಿಮಾ ನಟಿಯಾಗಿದ್ದಾರೆ. ಅವರು 8 ತಿಂಗಳ ಹಿಂದೆ ದೀಪಕ್ ಕುಮಾರ್ ಎಂಬುವವರ ಜೊತೆ ವಿವಾಹವಾಗಿದ್ದಾರೆ. ಒಂದು ತಿಂಗಳ ಹಿಂದೆ ಅವರು ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಪೋನ್ ಮೂಲಕ ಬೆದರಿಕೆ ಹಾಕಿದ್ದಾನೆ. ನಿಮ್ಮ ಅಳಿಯ ಅಕ್ರಮವಾಗ ಬಡಾವಣೆಗಳನ್ನು ಮಾಡಿ, ಜನರಿಗೆ ಮೋಸ ಮಾಡಿದ್ದಾನೆ. ಈ ಸಂಬಂಧ ಜೈಲಿಗೆ ಕೂಡ ಹೋಗಿದ ಬಂದಿದ್ದಾನೆ. ನಿಮ್ಮ ಮಗಳನ್ನು ಈತನಿಗೆ ಕೊಟ್ಟು ಯಾಕೆ ಮದುವೆ ಮಾಡಿದ್ದೀರಿ ಎಂದು ಹೇಳಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

Deepika Das Mother filed complaint in Madanayakanahalli police station against a man for threatening

ಇಷ್ಟ ಅಲ್ಲದೇ ಕಿಡಿಗೇಡಿ ದೀಪಿಕಾ ದಾಸ್‌ಗೂ ಕರೆ ಮಾಡಿದ್ದು, "ನಿಮ್ಮ ಪತಿ ಅಕ್ರಮವಾಗಿ ಬಡಾವಣೆಗಳನ್ನು ಮಾಡಿ ಜನರಿಗೆ ಮೋಸ ಮಾಡಿದ್ದು ನಿಮಗೆ ಗೊತ್ತಿಲ್ವಾ?" ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ದೀಪಿಕಾ ದಾಸ್ ಈ ಆರೋಪಗಳು ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದರು. ಆಗ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಬಂದು ಆಣೆ ಮಾಡುವಂತೆ ಹೇಳಿದ್ದ. ಈ ವಿಚಾರಕ್ಕೆ ಅವರ ಹೆಸರನ್ನು ತರಬೇಡಿ. ಕಾನೂನಾತ್ಮಕವಾಗಿ ದೂರು ನೀಡುವಂತೆ ಹೇಳಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ಆ ವ್ಯಕ್ತಿ ನಿಮ್ಮ ಹೆಸರಿಗೆ ಧಕ್ಕೆ ತರುವುದಾಗಿ ಹೇಳಿದ್ದಾನೆ. ಹಾಗೆ ಹಣ ನೀಡಿ ಇಲ್ಲಿದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪದ್ಮಲತಾ ದೂರಿನಲ್ಲಿ ತಿಳಿಸಿದ್ದಾರೆ. ದೀಪಿಕಾ ದಾಸ್ ಅಮ್ಮ ಪದ್ಮಲತಾಗೆ ಪೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಬೆನ್ನಲ್ಲೆ ಪೊಲೀಸರು ದೂರನ್ನು ದಾಖಲಿಸಿಕೊಂಡು ಆ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

More from Filmibeat

English summary
Deepika Das Mother filed complaint in Madanayakanahalli police station against man a for threatening;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X