»   » ಮತ್ತೊಂದು ಭರ್ಜರಿ ಡೀಲಿಗೆ ಸಹಿ ಹಾಕಿದ ದೀಪಿಕಾ?

ಮತ್ತೊಂದು ಭರ್ಜರಿ ಡೀಲಿಗೆ ಸಹಿ ಹಾಕಿದ ದೀಪಿಕಾ?

Posted By:
Subscribe to Filmibeat Kannada

ಯಶಸ್ಸಿನ ಬೆನ್ನೇರಿ ಓಡುತ್ತಿರುವ ಕರಾವಳಿ ಮೂಲದ ಚೆಲುವೆ ದೀಪಿಕಾ ಪಡುಕೋಣೆ ಹಿಂದಿ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಡಿದಷ್ಟು ಸದ್ದು ಬೇರೆ ಯಾವ ನಟಿಯರೂ ಮಾಡಿರಲಿಕ್ಕಿಲ್ಲ.

ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ದೀಪಿಕಾ, ಸಂಜಯ್ ಲೀಲಾ ಭನ್ಸಾಲಿ ಅವರ ಮುಂದಿನ ಚಿತ್ರ 'ಬಾಜಿರಾವ್ ಮಸ್ತಾನಿ' ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡುತ್ತಿತ್ತು,

ಈಗ ದೀಪೀಕಾಳ ಇನ್ನೊಂದು ಭರ್ಜರಿ ಡೀಲಿನ ಬಗ್ಗೆ ವರದಿಯಾಗಿದೆ. ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ಅತಿದೊಡ್ಡ ಹೆಸರಾದ ಆಕ್ಸಿಸ್ ಬ್ಯಾಂಕಿನ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ. ಈ ಸಂಬಂಧ ಬುಧವಾರ ( ಜೂ 4) ಬ್ಯಾಂಕ್ ಜೊತೆ ಒಡಂಬಡಿಕೆಗೂ ಸಹಿ ಹಾಕಿದ್ದಾರೆ. (ಬಾಲಿವುಡ್ ಜಗತ್ತಿನ 10 ಬಿಕಿನಿ ಸುಂದರಿಯರು)

ಬ್ಯಾಂಕ್ ಜೊತೆಗಿನ ಒಡಂಬಡಿಕೆಗೆ ದೀಪಿಕಾ ಪಡುಕೋಣೆ ಪಡೆದುಕೊಂಡ ಸಂಭಾವನೆಯ ಮೊತ್ತ ನಿಖರವಾಗಿ ತಿಳಿದಿಲ್ಲವಾದರೂ, ಭಾರೀ ಮೊತ್ತವನ್ನು ಪಡೆದಿರುವ ಸಾಧ್ಯಯತೆಯಿದೆ ಎಂದು ಜೀನ್ಯೂಸ್ ವರದಿ ಮಾಡಿದೆ.

ಬ್ಯಾಂಕ್ ಪ್ರಮುಖ ಪಾತ್ರ

ಆಕ್ಸಿಸ್ ಬ್ಯಾಂಕಿನ ಹೊಸ ಅಭಿಯಾನದಲ್ಲಿ ದೀಪಿಕಾ ಪಾಲ್ಗೊಳ್ಳಲಿದ್ದಾರೆ. ಈ ಸುದ್ದಿಯನ್ನು ಖಚಿತ ಪಡಿಸಿರುವ ದೀಪಿಕಾ, ಬ್ಯಾಂಕ್ ಅನ್ನುವುದು ಪ್ರತಿಯೊಬ್ಬನ ಬದುಕಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬ್ಯಾಂಕೊಂದರ ರಾಯಭಾರಿಯಾಗಿರುವುದು ನನಗೆ ತೀವ್ರ ಸಂತಸ ತಂದಿದೆ ಎಂದಿದ್ದಾರೆ.

ಮಹಿಳೆಯಾಗಿ ಸಂತೋಷ ತಂದಿದೆ

ತನ್ನ ರಾಯಭಾರಿಯನ್ನಾಗಿ ಬ್ಯಾಂಕ್ ಮಹಿಳೆಯೊಬ್ಬಳನ್ನು ಆರಿಸಿದ್ದು ಸಂತೋಷದ ವಿಚಾರ. ಯಾವುದೇ ಉದ್ಯಮದಲ್ಲಿ ಗಂಡಾಗಲಿ ಅಥವಾ ಹೆಣ್ಣಾಗಲಿ ಪಾರುಪತ್ಯ ಸ್ಥಾಪಿಸಬಾರದು - ದೀಪಿಕಾ

ದೀಪಿಕಾ ಬೆಳೆದು ಬಂದಿದ್ದು

ಬ್ಯಾಡ್ಮಿಂಟನ್ ಆಟಗಾರನ ಮಗಳಾಗಿ ಚಿತ್ರರಂಗದಲ್ಲಿ ದೀಪಿಕಾ ಬೆಳೆದು ಬಂದ ರೀತಿ ಮೆಚ್ಚುವಂತದ್ದು. ಆಕೆಯ ಕಠಿಣ ಶ್ರಮ, ಕೆಲಸದಲ್ಲಿನ ನಿಷ್ಠೆಗಾಗಿ ಬ್ಯಾಂಕ್ ಆಕೆಯನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ - ರಾಜೀವ್ ಆನಂದ್, ಅಧ್ಯಕ್ಷರು (Axis Bank, Retail Banking)

ಗೌರಿ ಶಿಂಧೆ

ದೀಪಿಕಾ ಪಡುಕೋಣೆ ಪಾಲ್ಗೊಳ್ಳುವ ಬ್ಯಾಂಕಿನ ಅಭಿಯಾನವನ್ನು 'ಇಂಗ್ಲಿಶ್ ವಿಂಗ್ಲಿಶ್' ಚಿತ್ರದ ನಿರ್ದೇಶಕ ಗೌರಿ ಶಿಂಧೆ ನಿರ್ದೇಶಿಸಲಿದ್ದಾರೆ.

ಸಂಜಯ್ ಲೀಲಾ ಭನ್ಸಾಲಿ

ಸಂಜಯ್ ಲೀಲಾ ಭನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಚಿತ್ರಕ್ಕಾಗಿ ದೀಪಿಕಾ ಎಂಟು ಕೋಟಿ ಎಣಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಸಾಲು ಸಾಲು ಹಿಟ್ ಚಿತ್ರಗಳು, ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ದೀಪಿಕಾಗೆ ಸುಲಭವಾಗಿ ಈ ಭಾರೀ ಬಜೆಟಿನ ಚಿತ್ರ ದಕ್ಕಿದೆ.

English summary
Bollywoods blockbuster actress Deepika Padukone was Wednesday (June 4) signed on to endorse Axis Bank.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada