ಪಂಜಾಬಿ ಸಿಂಗರ್‌ಗೆ ಕನ್ನಡ ಹೇಳಿಕೊಟ್ಟ ಕನ್ನಡದ ಮಗಳು: ದೀಪಿಕಾ ಪಡುಕೋಣೆ ನಡೆಗೆ ಕನ್ನಡಿಗರು ದಿಲ್ ಖುಷ್

ನಿನ್ನೆ (ಡಿಸೆಂಬರ್ 6) ಇಬ್ಬರು ಬಾಲಿವುಡ್ ಸ್ಟಾರ್‌ಗಳು ಬೆಂಗಳೂರಿನಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಅವರು ಮತ್ಯಾರೂ ಅಲ್ಲ ಪಂಜಾಬಿ ಹಾಗೂ ಹಿಂದಿ ಗಾಯಕ ದಿಲ್ಜಿತ್ ದೋಸಾಂಜ್. ಮತ್ತೊಬ್ಬರು ಕನ್ನಡತಿ, ಬಾಲಿವುಡ್‌ನ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ. ಇವರಿಬ್ಬರೂ ಸೇರಿ ಕನ್ನಡಿಗರ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೂಪರ್‌ ಹಿಟ್ ಹಾಡುಗಳನ್ನು ಕೊಟ್ಟಿರುವ ದಿಲ್ಜಿತ್ ದೋಸಾಂಜ್‌ ಬೆಂಗಳೂರಿನಲ್ಲಿ ದಿಲ್‌-ಲುಮಿನಾಟ್‌ ಕಾನ್ಸರ್ಟ್ ಅನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ದಿಲ್ಜಿತ್ ತನ್ನ ಹಾಡುಗಳಿಂದ ಕನ್ನಡಿಗರನ್ನು ರಂಜಿಸಿದ್ದಾರೆ. ಅವರೊಂದಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಸಂಗೀತ ಪ್ರೇಮಿಗಳಿಗೆ ಡಬಲ್ ಖುಷಿಯಾಗಿತ್ತು.

Deepika Padukone taught Kannada to Punjabi singer Diljit Dosanjh in Bengaluru

ಇದೇ ವೇದಿಕೆ ಮೇಲೆ ಈ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್‌ಗೆ ದೀಪಿಕಾ ಪಡುಕೋಣೆ ಕನ್ನಡ ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದೀಪಿಕಾ ಪಡುಕೋಣೆಗೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ದೀಪಿಕಾ ಪಡುಕೋಣೆ ಕನ್ನಡ ಹೇಗಿದೆ? ಏನು ಹೇಳಿಕೊಟ್ಟರು ಅನ್ನೋದು ತಿಳಿಯಲು ಮುಂದೆ ಓದಿ.

ನಿನ್ನೆ (ಡಿಸೆಂಬರ್ 6) ಈ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ತನ್ನ ಎಕ್ಸ್‌ ಖಾತೆಯಲ್ಲಿ ಬೆಂಗಳೂರಿನ ಐಕಾನಿಕ್ ದಿ ರಾಮೇಶ್ವರಂ ಕೆಫೆಯ ವಿಡಿಯೋವನ್ನು ಹಂಚಿಕೊಂಡಿದ್ದರು. ದಕ್ಷಿಣ ಭಾರತದ ಜನಪ್ರಿಯ ರೆಸ್ಟೋರೆಂಟ್ ದಿ ರಾಮೇಶ್ವರಂ ಕೆಫೆಗೆ ಭೇಟಿ ಕೊಟ್ಟು ತಟ್ಟೆ ಇಡ್ಲಿ, ಮಸಾಲಾ ದೋಸೆ ಹಾಗೂ ಫಿಲ್ಟರ್ ಕಾಫಿಯನ್ನು ಸವಿದಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

ಗಾಯಕ ದಿಲ್ಜಿತ್ ದೋಸಾಂಜ್ ಭಾರತದ ಪ್ರಮುಖ ನಗರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ದಿಲ್‌-ಲುಮಿನಾಟ್‌ ಎಂಬ ಹೆಸರಿನಲ್ಲಿ ಕಾನ್ಸರ್ಟ್‌ ಮಾಡುತ್ತಿದ್ದಾರೆ. ಈಗಾಗಲೇ ಪುಣೆ, ಕೋಲ್ಕತ್ತಾ, ಲಕ್ನೋ, ಹೈದರಾಬಾದ್‌ನಲ್ಲಿ ಕಾನ್ಸರ್ಟ್ ಮಾಡಿದ್ದು, ನಿನ್ನೆ (ಡಿಸೆಂಬರ್ 6) ಬೆಂಗಳೂರಿನಲ್ಲಿ ಇದೇ ಕಾನ್ಸರ್ಟ್ ಅನ್ನು ಹಮ್ಮಿಕೊಂಡಿದ್ದರು. ಈ ಸಂಗೀತ ಸಂಜೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಭಾಗವಹಿಸಿದ್ದರು.

ಈ ವೇಳೆ ಗಾಯಕ ದಿಲ್ಜಿತ್ ದೋಸಾಂಜ್ ಬಾಲಿವುಡ್ ನಟಿ ಕನ್ನಡತಿ ದೀಪಿಕಾ ಪಡುಕೋಣೆಯನ್ನು ವೇದಿಕೆ ಆಹ್ವಾನಿಸಿದ್ದರು. ದೀಪಿಕಾ ಪಡುಕೋಣೆ ನೋಡಿ ಡಬಲ್ ಖುಷಿಯಲ್ಲಿ ಇದ್ದ ಆಡಿಯನ್ಸ್‌ಗೆ ಮತ್ತೊಂದು ಖುಷಿ. ಸೂಪರ್ ಹಿಟ್ ಪಂಜಾಬಿ ಹಾಗೂ ಹಿಂದಿ ಹಾಡುಗಳ ಗಾಯಕ ತಮಗೆ ಕನ್ನಡ ಹೇಳಿಕೊಡುವಂತೆ ಮನವಿ ಮಾಡಿದ್ದರು. ಆಗ ದೀಪಿಕಾ ಪಡುಕೋಣೆ ನಾನು ಕನ್ನಡವನ್ನು ಸ್ಕೂಲ್‌ನಲ್ಲಿ ಕಲಿತಿದ್ದೇನೆ ಎಂದು ಹೇಳಿದ್ದರು. ಹಾಗೇ ದಿಲ್ಜಿತ್‌ಗೆ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿಕೊಟ್ಟಿದ್ದಾರೆ. ಇವರಿಬ್ಬರ ಈ ಸಂಭಾಷಣೆ ಈಗ ವೈರಲ್ ಆಗುತ್ತಿದೆ.

ದೀಪಿಕಾ ಪಡುಕೋಣೆಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪೇಂದ್ರ ಜೊತೆ ದೀಪಿಕಾ ನಟಿಸಿದ 'ಐಶ್ವರ್ಯ' ಸಿನಿಮಾವನ್ನು ಕನ್ನಡಿಗರು ನೆನಪಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ಗೆ ಕಾಲಿಡುವುದಕ್ಕೂ ಮುನ್ನ ದೀಪಿಕಾ ಕನ್ನಡದಲ್ಲಿ ನಾಯಕಿಯಾಗಿ ನಟಿಸಿದ್ದರು. ಇನ್ನು ಈ ವಿಡಿಯೋ ವೈರಲ್ ಆದ ಬಳಿಕ ದೀಪಿಕಾ ಪಡುಕೋಣೆಗೆ ಕನ್ನಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ಗೆ ಹಾರಿದರೂ ಕನ್ನಡ ಮರೆತಿಲ್ಲ ಅಂತ ಹಾಡಿ ಹೊಗಳುತ್ತಿದ್ದಾರೆ.

More from Filmibeat

English summary
Deepika Padukone taught Kannada to Punjabi singer Diljit Dosanjh in Bengaluru;
Read more about: deepika padukone kannada singer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X