ನೈಲ್ ಪಾಲಿಶ್‌ನಲ್ಲಿ ಮೂಡಿದ ಯಶ್, ಕೆಜಿಎಫ್ 2: ದೆಹಲಿ ಯುವತಿಯ ಅಭಿಮಾನ ಪ್ರದರ್ಶನ
ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಬಿಡುಗಡೆಗೆ ದೇಶದಾದ್ಯಂತ ಅಭಿಮಾನಿಗಳು ಕಾದಿದ್ದಾರೆ. ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿದೆ. ಆದರೆ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಬಹುದು ಎನ್ನಲಾಗುತ್ತಿದೆ. ಲಾಕ್ ಡೌನ್ ಕಾರಣದಿಂದ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಹೀಗಾಗಿ ಅನೇಕ ಚಿತ್ರಗಳು ಈ ವರ್ಷ ತೆರೆ ಕಾಣುವುದೇ ಅನುಮಾನವಾಗಿದೆ.
Recommended Video
ಇನ್ನೊಂದು ಎರಡು ತಿಂಗಳಲ್ಲಿ ಚಿತ್ರೀಕರಣ ಮುಗಿಸಲು ಸಾಧ್ಯವಾದರೂ ನಿಗದಿಯಾದ ದಿನಾಂಕದಂದೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿದೆ. ಈ ನಡುವೆ ಹಾಡುಗಳ ತಯಾರಿ ಕಾರ್ಯ ಕೂಡ ಆರಂಭವಾಗಿದೆ. ಭಾರತೀಯ ಚಿತ್ರರಂಗ ಕಾತರದಿಂದ ಎದುರು ನೋಡುತ್ತಿರುವ ಕೆಲವು ಸಿನಿಮಾಗಳಲ್ಲಿ ಕೆಜಿಎಫ್ ಚಾಪ್ಟರ್ 2 ಒಂದು. ಮುಂದೆ ಓದಿ...

ಅಭಿಮಾನ ಪ್ರದರ್ಶನ
ಅಭಿಮಾನಿಗಳು ಸ್ಟಾರ್ ನಟ ಮತ್ತು ಅವರ ಚಿತ್ರಗಳ ಕುರಿತಾದ ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಕೆಲವರು ಅವರ ಹೆಸರು, ಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರು ರೇಖಾಚಿತ್ರ ಬರೆದು ಖುಷಿಪಡುತ್ತಾರೆ. ದೆಹಲಿಯ ರಿದಮ್ ಅಹ್ಲುವಾಲಿಯಾ ಎಂಬ ಮಹಿಳೆ ನೈಲ್ ಪಾಲಿಶ್‌ನಲ್ಲಿ ತಮ್ಮ ಅಭಿಮಾನ ಮೆರೆದಿದ್ದಾರೆ.

ರೋಮಾಂಚನಕಾರಿ ಚಿತ್ರ
'ಕೆಜಿಎಫ್ ಚಿತ್ರದ ಚಾಪ್ಟರ್ 2ಗೆ ಯಾರೆಲ್ಲಾ ಕಾದಿದ್ದೀರಿ? ಮೊದಲ ಭಾಗವನ್ನು ಬಹಳ ಚೆನ್ನಾಗಿ ನಿರ್ದೇಶಿಸಿ ಪ್ರದರ್ಶಿಸಲಾಗಿತ್ತು. ಹೀಗಾಗಿ ಪ್ರತಿ ದೃಶ್ಯದಲ್ಲಿಯೂ ರೋಮಾಂಚನ ಮೂಡುತ್ತಿತ್ತು' ಎಂದು ಅವರು ಹೇಳಿದ್ದಾರೆ.

ನೋಡಲೇಬೇಕಾದ ಚಿತ್ರ
'ರಾಕಿ ಭಾಯ್ ಅಲಿಯಾಸ್ ಯಶ್ ಅವರ ನಟನೆಯ ಬೆಂಕಿಯಂತೆ ಪ್ರಖರವಾಗಿತ್ತು. ಹೀಗಾಗಿ ಕೆಜಿಎಫ್ ಚಾಪ್ಟರ್ 2 ನೋಡಲೇಬೇಕಾದ ಚಿತ್ರ' ಎಂದು ಟ್ವಿಟ್ಟರ್‌ನಲ್ಲಿ ಅವರು ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

ಉಗುರಿನ ಮೇಲೆ ಯಶ್ ಚಿತ್ರ
ಒಂದು ಉಗುರಿನ ಮೇಲೆ ಅವರು ಕೆಜಿಎಫ್ ಚಾಪ್ಟರ್ 2 ಎಂದು ಚಿತ್ರದ ಹೆಸರನ್ನು ಬರೆದಿದ್ದಾರೆ. ಈ ನೈಲ್ ಪಾಲಿಶ್‌ನಲ್ಲಿ ಬಳಸಿರುವ ಬಣ್ಣ, ಕೆಜಿಎಫ್ ಚಿತ್ರದ ಪೋಸ್ಟರ್‌ನಲ್ಲಿ ಇದ್ದಂತೆಯೇ ಇದೆ. ಮತ್ತೊಂದು ಬೆರಳಿನ ಮೇಲೆ ಅವರು ಯಶ್ ಚಿತ್ರವನ್ನು ಬಿಡಿಸಿದ್ದು, ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.


Click it and Unblock the Notifications











