ಆಸ್ಪತ್ರೆಯಿಂದ ದೇವರಾಜ್ ಮತ್ತು ಪ್ರಜ್ವಲ್ ಡಿಸ್ಚಾರ್ಜ್: ಅಪಘಾತದ ಬಗ್ಗೆ ಏನಂದ್ರು.?
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರು ಜೊತೆ ಮಾತನಾಡಿದ ದೇವರಾಜ್ ಮತ್ತು ಪ್ರಜ್ವಲ್ ''ನಮಗೆ ಏನೂ ಆಗಿಲ್ಲ. ಎಲ್ಲವೂ ಸಣ್ಣ ಪುಟ್ಟ ಗಾಯಗಳು, ದರ್ಶನ್ ಅವರು ಒಂದೆರಡು ದಿನ ಆಸ್ಪತ್ರೆಯಲ್ಲಿ ಇರ್ತಾರೆ. ಅವರು ಆರಾಮಾಗಿದ್ದಾರೆ. ನಮ್ಮ ಬಗ್ಗೆ ಕಳಕಳಿ ತೋರಿದ ಎಲ್ಲರಿಗೂ ಧನ್ಯವಾದಗಳು'' ಎಂದು ಹೇಳಿದರು.
ಕಳೆದ ಭಾನುವಾರ ರಾತ್ರಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಡೈನಾಮಿಕ್ ಸ್ಟಾರ್ ದೇವರಾಜ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಸ್ನೇಹಿತ ರಾಯ್ ಆಂಟೋನಿ ಚಲಿಸುತ್ತಿದ್ದ ಆಡಿ ಕಾರು ಮೈಸೂರಿನ ಹಿನಕಲ್ ಬಳಿಯ ರಿಂಗ್ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿತ್ತು. ಹಾಗಿದ್ರೆ, ಅಪಘಾತದ ಬಗ್ಗೆ ನಟ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಏನಂದ್ರು.? ಮುಂದೆ ಓದಿ.....

ಸ್ನೇಹಿತರ ಮನೆಗೆ ಹೋಗಿದ್ವಿ
ಬರ್ತಡೇ ಪಾರ್ಟಿ ಎಲ್ಲ ಮಧ್ಯಾಹ್ನವೇ ಮುಗಿದು ಹೋಗಿತ್ತು. ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಹೋಗಿದ್ವಿ. ಬನ್ನಿ ಊಟ ಮಾಡೋಣ ಅಂತ ಕರೆದಿದ್ದರು. ಅದಕ್ಕೆ ಅಲ್ಲಿ ಹೋಗಿ ಬಂದ್ವಿ'' ಎಂದು ಹಿರಿಯ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಿಳಿಸಿದರು.

ನಾವು ಹಿಂದೆ ಕೂತಿದ್ವಿ
ರಾಯ್ ಆಂಟೋನಿ ಕಾರು ಚಾಲನೆ ಮಾಡುತ್ತಿದ್ದರು. ದರ್ಶನ್ ಮುಂದೆ ಕೂತಿದ್ದರು. ನಾನು ಮತ್ತು ಪ್ರಜ್ವಲ್ ಹಿಂದೆ ಕೂತಿದ್ವಿ ಎಂದು ದೇವರಾಜ್ ಅವರು ಮಾಧ್ಯಮಗಳ ಜೊತೆ ಹೇಳಿದ್ದಾರೆ. ಅಲ್ಲಿಗೆ ಕಾರು ಯಾರೂ ಚಾಲನೆ ಮಾಡುತ್ತಿದ್ದರು ಎಂಬುದರ ಬಗ್ಗೆ ಸ್ವತಃ ದೇವರಾಜ್ ಅವರೇ ಖಚಿತಪಡಿಸಿದ್ದಾರೆ.

ದರ್ಶನ್ ಜೊತೆ ಮಾತಾಡಿದೆ
ಅಪಘಾತವಾದ ಬಳಿಕ ನಾಲ್ಕು ಜನ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಮೂರಿಗೂ ಗಾಯಗಳಾಗಿದೆ. 'ದರ್ಶನ್ ಕೂಡ ಆರಾಮಾಗಿದ್ದಾರೆ. ಅವರ ಜೊತೆ ಮಾತಾನಾಡಿದ್ವಿ. ಏನೂ ಮಾಡೋಕೆ ಆಗಲ್ಲ. ಬ್ಯಾಡ್ ಟೈಂ ಅಂತ ಅನ್ಕೊಂಡ್ವಿ ಅಷ್ಟೇ' ಎಂದರು.

ಸ್ಕಿಡ್ ಆಗಿ ಅಪಘಾತ
ಅಪಘಾತವಾಗಲು ಬೇರೆ ಕಾರಣವಿರಬಹುದು. ಬೇರೆ ಏನೋ ನಡೆದಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಇದರ ಬಗ್ಗೆ ದೇವರಾಜ್ ಅವರು ಪ್ರತಿಕ್ರಯಿಸಿದ್ದು, ಸ್ಕಿಡ್ ಆಗಿ ಅಪಘಾತವಾಯಿತು ಅಷ್ಟೇ ಎಂದಿದ್ದಾರೆ. ಅಲ್ಲಿಗೆ ಒಂದು ಮಟ್ಟದ ಅನುಮಾನ ಬಗೆಹರಿದಿದೆ. ಆದ್ರೆ, ಅಪಘಾತದ ನಂತರವಾದ ಬೆಳವಣಿಗೆಗಳು ಕೆಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ.


Click it and Unblock the Notifications











