ಇಂದು ಸಂಜೆ ಆಸ್ಪತ್ರೆಯಿಂದ ದೇವರಾಜ್, ಪ್ರಜ್ವಲ್ ದೇವರಾಜ್ ಡಿಸ್ಚಾರ್ಜ್.?

By ಯಶಸ್ವಿನಿ.ಎಂ.ಕೆ

ಕಳೆದ ಭಾನುವಾರ ರಾತ್ರಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಡೈನಾಮಿಕ್ ಸ್ಟಾರ್ ದೇವರಾಜ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ತಾರೆಯರು ಮೈಸೂರಿನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿ ಬೆಂಗಳೂರಿಗೆ ವಾಪಸ್ ಆಗುವಾಗ ನಡೆಯಬಾರದ ಘಟನೆಯೊಂದು ನಡೆದೇ ಹೋಯ್ತು.

ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ, ದರ್ಶನ್, ದೇವರಾಜ್, ಪ್ರಜ್ವಲ್ ಪ್ರಯಾಣ ಮಾಡುತ್ತಿದ್ದ ಆಡಿ ಕಾರು ಪಲ್ಟಿ ಆಯ್ತು. ಅಪಘಾತದಲ್ಲಿ ದರ್ಶನ್ ಕೈ ಮೂಳೆ ಮುರಿದುಕೊಂಡರು. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಕೂಡ ಗಾಯಗೊಂಡರು.

ಸದ್ಯ ದರ್ಶನ್ ಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೀಗಾಗಿ, ಇನ್ನೂ ಒಂದೆರಡು ದಿನ ದರ್ಶನ್ ಆಸ್ಪತ್ರೆಯಲ್ಲೇ ಇರಬೇಕಾದ ಅವಶ್ಯಕತೆ ಇದೆ. ಇತ್ತ ದೇವರಾಜ್ ಹಾಗೂ ಪ್ರಜ್ವಲ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಇಂದು ಸಂಜೆ ಹೊತ್ತಿಗೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Devaraj and Prajwal Devaraj might get discharged by today evening

ಬಹುತೇಕ ಚೇತರಿಸಿಕೊಂಡಿರುವ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಇಂದು ಸಂಜೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಮನೆಗೆ ತೆರಳುವ ಸಾಧ್ಯತೆ ಇದೆ.

More from Filmibeat

English summary
Kannada Actor Devaraj and Prajwal Devaraj might get discharged from Columbia Asia Hospital, Mysuru by today evening.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X