Devil:'ಇದ್ರೆ ನೆಮ್ಮದಿಯಾಗ್ ಇರಬೇಕ್' ಬದಲು ಇನ್ನೊಂದು ಸಾಲು ಇತ್ತು..'ಕೆಡಿ'ಗೋಸ್ಕರ ಡ್ರಾಪ್ ಆಯ್ತು;ಏನದು ಸಾಲು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ 'ಡೆವಿಲ್' ಟೀಮ್ ಅದ್ಧೂರಿಯಾಗಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇನ್ನೇನು ಟ್ರೈಲರ್ ಅನ್ನೂ ರಿಲೀಸ್ ಮಾಡಲಿದೆ. ಅದಕ್ಕೂ ಮುನ್ನ ತಮ್ಮ ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ದರ್ಶನ್ ಬಿಟ್ಟು ಬಹುತೇಕ ಇಡೀ ತಂಡ ಮಾಧ್ಯಮಗಳ ಮುಂದೆ ಪ್ರಚಾರ ಆಗಿತ್ತು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲಿನಲ್ಲಿದ್ದಾರೆ. ಹೀಗಾಗಿ 'ಡೆವಿಲ್' ತಂಡಕ್ಕೆ ಸಿನಿಮಾ ಪ್ರಚಾರ ಮಾಡೋದು ಚಾಲೆಂಜ್. ದರ್ಶನ್ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಅಬ್ಬರ ಪ್ರಚಾರ ಆಗುತ್ತಿತ್ತು. ಅದೊಂದನ್ನು ತಂಡ ಮಿಸ್ ಮಾಡಿಕೊಳ್ಳುತ್ತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Devil movie director Milana Prakash revealed the details of two version of Idre Nemdiyaag Irbek song

'ಡೆವಿಲ್'ಗೆ ಆಕ್ಷನ್ ಕಟ್ ಹೇಳಿರೋದು ಮಿಲನ ಪ್ರಕಾಶ್. ಇಲ್ಲಿವರೆಗೂ 'ಡೆವಿಲ್' ಸಿನಿಮಾ ಬಗ್ಗೆ ಓಪನ್ ಆಗಿ ಮಾತಾಡಿರಲಿಲ್ಲ. ಆದರೆ, ಇಂದು (ಡಿಸೆಂಬರ್ 2) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಲನ ಪ್ರಕಾಶ್ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರ ಕೊಟ್ಟಿದ್ದಾರೆ. ಈ ವೇಳೆ ವೈರಲ್ ಆಗಿದ್ದ ದರ್ಶನ್ ಆಡಿಯೋದ ಸಾಲನ್ನೇ ಇಟ್ಕೊಂಡು "ಇದ್ರೆ ನೆಮ್ಮದಿಯಾಗ್ ಇರ್ಬೇಕ್" ಹಾಡಿನ ಸಾಲು ರಚಿಸಿದ್ದೇಕೆ? ಇದು ಉದ್ದೇಶಪೂರ್ವಕವಾಗಿ ಬರೆದಿದ್ದಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಮಿಲನಾ ಪ್ರಕಾಶ್ ಇಂಟ್ರೆಸ್ಟಿಂಗ್ ವಿಷಯ ಒಂದನ್ನು ರಿವೀಲ್ ಮಾಡಿದ್ದಾರೆ.

"ನನಗೆ ಗೊತ್ತೇ ಇರಲಿಲ್ಲ"

ಹಿಂದೊಮ್ಮೆ ದರ್ಶನ್ ಇದ್ರೆ "ನೆಮ್ಮದಿಯಾಗ್ ಇರ್ಬೇಕ್" ಎಂದು ಮಾತಾಡಿದ್ದ ವಿವಾದಾತ್ಮಕ ಆಡಿಯೋ ವೈರಲ್ ಆಗಿತ್ತು. ಅದೇ ಸಾಲು 'ಡೆವಿಲ್' ಸಿನಿಮಾದ ಹಾಡಾಗಿದೆ. ದರ್ಶನ್ ಎರಡನೇ ಜೈಲು ಸೇರುವುದಕ್ಕೂ ಮುನ್ನ ಈ ಹಾಡು ರಿಲೀಸ್ ಆಗಿತ್ತು. ಅದಕ್ಕೆ ಉದ್ದೇಶ ಪೂರ್ವಕವಾಗಿಯೇ ಈ ಹಾಡನ್ನು ಇಟ್ಟಿದ್ದೀರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಪ್ರಕಾಶ್ ಕೊಟ್ಟ ಉತ್ತರ ಹೀಗಿತ್ತು. "ದರ್ಶನ್ ಒಂದು ವಿಚಾರದಲ್ಲಿ ರೇಗಿಸುತ್ತಿರುತ್ತಾರೆ. ನೀನು ಸಿನಿಮಾ ಮಾಡುತ್ತೀಯಾ. ಮತ್ತೆ ಕಟ್ ಆಫ್ ಆಗುತ್ತೀಯ. ನಿನ್ನ ಪಾಡಿಗೆ ಎಲ್ಲೋ ಇರುತ್ತೀಯ. ಮತ್ತೆ ಬರುತ್ತೀಯ. ಸಿನಿಮಾ ಮಾಡುತ್ತೀಯ ಅಂತ ಅದು ಸತ್ಯ. ಇದ್ದರೆ ನೆಮ್ಮದಿಯಾಗ್ ಇರಬೇಕು ಅನ್ನೋದರ ಹಿಂದೆ ಕಥೆ ಇದೆ ಅನ್ನೋದೇ ನನಗೆ ಗೊತ್ತಿರಲಿಲ್ಲ. ಅನಿರುದ್ಧ್ ಅವರು ಅದನ್ನು ಬರೆದು ಕಳಿಸಿ, ಚೆನ್ನಾಗಿದೆ ಅಂತ ಎಲ್ಲಾ ಶುರು ಮಾಡಿದಾಗಲೇ ವಿಷಯ ಹೀಗಿದೆ ಅಂತ ನನಗೆ ಗೊತ್ತಾಗಿದ್ದು." ಎನ್ನುತ್ತಾರೆ ಮಿಲನ ಪ್ರಕಾಶ್.

"ಇನ್ನೊಂದು ಸಾಲು ಇತ್ತು"

ಈ ಹಾಡಿಗೆ ಇನ್ನೊಂದು ಸಾಲನ್ನು ಸಿನಿ ಸಾಹಿತಿ ಅನಿರುದ್ಧ್ ಬರೆದು ಕೊಟ್ಟಿದ್ದರು. ಆದರೆ, ಅದನ್ನು ಬಳಸಿಕೊಳ್ಳಲಿಲ್ಲ."ಈ ಕ್ಯಾರೆಕ್ಟರ್‌ಗೆ, ಈ ಸಾಂಗ್‌ಗೆ ತುಂಬಾ ಚೆನ್ನಾಗಿ ಕೂರುತ್ತಿತ್ತು. ಅನಿರುದ್ಧ್ ಬರೆದು ಕಳಿಸಿದರು. ನನಗೆ ಇಷ್ಟ ಆಯ್ತು. ನಾನು ಓಕೆ ಮಾಡಿದೆ. ಅಲ್ಲಿ ಎರಡು ಸಾಲುಗಳಿದ್ದವು. ಇದ್ರೆ ನಿಮ್ಮದಿಯಾಗ್ ಇರ್ಬೇಕ್ ಅಂತ ಒಂದಿತ್ತು. ಎಲ್ಲಾ ಶಿವನಾಟ ಕಣೋ ಅಂತ ಒಂದಿತ್ತು." ಎಂದು ಕ್ಲಾರಿಟಿ ಕೊಡುತ್ತಾರೆ ಮಿಲನ ಪ್ರಕಾಶ್.

Devil movie director Milana Prakash revealed the details of two version of Idre Nemdiyaag Irbek song

ಕೆಡಿಗಾಗಿ ಕೈ ಬಿಟ್ಟ ಶಿವನ ಸಾಲು

"ಎಲ್ಲಾ ಶಿವನಾಟ ಕಣೋ.." ಸಾಲು ಇತ್ತು. ಇವರೆಡದಲ್ಲಿ ಯಾವುದು ಫೈನಲ್ ಆಗುತ್ತಿತ್ತೋ ಗೊತ್ತಿಲ್ಲ. ಆದರೆ, ಶಿವ ಸಾಂಗ್ ಕೈ ಬಿಡೋಕೆ ಕಾರಣ ಧ್ರುವ ಸರ್ಜಾ 'ಕೆಡಿ' ಸಿನಿಮಾ. ಈ ಸಿನಿಮಾದಲ್ಲಿ ಶಿವನ ಕುರಿತಾದ ಸಾಂಗ್ ಇದೆ. ಕಾರಣಕ್ಕೆ ಕೊನೆಯಲ್ಲಿ "ಇದ್ರೆ ನೆಮ್ಮದಿಯಾಗ್ ಇರಬೇಕ್" ಸಾಲನ್ನು ಆಯ್ಕೆ ಮಾಡಿಕೊಳ್ಳಲಾಯ್ತು. "ಕೆಡಿ'ಯಲ್ಲಿ ಶಿವನದ್ದು ಒಂದು ಹಾಡು ಇದ್ದಿದ್ದರಿಂದ 'ಇದ್ರೆ ನೆಮ್ಮದಿಯಾಗ್ ಇರಬೇಕ್' ಹಾಡನ್ನು ಆಯ್ಕೆ ಮಾಡಿಕೊಂಡ್ವಿ." ಎಂದಿದ್ದಾರೆ.

ಡಿಸೆಂಬರ್‌ಗೆ ಯಾಕೆ ರಿಲೀಸ್?

ದರ್ಶನ್ ಜೈಲಿನಿಂದ ಹೊರ ಬರೋದಕ್ಕೆ ಕಾಯಬಹುದಿತ್ತಲ್ಲ ಎಂಬ ಪ್ರಶ್ನೆ ಕೂಡ ಕೇಳಲಾಯ್ತು. ಅದಕ್ಕೆ ದರ್ಶನ್ ಅವರೇ ಒಪ್ಪಲಿಲ್ಲ ಎಂದು ಮಿಲನ ಪ್ರಕಾಶ್ ಹೇಳಿದ್ದಾರೆ. "ದರ್ಶನ್ ಅವರೇ ರೆಡಿಯಿರಲಿಲ್ಲ. ಅವರು ಅಕ್ಟೋಬರ್‌ಗೆ ಬರೋಣ ಅಂತಿದ್ದರು. ಆದರೆ, ನಮಗೆ ವಿಎಫ್‌ಎಕ್ಸ್ ವರ್ಕ್ ಇರಬಹುದು, ಪೋಸ್ಟ್ ಪ್ರೊಡಕ್ಷನ್‌ಗೆ ಟೈಮ್ ಬೇಕು ಅಂತ ಹೇಳಿ, ನಾವು ಡಿಸೆಂಬರ್‌ನಲ್ಲಿ ಬರುತ್ತೇವೆ ಅಂತ ಹೇಳಿದ್ವಿ" ಎಂದು ದರ್ಶನ್ ಒಪ್ಪಿಸಿದ ಬಗ್ಗೆ ಮಿಲನ ಪ್ರಕಾಶ್ ರಿವೀಲ್ ಮಾಡಿದ್ದಾರೆ.

More from Filmibeat

English summary
Devil movie director Milana Prakash revealed the details of two version of Idre Nemdiyaag Irbek song.
Read more about: darshan devil milana prakash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X