ವಿಧಾನಸೌಧ ಮುಂದೆ 'ಧೈರ್ಯಂ' ಆಡಿಯೋ ಬಿಡುಗಡೆ ಮಾಡುವವರು ಯಾರು.?
ಸಿನಿಮಾಗಳ ಆಡಿಯೋ ಆಲ್ಬಂನ ದೊಡ್ಡ ಸ್ಟಾರ್ ಅಥವಾ ರಾಜಕಾರಣಿಗಳ ಕೈಯಲ್ಲಿ ಬಿಡುಗಡೆ ಮಾಡಿಸುವುದು ಕಾಮನ್. ಆದರೆ ಈ ಕಾಮನ್ ಅಂಶವನ್ನು ಬಿಟ್ಟು ಮೂವರು ವಿಶಿಷ್ಟ ಅತಿಥಿಗಳ ಕೈಯಲ್ಲಿ ಆಡಿಯೋ ಲಾಂಚ್ ಮಾಡಿಸುವ ಪ್ಲಾನ್ ಮಾಡಿರುವವರು 'ಧೈರ್ಯಂ' ಚಿತ್ರತಂಡ.
'ಧೈರ್ಯಂ' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇದೇ ತಿಂಗಳ 27ಕ್ಕೆ ನಡೆಯಲಿದೆ. ಚಿತ್ರದ ಹಾಡುಗಳನ್ನು ವಿಧಾನ ಸೌಧ ಮುಂದೆ ಅನಾವರಣ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಜೊತೆಗೆ ಮೂವರು ವಿಶಿಷ್ಟ ಅತಿಥಿಗಳು ಚಿತ್ರದ ಆಡಿಯೋ ರಿಲೀಸ್ ಮಾಡುತ್ತಿರುವುದು ಇಂಟ್ರೆಸ್ಟಿಂಗ್ ವಿಚಾರ. [ಆಡಿಯೋ ಬಿಡುಗಡೆ ಸಜ್ಜಾದ ಅಜಯ್ ರಾವ್ 'ಧೈರ್ಯಂ']

ಅಷ್ಟಕ್ಕೂ, ವಿಧಾನಸೌಧದ ಮುಂದೆ ಮೂವರ ಕೈಯಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡುವುದಕ್ಕೂ ಒಂದು ಬಹು ಮುಖ್ಯ ಕಾರಣ ಇದ್ಯಂತೆ. ಅದನ್ನ ಆಡಿಯೋ ರಿಲೀಸ್ ದಿನವೇ ರಿವೀಲ್ ಮಾಡುವುದಾಗಿ ಹೇಳುತ್ತಾರೆ ನಿರ್ದೇಶಕ ಶಿವ ತೇಜಸ್.
ಅಂದಹಾಗೆ, 'ಧೈರ್ಯಂ' ಕೃಷ್ಣ ಅಜಯ್ ರಾವ್ ನಟನೆಯ ಚಿತ್ರವಾಗಿದ್ದು, 'ಮಳೆ' ಖ್ಯಾತಿಯ ಶಿವ ತೇಜಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅದಿತಿ ಎನ್ನುವ ಹೊಸ ಹುಡುಗಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ. 'ಜಿಂಕೆಮರಿ' ಖ್ಯಾತಿಯ ಎಮಿಲ್ ಸಂಗೀತದಲ್ಲಿ ಚಿತ್ರದ ನಾಲ್ಕು ಹಾಡುಗಳು ಮೂಡಿಬಂದಿದೆ.
More from Filmibeat
English summary
Ajay Rao starrer Kannada Movie 'Dhairyam' audio will be out on May 27th in Vidhana Soudha.


Click it and Unblock the Notifications











