ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ಟೀಸರ್‌ಗೆ ಮುಹೂರ್ತ ಫಿಕ್ಸ್
ಡಾಲಿ ಧನಂಜಯ್ ವೃತ್ತಿ ಬದುಕಿನ 25ನೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಪ್ರತಿಯೊಬ್ಬ ಸ್ಟಾರ್ ನಟನಿಗೆ 25ನೇ ಸಿನಿಮಾ ತುಂಬಾನೇ ಮುಖ್ಯ ಆಗಿರುತ್ತೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕಿದ್ದಾರೆ.
ಇದೂವರೆಗೂ 'ಹೊಯ್ಸಳ' ಸಿನಿಮಾದ ರಿಲೀಸ್ ಡೇಟ್ ಬಗ್ಗೆಯಷ್ಟೇ ಸುದ್ದಿಯಾಗಿತ್ತು. ಆದರೆ, ಟೀಸರ್, ಟ್ರೈಲರ್ ಬಗ್ಗೆ ಸುದ್ದಿನೇ ಇರಲಿಲ್ಲ. ಕೊನೆಗೂ ಡಾಲಿ ಅಭಿಮಾನಿಗಳಿಗೆ ಟೀಸರ್ ರಿಲೀಸ್ ಡೇಟ್ ಬಗ್ಗೆ ರಿವೀಲ್ ಆಗಿದೆ.

ಕೆಆರ್‌ಜಿ ಸ್ಟುಡಿಯೋ ಡಾಲಿಯ 25ನೇ ಸಿನಿಮಾದ ಟೀಸರ್ ಅನ್ನು ಫೆಬ್ರವರಿ 5ರಂದು ಬೆಳಗ್ಗೆ 9.27ಕ್ಕೆ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿದೆ. ಡಾಲಿ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ವಿಜಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
'ಹೊಯ್ಸಳ' ಸಿನಿಮಾಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಕಾರ್ತಿಕ್ ಎಸ್ ಕ್ಯಾಮರಾ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದರೆ, ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಪ್ರಮುಖ ಪಾತ್ರದಲ್ಲಿದ್ದಾರೆ.

ಜೊತೆಗೆ 'ಹೊಯ್ಸಳ' ಸಿನಿಮಾ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಈ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಆಗುತ್ತಿದೆ. ಇದು ಧನಂಜಯ್ ವೃತ್ತಿ ಬದುಕಿನಲ್ಲೇ ಹೊಸ ದಾಖಲೆ ಎಂದು ಸಿನಿಮಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. 'ಹೊಯ್ಸಳ' ಇದೇ ಮಾರ್ಚ್ 30ಕ್ಕೆ ರಿಲೀಸ್ ಆಗಿದೆ.


Click it and Unblock the Notifications











