'ರತ್ನನ್ ಪ್ರಪಂಚ' ಬಳಿಕ ಡಾಲಿ ಧನಂಜಯ್ ಹೊಸ ಅಧ್ಯಾಯ 'ಉತ್ತರಕಾಂಡ'!

ಡಾಲಿ ಧನಂಜಯ್ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಯಾಂಡಲ್‌ವುಡ್‌ ನಟ. ಕನ್ನಡ ಅಷ್ಟೇ ಅಲ್ಲ. ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. ಆಗಲೇ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿ ನಿಂತಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್‌ ಜೊತೆ 'ಮಾನ್ಸೂನ್ ರಾಗ' ರಿಲೀಸ್ ಆಗುತ್ತಿದ್ದಂತೆ 'ಹೆಡ್ ಬುಷ್' ಬಿಡುಗಡೆಯಾಗಿತ್ತು. ಒಂದಿಷ್ಟು ವಿವಾದ ಸುಳಿಗೆ ಸಿಕ್ಕಿಕೊಂಡರೂ, 'ಹೆಡ್‌ ಬುಷ್‌' ಸಿನಿಮಾ ಕನ್ನಡಿಗರು ಬೆಂಬಲ ಸೂಚಿಸಿದ್ದರು. ಆ ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿರುವಾಗಲೇ ಮತ್ತೊಂದು ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಅದುವೇ 'ಉತ್ತರಕಾಂಡ'.

'ಉತ್ತರಕಾಂಡ'ಕ್ಕೆ ಸಜ್ಜಾಗಿ ಡಾಲಿ ಧನಂಜಯ್

'ಉತ್ತರಕಾಂಡ'ಕ್ಕೆ ಸಜ್ಜಾಗಿ ಡಾಲಿ ಧನಂಜಯ್

ಧನಂಜಯ್ ಕೈಯಲ್ಲಿ ಇರುವ ಸಿನಿಮಾಗಳಲ್ಲಿ 'ಉತ್ತರಕಾಂಡ' ಕೂಡ ಒಂದು. ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರುವುದಕ್ಕಿಂತ ಮುನ್ನವೇ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ, ಕೆಆರ್‌ಜಿ ಸ್ಟುಡಿಯೋ. ಹೊಂಬಾಳೆ ಸಂಸ್ಥೆ ಜೊತೆ ಗುರುತಿಸಿಕೊಂಡಿರುವ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಕೆಆರ್‌ಜಿ ಸ್ಟುಡಿಯೋ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸಿನಿಪ್ರಿಯರ ಕುತೂಹಲ ದುಪ್ಪಟ್ಟಾಗಿದೆ.

'ರತ್ನನ್ ಪ್ರಪಂಚ' ಕಾಂಬಿನೇಷನ್

'ರತ್ನನ್ ಪ್ರಪಂಚ' ಕಾಂಬಿನೇಷನ್

'ಉತ್ತರಕಾಂಡ' ಸಿನಿಮಾಗೆ ವಿಜಯ್ ಕಿರಗಂದೂರು ಬೆಂಬಲವಾಗಿ ನಿಂತಿದ್ದಾರೆ. ಇದರೊಂದಿಗೆ ಈಗಾಗಲೇ ರತ್ನನ್ ಪ್ರಪಂಚ ಸಿನಿಮಾ ಮೂಲಕ ಸದ್ದು ಮಾಡಿದ್ದ ರೋಹಿತ್ ಪದಕಿ 'ಉತ್ತರಕಾಂಡ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ರತ್ನನ್ ಪ್ರಪಂಚ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿಲ್ಲ. ನೇರವಾಗಿ ಓಟಿಟಿಯಲ್ಲಿಯೇ ರಿಲೀಸ್ ಆಗಿತ್ತು. ಆದರೂ, ಪ್ರೇಕ್ಷಕರಿಗೆ ಆ ಸಿನಿಮಾ ಮೆಚ್ಚುಗೆ ಗಳಿಸಿತ್ತು.

ರಗಡ್ ಧನಂಜಯ್?

ರಗಡ್ ಧನಂಜಯ್?

ಈ ಬಾರಿ ಧನಂಜಯ್ ಹಾಗೂ ರೋಹಿತ್ ಪದಕಿ ಕಾಂಬಿನೇಷನ್‌ನಲ್ಲಿ ಪಕ್ಕಾ ಮಾಸ್‌ ಸಿನಿಮಾ ಸೆಟ್ಟೇರುವುದಕ್ಕೆ ಸಜ್ಜಾಗಿ ನಿಂತಿದೆ. ಇಲ್ಲಿ ಡಾಲಿ ಧನಂಜಯ್ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಾಣಿಸುತ್ತಿದೆ. ವಿಶೇಷ ಅಂದರೆ, ಈ ಸಿನಿಮಾವನ್ನು ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಸಿನಿಮಾ ಕೂಡ ಉತ್ತರಕರ್ನಾಟಕದ ಸುತ್ತಮುತ್ತವೇ ಚಿತ್ರೀಕರಣ ನಡೆಯುವ ಸಾಧ್ಯತೆಯಿದೆ.

'ಉತ್ತರಕಾಂಡ'ಕ್ಕೆ ಮುಹೂರ್ತ ಫಿಕ್ಸ್

'ಉತ್ತರಕಾಂಡ'ಕ್ಕೆ ಮುಹೂರ್ತ ಫಿಕ್ಸ್

'ಉತ್ತರಕಾಂಡ' ನವೆಂಬರ್ 06 ರಂದು ಮಧ್ಯಾಹ್ನ 03.22 ಕ್ಕೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಸೆಟ್ಟೇರುತ್ತಿದೆ. "ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಸುಂದರವಾಗಿ ಕಥೆಯ ರೂಪದಲ್ಲಿ ತೆರೆದಿಡುವ ಸಿನಿಮಾ" ಎಂದು ಚಿತ್ರತಂಡ ಸುಳಿವು ನೀಡಿದೆ. ರೋಹಿತ್ ಪದಕಿ ಜೊತೆ ಚರಣ್ ರಾಜ್ ಸಂಗೀತ ನಿರ್ದೇಶನವಿದೆ. ಸ್ವಾಮಿ ಛಾಯಾಗ್ರಾಹಣ, ದೀಪು ಎಸ್ ಕುಮಾರ್ ಎಡಿಟಿಂಗ್ ಹಾಗೂ ವಿಶ್ವಾಸ್ ಕಶ್ಯಪ್ ವಿನ್ಯಾಸ ಮಾಡುತ್ತಿದ್ದಾರೆ.

More from Filmibeat

English summary
Dhananjay Starrer Uttarakhanda Movie Will Be Launching On November 6th 2022, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X