'ಡಾಲಿ ಕ್ರೂರಿ ಅಲ್ಲ.. ಪರೋಪಕಾರಿ': ರಾಮಘಡ ನ್ಯೂಸ್!

ಇತ್ತೀಚೆಗೆ ಕನ್ನಡ ಸಿನಿಮಾಗಳ ಟೈಟಲ್ ಡಿಫ್ರೆಂಟ್ ಆಗಿರುತ್ತೆ. ಕೇಲವ ಟೈಟಲ್‌ನಿಂದಲೇ ಜನರ ಗಮನ ಸೆಳೆಯುತ್ತಿವೆ. ಈ ವರ್ಷ ಇಂತಹ ಹಲವು ಸಿನಿಮಾಗಳು ಬಂದು ಹೋಗಿವೆ. ಈಗ ಅದೇ ಸಾಲಿನಲ್ಲಿ ಮತ್ತೊಂದು ಸಿನಿಮಾ ನಿಂತಿದೆ. ಅದುವೇ 'ಥಗ್ಸ್ ಆಫ್ ರಾಮಘಡ'

'ಥಗ್ಸ್ ಆಫ್ ರಾಮಘಡ' ಸಿನಿಮಾ ಟೈಟಲ್ ಹಾಗೂ ಹಾಡುಗಳು ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೇ ಜೋಷ್‌ನಲ್ಲಿ ಅತೀ ಶೀಘ್ರದಲ್ಲಿಯೇ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೂ ಸಜ್ಜಾಗಿ ನಿಂತಿದೆ. ಹೊಸಬರ ಹೊಸತನದ ಪ್ರಯೋಗವಿರುವ ಈ ಸಿನಿಮಾ ಜನವರಿ 6ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಇನ್ನೇನು ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಚಿತ್ರತಂಡ ವಿಭಿನ್ನ ರೀತಿಯಲ್ಲಿ ಪ್ರಮೋಶನ್ ಮಾಡುತ್ತಿದೆ. ಚಿತ್ರದ ಪ್ರಚಾರಕ್ಕೆಂದೇ ಹೊಸ ಪೋಸ್ಟರ್‌ಗಳು ಹೊರಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇನ್ನು ಈ ಹೊಸಬರ ತಂಡಕ್ಕೆ ನಟರಾಕ್ಷಸ ಡಾಲಿ ಧನಂಜಯ ಕೂಡ ಜೊತೆಯಾಗಿ ನಿಂತಿದ್ದಾರೆ. ಆ ಪೋಸ್ಟರ್‌ಗಳಲ್ಲಿ ಒಂದು ಧನಂಜಯ್ ಕ್ರೂರಿ ಅಲ್ಲ ಪರೋಪಕಾರಿ ಅನ್ನೋದು ಕೂಡ ಒಂದು.

Dhananjay Supporting Thugs Of Ramaghada Movie: Posters Are Highlight

'ಥಗ್ಸ್ ಆಫ್ ರಾಮಘಡ' ಸಿನಿಮಾ ಟೀಮ್ ಬಹುತೇಕ ಕೆಲಸ ಮುಗಿಸಿದ್ದು, ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ. ಸಿನಿಮಾ ಜನರಿಗೆ ತಲುಪೋಕೆ ಅಷ್ಟೇ ವಿಭಿನ್ನ ಪ್ರಚಾರದ ಅಗತ್ಯ ಕೂಡ ಇದೆ. ಅದಕ್ಕೆಂದೇ 'ರಾಮಘಡ ಪತ್ರಿಕೆ' ಮೂಲಕ ಸಿನಿಮಾದ ಕ್ಯಾರೆಕ್ಟರ್‌ಗಳನ್ನು ಪರಿಚಯಿಸುವ ಕೆಲಸವನ್ನು ಕೂಡ ಸಿನಿಮಾತಂಡ ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಪೋಸ್ಟರ್‌ಗಳು ಸಖತ್ ವೈರಲ್ ಆಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ನಾಳೆ (ಡಿಸೆಂಬರ್ 18) 'ಥಗ್ಸ್ ಆಫ್ ರಾಮಘಡ' ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ನಟ ರಾಕ್ಷಸ ಡಾಲಿ ಧನಂಜಯ ಈ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಿದ್ದು, ಹೊಸಬರ ತಂಡದ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.

'ಥಗ್ಸ್ ಆಫ್ ರಾಮಘಡ' ಸಿನಿಮಾವನ್ನು ಕಾರ್ತಿಕ್ ಮಾರಲಭಾವಿ ನಿರ್ದೇಶನ ಮಾಡಿದ್ದಾರೆ. ಇದು ಕಾರ್ತಿಕ್ ಅವರಿಗೆ ಮೊದಲ ಸಿನಿಮಾ ಕೂಡ ಹೌದು. 1995ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾ ಮಾಡಲಾಗಿದೆ. ಈ ಸತ್ಯ ಘಟನೆಗಳಿಗೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಸಿನಿಮಾ ಮಾಡಿದ್ದಾರೆ. ಉತ್ತರ ಕರ್ನಾಟಕದ ಚಿಕ್ಕ ಹಳ್ಳಿಯೊಂದರಲ್ಲಿ ಸಿನಿಮಾದ ಕಥೆ ಸಾಗುತ್ತೆ. ಈ ಸಿನಿಮಾ ನೈಜ ಘಟನೆಗಳಿಗೆ ಹತ್ತಿರವಾಗಿರೋದ್ರಿಂದ ಇಡೀ ಸಿನಿಮಾವನ್ನು ಉತ್ತರ ಕರ್ನಾಟಕ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.

Dhananjay Supporting Thugs Of Ramaghada Movie: Posters Are Highlight

'ಥಗ್ಸ್ ಆಫ್ ರಾಮಘಡ' ಸಿನಿಮಾದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ಸೂರ್ಯಕಿರಣ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಭಾರತ್ ಟಾಕೀಸ್ ಮೂಲಕ ಜೈ ಕುಮಾರ್, ಕೀರ್ತಿ ರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Dhananjay Supporting Thugs Of Ramaghada Movie: Posters Are Highlight,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X