Dhananjaya Birthday Party: ಹುಟ್ಟುಹಬ್ಬಕ್ಕೆ ಡಾಲಿ ಪಾರ್ಟಿ.. ಯಶ್, ರಕ್ಷಿತ್ ಜೊತೆ ಸ್ಯಾಂಡಲ್‌ವುಡ್ ಮಸ್ತಿ!

ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್ ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ಫ್ಯಾನ್ಸ್ ಜೊತೆ ಬರ್ತ್‌ಡೇಯನ್ನು ಆಚರಿಸಿಕೊಳ್ಳಲು ಮುಂದಾಗಿದ್ದರು. ಅದರಂತೆಯೇ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಫ್ಯಾನ್ಸ್ ಜೊತೆ ಬರ್ತ್‌ಡೇ ಸೆಲೆಬ್ರೆಷನ್ ನಡೆದಿತ್ತು.

ಹುಟ್ಟುಹಬ್ಬದ ಖುಷಿಯಲ್ಲಿದ್ದ ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನ ಸ್ನೇಹಿತರಿಗಾಗಿ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಈ ಸಂಬಂಧ ಇಡೀ ಕನ್ನಡ ಚಿತ್ರರಂಗಕ್ಕೂ ಆಹ್ವಾನವನ್ನು ನೀಡಿದ್ದರು. ಆ ಮೇರೆಗೆ ಕನ್ನಡ ಚಿತ್ರರಂಗದ ದಿಗ್ಗಜರು ಆಗಮಿಸಿ, ನಟನಿಗೆ ಶುಭ ಹಾರೈಸಿದ್ದಾರೆ.

Dhananjaya Birthday Party: Yash, Duniya Vijay, Rakshit Shetty and others attended

ಅಭಿಮಾನಿಗಳ ಬಳಿಕ ಕನ್ನಡ ಚಿತ್ರರಂಗ ಸ್ನೇಹಿತರೊಂದಿಗೆ ಬರ್ತ್‌ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದರು. ಈ ಪಾರ್ಟಿಯಲ್ಲಿ ಕನ್ನಡದ ಚಿತ್ರರಂಗದ ಬಹುತೇಕ ನಟ ನಟಿಯರು ಆಗಮಿಸಿದ್ದು ವಿಶೇಷ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಪಾರ್ಟಿಗೆ ಬಂದಿದ್ದರು. ಸ್ಯಾಂಡಲ್‌ವುಡ್‌ನ ನಟರಾಕ್ಷಸನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಹಾಗೇ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಕೂಡ ಆಗಮಿಸಿದ್ದರು. ಇವರೊಂದಿಗೆ ರಮೇಶ್ ಅರವಿಂದ್, ದುನಿಯಾ ವಿಜಯ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ಪ್ರಜ್ವಲ್ ದೇವರಾಜ್, ನಿಖಿಲ್ ಕುಮಾರಸ್ವಾಮಿ, ನಿರ್ದೇಶಕ ಯೋಗರಾಜ್ ಭಟ್ ಪಾರ್ಟಿಗೆ ಬಂದು ಡಾಲಿಗೆ ಶುಭ ಹಾರೈಸಿದ್ದಾರೆ.

Dhananjaya Birthday Party: Yash, Duniya Vijay, Rakshit Shetty and others attended

ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಗೌಡ, ಯೋಗಿ ಜಿ ರಾವ್, ಲಹರಿ ಸಂಸ್ಥೆಯ ವೇಲು ಭಾಗವಹಿಸಿದ್ದರು. ಇವರೊಂದಿಗೆ ನಾಗಭೂಷಣ್, ವಾಸುಕಿ ವೈಭವ್, ಅಮೃತಾ ಅಯ್ಯರ್, ಚೈತ್ರಾ ಆಚಾರ್, ಸಂಜನಾ ಪ್ರಕಾಶ್ ಸೇರಿದಂತೆ ಹಲವು ಕಲಾವಿದರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಡಾಲಿ ಧನಂಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. 'ಅಣ್ಣಾ From Mexico' ಅನ್ನೋ ಸಿನಿಮಾವನ್ನು ಘೋಷಣೆ ಮಾಡಲಾಗಿತ್ತು. ಹಾಗೇ ಉಡುಗೊರೆಯಾಗಿ 'ಉತ್ತರಕಾಂಡ' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಹಾಗೇ 'ಜೀಬ್ರಾ', 'ಪುಷ್ಪ 2' ಸಿನಿಮಾ ಜಾಲಿ ರೆಡ್ಡಿ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು.

ಸುಮಾರು ನಾಲ್ಕು ವರ್ಷಗಳ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಿಂದ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದರು. ಡಾಲಿ ಧನಂಜಯ್ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಿದ್ದರು. ಸದ್ಯ ಧನಂಜಯ್ ಕೇವಲ ಹೀರೊ ಆಗಿ ಅಷ್ಟೇ ಅಲ್ಲ. ನಿರ್ಮಾಪಕನಾಗಿ, ಸಿನಿ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ.

More from Filmibeat

English summary
Dhananjaya Birthday Party: Yash, Duniya Vijay, Rakshit Shetty, Prajwal Devaraj, Yogi others attended.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X