ಧನುಷ್‌ರಿಂದ 'ವಿಕ್ರಾಂತ್ ರೋಣ' ಟ್ರೈಲರ್: ಅದಕ್ಕೂ ಮುನ್ನ ಕಿಚ್ಚ ಬಿಟ್ಟ ಝಲಕ್‌ ನೋಡಿದ್ದೀರಾ?

'ಕೆಜಿಎಫ್ 2' ಬಂದಿದ್ದು ಆಯ್ತು. '777 ಚಾರ್ಲಿ' ಸೌಂಡ್ ಮಾಡಿದ್ದೂ ಆಯ್ತು. ಇನ್ಮುಂದೆ ಏನಿದ್ದರೂ 'ವಿಕ್ರಾಂತ್ ರೋಣ' ಸರದಿ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ವಿಶ್ವದೆಲ್ಲಡೆ ಸದ್ದು ಮಾಡುವುದಕ್ಕೆ ಸಜ್ಜಾಗುತ್ತಿದೆ. ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಹೆಚ್ಚು ಕಡಿಮೆ ಒಂದು ತಿಂಗಳು ಬಾಕಿ ಉಳಿದಿದೆ. ಆಗಲೇ ವಿಕ್ರಾಂತ್ ವಿರಾಟ ರೂಪ ತೋರಿಸಲು ವೇದಿಕೆ ರೆಡಿಯಾಗಿದೆ.

ಈಗಾಗಲೇ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಇಲ್ಲಿವರೆಗೂ ಕೇವಲ ಟೀಸರ್ ಹಾಗೂ ಹಾಡುಗಳನ್ನಷ್ಟೇ ರಿಲೀಸ್ ಮಾಡಲಾಗಿತ್ತು. ಹಾಡು ಹಾಗೂ ಟೀಸರ್ ಎರಡೇ ಬೇಜಾನ್ ಸದ್ದು ಮಾಡಿತ್ತು. ಅದರಲ್ಲೂ ರಾ ರಾ ರಕ್ಕಮ್ಮ ಹಾಡು ಎಲ್ಲರ ಬಾಯಲ್ಲಿ ಇನ್ನೂ ಗುನುಗುತ್ತಲೇ ಇದೆ.

ಸದ್ಯಕ್ಕೀಗ ಕಿಚ್ಚನ ಅಭಿಮಾನಿಗಳಿಗೆ ಎರಡೆರಡು ಖುಷಿ ಪಡುವಂತಹ ವಿಷಯವಿದೆ. ಅದರಲ್ಲೊಂದು 'ವಿಕ್ರಾಂತ್ ರೋಣ' ಟ್ರೈಲರ್ ಅನ್ನು ತಮಿಳಿನ ಸ್ಟಾರ್ ನಟ ರಿಲೀಸ್ ಮಾಡುತ್ತಿದ್ದಾರೆ. ಇನ್ನೊಂದು ಟ್ರೈಲರ್ ರಿಲೀಸ್‌ಗೂ ಮುನ್ನ ಮೇಕಿಂಗ್ ಕ್ಲಿಕ್‌ವೊಂದನ್ನು ಕಿಚ್ಚ ಸುದೀಪ್ ಶೇರ್ ಮಾಡಿಕೊಂಡಿದ್ದಾರೆ.

ಜೂನ್ 23ಕ್ಕೆ 'ವಿಕ್ರಾಂತ್ ರೋಣ' ಟ್ರೈಲರ್

ಜೂನ್ 23ಕ್ಕೆ 'ವಿಕ್ರಾಂತ್ ರೋಣ' ಟ್ರೈಲರ್

ಕೇವಲ ಕರ್ನಾಟಕ ಅಷ್ಟೇ ಅಲ್ಲ. ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಭಾಷೆಯ ಅಂತರ ಮರೆದು 'ವಿಕ್ರಾಂತ್ ರೋಣ' ಸಿನಿಮಾ ನೋಡುವುದಕ್ಕಾಗಿ ಜನರು ಕಾದು ಕೂತಿದ್ದಾರೆ. 'ಕೆಜಿಎಫ್ 2' ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುವ ಕನ್ನಡ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಆದರೆ, ಅದಕ್ಕೂ ಮುನ್ನ ಟ್ರೈಲರ್‌ ನೋಡಬೇಕು ಅಂತ ಕಾದು ಕೂತಿದ್ದರು. ಅದಕ್ಕೆ ತಕ್ಕಂತೆ ಜೂನ್ 23ರಂದು ಟ್ರೈಲರ್ ರಿಲೀಸ್ ಆಗುತ್ತಿದೆ. ಹಾಗಂತ ಟ್ರೈಲರ್ ಐದು ಭಾಷೆಯಲ್ಲಿ ಅಲ್ಲ, ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಧನುಷ್‌ರಿಂದ 'ವಿಕ್ರಾಂತ್ ರೋಣ' ಟ್ರೈಲರ್

ಧನುಷ್‌ರಿಂದ 'ವಿಕ್ರಾಂತ್ ರೋಣ' ಟ್ರೈಲರ್

'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಆರು ಭಾಷೆಗಳಲ್ಲಿ ತಮಿಳು ಭಾಷೆಯ ಟ್ರೈಲರ್‌ ಅನ್ನು ನಟ ಧನುಷ್ ಬಿಡುಗಡೆ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ತಂಡವೇ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಉಳಿದ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಯಾರು ಮಾಡುತ್ತಾರೆ? ಅನ್ನುವುದು ಇನ್ನೂ ರಿಲೀಸ್ ಆಗಿಲ್ಲ.

15 ಸೆಕೆಂಡ್‌ ಕ್ಲಿಪ್‌ನಲ್ಲಿ ಏನಿದೆ?

ಇದೂವರೆಗೂ ಕೇವಲ ಟೀಸರ್ ಹಾಗೂ ಫಸ್ಟ್‌ ಲುಕ್‌ನಿಂದಲೇ 'ವಿಕ್ರಾಂತ್ ರೋಣ' ಕುತೂಹಲ ಕೆರಳಿಸಿತ್ತು. ಇನ್ನು ಟ್ರೈಲರ್ ರಿಲೀಸ್ ಮಾಡುವ ದಿನವನ್ನು ಅನೌನ್ಸ್ ಮಾಡಿದ ಮೇಲಂತೂ ಕಿಚ್ಚನ ಅಭಿಮಾನಿಗಳು ಒಂದು ಕಡೆ ಕೂರುತ್ತಿಲ್ಲ. ಈ ಮಧ್ಯೆ ಕಿಚ್ಚ ಸುದೀಪ್ ಕೇವಲ 15 ಸೆಕೆಂಡುಗಳ ಮೇಕಿಂಗ್ ಕ್ಲಿಪ್‌ ಅನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ಅಂತೂ ಇನ್ನೂ ಕುತೂಹಲವನ್ನು ಕೆರಳಿಸಿದೆ. ಅಲ್ಲದೆ ಭಯ ಹುಟ್ಟಿಸುವ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮೈನವಿರೇಳಿಸುತ್ತಿದೆ.

ಕಿಚ್ಚ ಸುದೀಪ್ ಫುಲ್ ರಿಲ್ಯಾಕ್ಸ್

ಕಿಚ್ಚ ಸುದೀಪ್ ಫುಲ್ ರಿಲ್ಯಾಕ್ಸ್

'ವಿಕ್ರಾಂತ್ ರೋಣ' ಸಿನಿಮಾ ಮೇಲೆ ಕಿಚ್ಚ ಸುದೀಪ್ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಹಿಟ್ ಆಗಲೇಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಈ ಮಧ್ಯೆ ಸುದೀಪ್ ಫುಲ್ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಾ ವೀಕೆಂಡ್ ಕಳೆದಿದ್ದಾರೆ. ಇದನ್ನು ನೋಡಿದರೆ, ಕಿಚ್ಚ ಈ ಸಿನಿಮಾ ಬಗ್ಗೆ ಫುಲ್ ಕಾನ್ಫಿಡೆಂಟ್ ಆಗಿದ್ದಾರೆ ಅಂತ ಅನಿಸುತ್ತೆ.

More from Filmibeat

English summary
Dhanush to release Sudeep's Vikrant Rona Movie Trailer in Tamil on June 23, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X