'ವಾಮನ'ನಾದ ಧನ್ವೀರ್: ಹೀರೊ ಎಂಟ್ರಿ ಸಾಂಗ್‌ನಿಂದಲೇ ಶೂಟಿಂಗ್ ಫಿನಿಶ್
ಸ್ಯಾಂಡಲ್‌ವುಡ್‌ನ ಯಂಗ್ ಅಂಡ್ ಎನರ್ಜೆಟಿಕ್ ಹೀರೊ ಧನ್ವೀರ್ ಗೌಡ. ಈಗಾಗಲೇ ನಟಿಸಿದ ಸಿನಿಮಾಗಳ ಮೂಲಕ ಧನ್ವೀರ್ ಗಮನ ಸೆಳೆದಿದ್ದಾರೆ. ಸದ್ಯ ಒಂದು ವರ್ಷದಿಂದ 'ವಾಮನ' ಅನ್ನೋ ಸಿನಿಮಾದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ.
'ವಾಮನ' ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ. ಟೀಸರ್ ಮೂಲಕ ಉತ್ತಮ ರೆಸ್ಪಾನ್ಸ್ ಪಡೆದಿರೋ ಈ ಸಿನಿಮಾಗೆ ಶಂಕರ್ ರಾಮನ್ ಆಕ್ಷನ್ ಕಟ್ ಹೇಳಿದ್ದಾರೆ. ಧನ್ವೀರ್ ಇಂಟ್ರುಡಕ್ಷನ್ ಸಾಂಗ್ ಶೂಟ್ ಮಾಡುವ ಮೂಲಕ ಚಿತ್ರೀಕರಣ ಮುಗಿಸಿದೆ ಚಿತ್ರತಂಡ.

ಅಂದ್ಹಾಗೆ ಧನ್ವೀರ್‌ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಶಂಕರ್ ರಾಮನ್‌ಗೆ ಇದು ಮೊದಲ ಸಿನಿಮಾ. ಈಗಾಗಲೇ ಇವರಿಗೆ ಹಲವು ಸಿನಿಮಾಗಳಲ್ಲಿ ಲೇಖಕರಾಗಿ ಕೆಲಸ ಮಾಡಿದ ಅನುಭವವಿದೆ. "'ವಾಮನ' ಸಿನಿಮಾ ಸತತ ಒಂದು ವರ್ಷದ ಜರ್ನಿ. ಹೀರೋ ಇಂಟ್ರೋಡಕ್ಷನ್ ಸಾಂಗ್ ಸೆರೆ ಹಿಡಿಯಲಾಗಿದ್ದು, ಈ ಹಾಡಿನ ಮೂಲಕ ಚಿತ್ರೀಕರಣ ಮುಗಿಸಿದ್ದೇವೆ." ಎನ್ನುತ್ತಾರೆ ನಿರ್ದೇಶಕ ಶಂಕರ್ ರಾಮನ್.
'ವಾಮನ' ಸಿನಿಮಾವನ್ನು 72 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಇದು ಪಕ್ಕಾ ಕಮರ್ಶಿಯಲ್ ಸಿನಿಮಾ. ಈ ಸಿನಿಮಾದಲ್ಲಿ ನಾಲ್ಕು ಸಾಂಗ್ ಹಾಗೂ ನಾಲ್ಕು ಫೈಟ್ ಇದೆ. ನಟ ಧನ್ವೀರ್ ಗೌಡಗೆ ಈ ಸಿನಿಮಾದ ಕಂಟೆಂಟ್ ಮೇಲೆ ನಂಬಿಕೆ ಬಂದಿದೆ. "ಒಂದೊಳ್ಳೆ ಕಂಟೆಂಟ್, ಕಥೆ ಇಟ್ಕೊಂಡು, ಒಂದೊಳ್ಳೆ ತಂಡದ ಜೊತೆ, ನಿರ್ಮಾಣ ಸಂಸ್ಥೆ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಈ ಸಿನಿಮಾದಲ್ಲಿ ಗುಣ ಅನ್ನೋ ಪಾತ್ರ ಮಾಡಿದ್ದೇನೆ. ಗ್ರೇ ಶೇಡ್.. ಬ್ಯಾಡ್ ಬಾಯ್ ಅಲ್ಲ, ಗುಡ್ ಬಾಯ್ ಕೂಡ ಅಲ್ಲ." ಎಂದು ಪಾತ್ರದ ಧನ್ವೀರ್ ಕುತೂಹಲ ಕೆರಳಿಸಿದ್ದಾರೆ.
ನಿರ್ಮಾಪಕ ಚೇತನ್ ಗೌಡ 'ವಾಮನ' ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಶಿಯಲ್ ಸಿನಿಮಾವಿದು. ಧನ್ವೀರ್ ಜೊತೆಗೆ ಸಂಪತ್, ಆದಿತ್ಯ ಮೆನನ್, ಅಚ್ಯುತ್ ಕುಮಾರ್, ಅವಿನಾಶ್, ತಾರಾ, ಶಿವರಾಜ್. ಕೆ. ಆರ್. ಪೇಟೆ, ಪೆಟ್ರೋಲ್ ಪ್ರಸನ್ನ, ಕಾಕ್ರೋಚ್ ಸುದಿ, ಜ್ಯೂನಿಯರ್ ಸಲಗ ಶ್ರೀಧರ್, ಸಚ್ಚಿತಾನಂದ, ಅರುಣ್ ಒಳಗೊಂಡ ದೊಡ್ಡ ತಂಡವೇ ಇದೆ. ವಿಶೇಷ ಅಂದ್ರೆ, ಅಜನೀಶ್ ಬಿ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಕ್ಯಾಮರಾವರ್ಕ್ ಇದೆ.


Click it and Unblock the Notifications











