ಫಸ್ಟ್ ಲುಕ್‌ಗೊಂದು ಗೆಸ್ ಲುಕ್: 80ರ ದಶಕದ ರಿಯಲ್ ಸ್ಟೋರಿ 'ಕೈವ'!
ಸ್ಯಾಂಡಲ್‌ವುಡ್ ಧನ್ವೀರ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಬಂದ ಧನ್ವೀರ್ ಸಿನಿಮಾಗಳಿಗೆ ಹೋಲಿಸಿದರೆ ಇದು ಬೇರೆಯದ್ದೇ ಸಿನಿಮಾ ಎನ್ನಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲೂ ಈ ಸಿನಿಮಾ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದೆ.
'ಕೈವ' ಸಿನಿಮಾ ಟೈಟಲ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಯುಗಾದಿ ಹಬ್ಬದಂದೇ ಈ ಸಿನಿಮಾ ಮುಹೂರ್ತ ಕಂಡಿತ್ತು. ಸರಳವಾಗಿಯೇ ಸಿನಿಮಾ ಆರಂಭ ಆಗಿತ್ತು. 'ಒಲವೇ ಮಂದಾರ', 'ಬ್ಯೂಟಿಫುಲ್ ಮನಸ್ಸುಗಳು', 'ಬೆಲ್ ಬಾಟಂ', 'ಬನಾರಸ್' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರೋ ಜಯತೀರ್ಥ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಕೈವ' ಟೈಟಲ್ ಹಿನ್ನೆಲೆಯೇನು?
ಧನ್ವೀರ್ ನಟಿಸುತ್ತಿರುವ 'ಕೈವ' ಸಿನಿಮಾ ಟೈಟಲ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 'ಕೈವ' ಅಂದರೆ ಏನು? ಅಂತ ಸಿನಿಪ್ರಿಯರು ಸಹಜವಾಗಿಯೇ ತಲೆಕೆಡಿಸಿಕೊಂಡಿದ್ದಾರೆ. ಸಿನಿಮಾ ತಂಡದ ಪ್ರಕಾರ, ಕೈವ ಅನ್ನೋದು ಭಗವಂತನ ಹೆಸರಿನಿಂದ ಸ್ಫರ್ತಿಯನ್ನು ಪಡೆದು ಇಡಲಾಗಿದೆ.
ಸಿನಿಮಾದ ಕಥೆಗೂ 'ಕೈವ' ಟೈಟಲ್‌ಗೂ ಏನು ಸಂಭಂದ ಅನ್ನೋದು ಪ್ರಶ್ನೆ ಕೂಡ ಏಳುವುದು ಸಹಜ. 1983 ರಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಇಷ್ಟು ಬಿಟ್ಟರೆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹೊರಹಾಕಿಲ್ಲ.
ಕುತೂಹಲ ಸೃಷ್ಟಿಸಿದ 'ಕೈವ' ಗೆಸ್ ಲುಕ್
'ಕೈವ' ಸಿನಿಮಾ ನಿರ್ದೇಶಿಸುತ್ತಿರುವ ಜಯತೀರ್ಥ ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನದೇನನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರೋ ಗೆಸ್ ಲುಕ್ ವಿಶೇಷವಾಗಿ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.

'ಕೈವ' 1983 ಅನ್ನೋ ಟ್ಯಾಗ್‌ಲೈನ್ ಬೇರೆ ಕೊಟ್ಟಿದೆ. ಗೆಸ್ ಲುಕ್ ನೋಡಿದರೆ ಇದೊಂದು ಅಂಡರ್‌ವರ್ಲ್ಡ್ ಸಿನಿಮಾ ಇರಬಹುದು ಅಂತ ಅನಿಸುತ್ತಿದೆ. ಟೈಟಲ್ ಹಾಗೂ ಗೆಸ್ ಲುಕ್ ಕಿಕ್ ಕೊಟ್ಟಿದೆ. ಧನ್ವೀರ್ ಅವರ ರಕ್ತಸಿಕ್ತ ಕೈಗಳು ನೋಡಿದರೆ, ಫಸ್ಟ್ ಲುಕ್ ಮಾಸ್ ಸಿನಿಮಾ ಪ್ರಿಯರಿಗೆ ಇಷ್ಟ ಆಗಬಹುದು ಎನಿಸುತ್ತಿದೆ.
ಧನ್ವೀರ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್
ಸೆಪ್ಟೆಂಬರ್ 8ಕ್ಕೆ 'ಕೈವ' ಹೀರೊ ಧನ್ವೀರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆಂದೇ ಈ ಸಿನಿಮಾದ ಅಸಲಿ ಲುಕ್ ರಿವೀಲ್ ಆಗಲಿದೆ. ಅಂದು ಸಿನಿಮಾ ಬಗ್ಗೆ ಮತ್ತಷ್ಟು ಕ್ಲ್ಯೂ ಸಿಗಬಹುದು ಎಂಬ ನಿರೀಕ್ಷೆಯಿದೆ.

Recommended Video
ವಿಘ್ನ ನಿವಾರಕ ಗಣೇಶ ಚತುರ್ಥಿಯಂದು ಹಲವು ಸಿನಿಮಾಗಳು ಫಸ್ಟ್ ಲುಕ್, ಟೀಸರ್, ಟ್ರೈಲರ್ ಅನ್ನು ರಿವೀಲ್ ಮಾಡಿವೆ. ಅದರಂತೆ ಧನ್ವೀರ್ ಹೊಸ ಸಿನಿಮಾ ಕೂಡ ವಿಭಿನ್ನವಾಗಿ ಗೆಸ್ ಲುಕ್ ಮೂಲಕ ಕುತೂಹಲ ಸೃಷ್ಟಿಸಿದೆ.


Click it and Unblock the Notifications











