"ಜೈಲ್‌ನಲ್ಲಿ ದರ್ಶನ್-ವಿನೀಶ್ ಒದ್ದಾಟ.. ಈ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ ಎಂದ ಧನ್ವೀರ್"; ಬರ್ತ್‌ಡೇ ದಿನ ನಡೆದಿದ್ದೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ (ಫೆಬ್ರವರಿ 16) ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಸೆಲೆಬ್ರೆಟ್ ಮಾಡುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಣೆ ಮಾಡಿಕೊಳ್ಳುವಾಗಿತ್ತು. ದರ್ಶನ್ ಜೊತೆಗೆ ಅವರ ಅಭಿಮಾನಿಗಳು ಕೂಡ ಇದೇ ಬೇಸರದಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿದ್ದರು.

ದರ್ಶನ್ ಅನುಪಸ್ಥಿತಿಯಲ್ಲಿಯೂ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದರು. ಪ್ರತಿ ವರ್ಷದಂತೆ ಕೇಕ್ ಕತ್ತರಿಸಿ, ಹಾರ ಹಾಕಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಇನ್ನೊಂದು ಕಡೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಜೈಲಿಗೆ ಹೋಗಿ ಅಲ್ಲಿ ದರ್ಶನ್ ಭೇಟಿ ಮಾಡಿದ್ದಾರೆ. ಜೈಲಿನೊಳಗೆ ಹುಟ್ಟುಹಬ್ವವನ್ನು ಆಚರಿಸಿ ಬಂದಿದ್ದಾರೆ. ಈ ವೇಳೆ ದರ್ಶನ್ ಹಾಗೂ ವಿನೀಶ್ ಮುಖಾ ಮುಖಿಯಾಗಿದ್ದಾರೆ. ಈ ವೇಳೆ ಏನಾಯ್ತು ಅನ್ನೋದನ್ನು ಧನ್ವೀರ್ ರಿವೀಲ್ ಮಾಡಿದ್ದಾರೆ.

Dhanveerah revealed what happened when Vineesh met father Darshan in jail on birthday

ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಗ್ಯಾರಂಟಿ ನ್ಯೂಸ್‌ನಲ್ಲಿನ ಸಂದರ್ಶನದಲ್ಲಿ ನಿರೂಪಕ ಲಕ್ಷ್ಮಿನಾರಾಯಣ ಕೇಳಿದ ಪ್ರಶ್ನೆಗೆ ಬರ್ತ್‌ಡೇ ದಿನ ತಂದೆಯನ್ನು ಭೇಟಿ ಮಾಡಿದ ವಿನೀಶ್ ಭಾವ ಹೇಗಿತ್ತು? ಜೈಲಿನಲ್ಲಿ ಏನು ನಡೀತು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ವಿನೀಶ್ ನೋಡುವುದಕ್ಕೆ ಮುಗ್ಧರಂತೆ ಕಾರಣಬಹುದು. ಆದರೆ, ತುಂಬಾನೇ ಪ್ರಬುದ್ಧತೆಯಿದೆ ಎಂದು ಧನ್ವೀರ್ ಈ ಸಂದರ್ಶನದಲ್ಲಿ ಹೇಳಿದ್ದಾರೆ. "ವಿನೀಶ್ ನೋಡುವುದಕ್ಕೆ ಹಾಗೆ ಅನಿಸುತ್ತೆ. ಆ ಹುಡುಗನಿಗೆ ತುಂಬಾನೇ ಮೆಚ್ಯೂರಿಟಿ ಇದೆ. ಒಂದೊಂದು ಮಾತನ್ನೂ ತುಂಬಾನೇ ತೂಕವಾಗಿ ಮಾತಾಡುತ್ತಾನೆ. ಯೋಚನೆ ಮಾಡಿಯೇ ಮಾತಾಡೋದು. ಆಮೇಲೆ ಏನು ಎತ್ತ ಅನ್ನೋದು ಗೊತ್ತಿರುತ್ತೆ. ಆದರೆ, ಮಾತಾಡುವುದಕ್ಕೆ ಹೋಗುವುದಿಲ್ಲ. ಎಲ್ಲಿ ಏನು ಮಾತಾಡಬೇಕೋ ಅದನ್ನೇ ಮಾತಾಡುತ್ತಾನೆ." ಎಂದು ಹೇಳಿದ್ದಾರೆ.

ದರ್ಶನ್ ಬರ್ತ್‌ಡೇ ದಿನ ವಿನೀಶ್‌ರನ್ನು ಧನ್ವೀರ್ ಅವರೇ ಜೈಲಿಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ಏನಾಯ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಮೊನ್ನೆ ನನಗೆ ಸ್ವಲ್ಪ ಬೇಜಾರಾಯ್ತು. ಬರ್ತ್‌ಡೇಗೆ ಕರೆದುಕೊಂಡು ಹೋಗಿದ್ದೆ. ಇಬ್ಬರೂ ಮುಂದೇನೆ ಇದ್ದಾರೆ. ಆ ಸನ್ನಿವೇಶವನ್ನು ನೋಡಿ ನನಗೆ ತುಂಬಾನೇ ಬೇಕಾರಾಯ್ತು. ಶತ್ರುಗಳಿಗೂ ಅಂತಹದ್ದೊಂದು ಸನ್ನಿವೇಶ ಬರಬಾರದು. ಒಬ್ಬ ತಂದೆ-ಮಗನ ಮಧ್ಯೆ ಯಾವ ಶತ್ರುವಿಗೂ ಇಂತಹ ಸನ್ನಿವೇಶ ಬರಬಾರದು. ಇರಲಿ, ಯಾರೆಲ್ಲ ಪರ್ಸನಲ್ ಟಾರ್ಗೆಟ್ ಮಾಡಿ, ಏನೇನು ಮಾಡುತ್ತಾರೋ ಮಾಡಲಿ. ಕಾಲ ಹೀಗೆ ಇರುವುದಿಲ್ಲ. ಅವರಿಗೂ ಮಕ್ಕಳು ಇರುತ್ತಾರೆ. ಅವರಿಗೂ ಫ್ಯಾಮಿಲಿ ಇರುತ್ತೆ. ಅವರಿಗೂ ಅನುಭವಗಳು ಆದಾಗ, ನಾವು ಮಾಡಿದ್ದು ತಪ್ಪು ಅನ್ನೋದು ಗೊತ್ತಾಗುತ್ತೆ." ಎಂದು ಹೇಳಿದ್ದಾರೆ.

Dhanveerah revealed what happened when Vineesh met father Darshan in jail on birthday

ಹಾಗೇ ತಂದೆ-ಮಗನ ಪ್ರೀತಿ ಬಗ್ಗೆನೂ ಹೇಳಿದ್ದಾರೆ. "ಅವತ್ತು ಬರ್ತ್‌ಡೇ ಬೇರೆ. ಅಣ್ಣಂಗೆ ವಿನೀಶ್ ಅಂದರೆ ಅಷ್ಟು ಪ್ರೀತಿ. ವಿನೀಶ್ ಅಣ್ಣ ಅಂದರೆ ಅಷ್ಟು ಪ್ರೀತಿ. ಮುಂದೇನೆ ಇದ್ದರೂ ಆಗಲ್ವಲ್ಲ. ಇಬ್ಬರ ಮುಂದೆ ಸಣ್ಣದೊಂದು ಗ್ಯಾಪ್ ಇದೆಯಲ್ಲ, ಹುಟ್ಟಿದ ಹಬ್ಬದ ದಿನಾನೂ ಮಾತಾಡಿಸುವುದಕ್ಕೆ ಆಗುವುದಿಲ್ವಲ್ಲ ಅನ್ನೋದು ನನಗೆ ಸಿಕ್ಕಾಪಟ್ಟೆ ಕಾಡಿತು. ಆ ಪರಿಸ್ಥಿತಿ ಯಾವ ಶತ್ರುವಿಗೂ ಬರಬಾರದು." ಎಂದಿದ್ದಾರೆ.

ಇಂತಹ ಕಷ್ಟದ ಸಂದರ್ಭದಲ್ಲಿ ವಿನೀಶ್ ಮನಸ್ಥಿತಿ ಹೇಗಿದೆ ಅನ್ನೋದನ್ನು ಹೇಳಿದ್ದಾರೆ. "ಎಂತಹವರಿಗಾದರೂ ಬೇಜಾರು ಆಗುತ್ತೆ. ಹೊರಗಡೆ ಸಮಾಜವನ್ನು ಬೇರೆ ಫೇಸ್ ಮಾಡಬೇಕಾಗುತ್ತೆ. ಸ್ಕೂಲ್, ಕಾಲೇಜ್ ಅಂತಿರುತ್ತೆ. ಮಕ್ಕಳುಗಳು ಆಡಿಕೊಳ್ಳುತ್ತಾರೆ. ಪರ್ವಾಗಿಲ್ಲ ಅವರೂ ಸ್ಟ್ರಾಂಗ್ ಆಗಿ ಇದ್ದಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಂಕಲ್ ಅಂತಾರೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಂದಿದ್ದೇನೆ. ಆದರೆ, ಎಲ್ಲಿಗೂ ಹೋಗಲ್ಲ. ಯಾರಿಗೂ ಸಿಗಲ್ಲ. ಅವರಾಯ್ತು, ಅವರ ಪಾಡಾಯ್ತು. ಅವರ ಮನೆ ಆಯ್ತು ಅಷ್ಟೇ. ಅಲ್ಲಿ-ಇಲ್ಲಿ ಎಲ್ಲಾದರೂ ಹೋಗಬೇಕಾದರೆ, ಅಕ್ಕನಾಗಲಿ, ಇಲ್ಲ ನನ್ನನ್ನಾಗಲಿ ಕರೆದುಕೊಂಡು ಹೋಗುತ್ತಾರೆ." ಎಂದು ಧನ್ವೀರ್ ಹೇಳಿದ್ದಾರೆ.

More from Filmibeat

English summary
Dhanveerah revealed what happened when Vineesh met father Darshan in jail on birthday.
Read more about: darshan vineesh birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X