ನ್ಯಾಚುರಲ್ ಸ್ಟಾರ್ ನಾನಿ ಜೊತೆ 'ದಸರಾ' ಸಂಭ್ರಮದಲ್ಲಿ 'ದಿಯಾ' ದೀಕ್ಷಿತ್ ಶೆಟ್ಟಿ: ಟಾಲಿವುಡ್‌ನಲ್ಲಿ ರಗಡ್ ಸೂರಿ
ಕೆಲವೊಮ್ಮೆ ಸಿಗೋ ಒಂದೇ ಒಂದು ಅವಕಾಶ ಸ್ಟಾರ್ ಪಟ್ಟಕ್ಕೆ ಏರಿಸಿಬಿಡುತ್ತೆ. ಅಂತಹ ಎಷ್ಟೋ ಉದಾಹರಣೆಗಳು ಸಿನಿಮಾರಂಗದಲ್ಲಿ ಸಾಕಷ್ಟು ಸಿಗುತ್ತವೆ. ಈಗ 'ದಿಯಾ' ಸಿನಿಮಾದ ನಟಿಸಿದ್ದ ದೀಕ್ಷಿತ್ ಶೆಟ್ಟಿಗೆ ಕೂಡ ಇಂತಹದ್ದೊಂದು ಅವಕಾಶ ಸಿಕ್ಕಿದೆ.
'ದಿಯಾ' ಸಿನಿಮಾ ಮೂಲಕ ಕನ್ನಡದ ಸಿನಿಮಾ ಪ್ರೇಮಿಗಳಿಗೆ ಚಿರಪರಿಚಿತರಾದ ನಟ ದೀಕ್ಷಿತ್ ಶೆಟ್ಟಿ. 'ದಿಯಾ' ಒಂದೊಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದ ದೀಕ್ಷಿತ್ ಶೆಟ್ಟಿಯ ಆಸೆ ಪೂರೈಸಿದೆ. ಒಂದ್ವೇಳೆ ಪ್ರೇಕ್ಷಕರು ಕೈ ಹಿಡಿದರೆ, 'ದಸರಾ' ಹಬ್ಬ ಆಚರಿಸೋದು ಪಕ್ಕಾ.
ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಸಿನಿಮಾ 'ದಸರಾ'ದಲ್ಲಿ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ 'ದಸರಾ' ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆಗುವುದಕ್ಕೆ ಸಜ್ಜಾಗಿದ್ದಾರೆ.

'ದಿಯಾ' ಸಿನಿಮಾದಲ್ಲಿ ದೀಕ್ಷಿಯ್ ಶೆಟ್ಟಿ ಸಿಂಪಲ್ ಹುಡುಗ. ಈ ಪಾತ್ರದ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈಗ ಪಕ್ಕಾ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ದಸರಾ' ರಗಡ್ ಸೂರಿಯಾಗಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದ್ದಾರೆ. ಈ ಸಿನಿಮಾ ಇದೇ ಮಾರ್ಚ್ 30ರಂದು ವಲ್ಡ್‌ವೈಡ್ ರಿಲೀಸ್ ಆಗುತ್ತಿದೆ.
'ದಸರಾ' ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡುತ್ತಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ, ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ದಸರಾ' ಸಖತ್ ಬಝ್ ಕ್ರಿಯೇಟ್ ಮಾಡಿದೆ.
ಟೀಸರ್ ಮೂಲಕ ಸೌಂಡ್ ಮಾಡಿರೀ ಈ ಸಿನಿಮಾ ನಾನಿಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಇದೇ ಸಿನಿಮಾದಲ್ಲಿ ಕನ್ನಡದ ಯುವ ಪ್ರತಿಭೆ ದೀಕ್ಷಿತ್ ಶೆಟ್ಟಿ ನ್ಯಾಚುರಲ್ ಸ್ಟಾರ್ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈಗ ಸಿಕ್ಕಿರೋ ಅವಕಾಶವನ್ನು ದೀಕ್ಷಿತ್ ಶೆಟ್ಟಿ ಸಮರ್ಥವಾಗಿ ಬಳಸಿಕೊಂಡಿದ್ದೇ ಆದರೆ, ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರೋದಿಲ್ಲ.
ಅಂದ್ಹಾಗೆ, 'ದಸರಾ' ಸಿನಿಮಾದಲ್ಲಿ ನಟಿಸೋ ಹೇಗೆ ಸಿಕ್ಕಿತು ಅನ್ನೋದನ್ನು ದೀಕ್ಷಿತ್ ಶೆಟ್ಟಿನೇ ರಿವೀಲ್ ಮಾಡಿದ್ದಾರೆ. "ನಾನಿ ಸರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ 'ಮೀಟ್ ಕ್ಯೂಟ್' ವೆಬ್ ಸೀರೀಸ್‌ನಲ್ಲಿ ನಟಿಸಿದ್ದೆ. ವೆಬ್ ಸೀರೀಸ್ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ 'ದಸರಾ' ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಸರ್ ಕೂಡ ವೆಬ್ ಸಿರೀಸ್‌ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ರು. ಇದ್ರಿಂದ ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು" ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.
"ಈ ಸಿನಿಮಾದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು 'ದಸರಾ' ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಸಿನಿಮಾ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಸರ್ ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ರು." ಎಂದು ತಮ್ಮ ಪಾತ್ರದ ಬಗ್ಗೆ ದೀಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ .

'ದಿಯಾ' ಬಳಿಕ ದೀಕ್ಷಿತ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ 'ಕೆಟಿಎಂ' ಹಾಗೂ 'ಬ್ಲಿಂಕ್' ಸಿನಿಮಾಗಳು ಕನ್ನಡದಲ್ ರೆಡಿಯಾಗಿದ್ದು, ಬಿಡುಗಡೆಗೆ ಸಜ್ಜಾಗಿವೆ. ಈ ಎರಡೂ ಸಿನಿಮಾಗೂ ಮುನ್ನ 'ದಸರಾ'ದಲ್ಲಿ ಸೂರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











