ಡಾ.ರಾಜ್‌ಕುಮಾರ್ ಮೊಮ್ಮಗ ಧೀರೆನ್ ರೌದ್ರಾವತಾರ ನೋಡಿದ್ರಾ?
ಕನ್ನಡದ ವರನಟ ಡಾ.ರಾಜ್ ಕುಮಾರ್ ಕುಟುಂಬದ ಅನೇಕರು ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಮಕ್ಕಳ ಸರದಿ ಬಳಿಕ ಈಗ ಮೊಮ್ಮಕ್ಕಳ ಸರದಿ. ರಾಜ್‌ಕುಮಾರ್ ಅವರ ಮೊಮ್ಮಕ್ಕಳ ಪೀಳಿಗೆ ಸಿನಿಮಾರಂಗದಲ್ಲಿ ತಮ್ಮ ಚಾಪ್ಟರ್ ಓಪನ್ ಮಾಡ್ತಿದ್ದಾರೆ. ಒಬ್ಬೊಬ್ಬರಾಗಿಯೇ ತಮ್ಮ ಸಿನಿಮಾಗಳನ್ನು ಶುರು ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ಧಿರೇನ್ ರಾಮ್ ಕುಮಾರ್ ಕೂಡ ಒಬ್ಬರು.
ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್ ಕುಮಾರ್ ಅವರ ಬಳಿಕ ಈಗ ಯುವರಾಜ್ ಮತ್ತು ಧೀರೆನ್ ರಾಮ್ ಕುಮಾರ್ ಇಬ್ಬರ ಸಿನಿಮಾಗಳು ಈಗ ಶುರುವಾಗಿವೆ. ಇವರ ಸಿನಿಮಾಗಳ ಒಂದೊಂದೇ ಅಪ್ಡೇಟ್‌ಗಳು ಬರುತ್ತಿವೆ, ಈಗ ನಟ ಧೀರೆನ್ ಕುಮಾರ್ ಅಭಿನಯದ 'ಶಿವ 143' ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಪ್ರೇಮಿಗಳ ದಿನಕ್ಕೆ ಧೀರೆನ್ ರಾಮ್‌ಕುಮಾರ್ 'ಶಿವ 143'!
ಧೀರೆನ್ ರಾಮ್ ಕುಮಾರ್ ಅವರ ಮೊದಲ ಸಿನಿಮಾ 'ಶಿವ 143'. ಇದು ಅವರ ಚೊಚ್ಚಲ ಚಿತ್ರ ಆಗಿರು ಕಾರಣಕ್ಕೆ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಪ್ರೇಮಿಗಳ ದಿನಕ್ಕೆ ಚಿತ್ರದ ಲವ್ ಸಾಂಗ್ ರಿಲೀಸ್ ಆಗಿತ್ತು. ಈಗ ಚಿತ್ರದ ಟ್ರೇಲರ್ ಕಮಾಲ್ ಮಾಡುತ್ತಿದೆ. ಧೀರೆನ್ ಅವತಾರಕ್ಕೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದಾರೆ.

ವೈಲೆಂಟ್ ಪ್ರೇಮ್ ಕಹಾನಿಯಲ್ಲಿ ಧೀರೆನ್, ಮಾನ್ವಿತಾ!
ನಟ ಧೀರೆನ್ ರಾಮ್ ಕುಮಾರ್ ಮತ್ತು ನಟಿ ಮಾನ್ವಿತಾ ಹರೀಶ್ ಅಭಿನಯದ 'ಶಿವ 143' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದ ಕಥೆ, ಮೇಕಿಂಗ್ ಎಲ್ಲವೂ ಹೇಗೆ ಇರಲಿದೆ ಎನ್ನುವ ಬಗ್ಗೆ ಈ ಟ್ರೇಲರ್ ಹಿಂಟ್ ಕೊಟ್ಟಿದೆ. ಟ್ರೇಲರ್ ತುಂಬಾನೆ ರೋಚಕತೆಯಿಂದ ಕೂಡಿದೆ. ಚಿತ್ರದಲ್ಲಿ ಒಂದು ವೈಲೆಂಟ್ ಲವ್ ಕಹಾನಿ ಇದೆ ಎನ್ನುವುದನ್ನು ಈ ಟ್ರೇಲರ್ ಬಿಚ್ಚಿಟ್ಟಿದೆ. ಟ್ರೇಲರ್‌ನ ಆರಂಭದಲ್ಲಿ ಡಾ.ರಾಜ್‌ಕುಮಾರ್ ಅವರ ಚಿತ್ರದ ಒಂದು ಡೈಲಾಗ್ ಬರುತ್ತೆ. 'ನಾನು ಮನಸಾರೆ ಪ್ರೀತಿಸಿರುವ ಮೊದಲ ಹೆಣ್ಣು ನೀನೆ, ಕೊನೆ ಹೆಣ್ಣು ನೀನೆ.' ಎನ್ನುವ ಡೈಲಾಗ್ ಬಳಿಕ ಶಿವನ ಆ್ಯಕ್ಷನ್ ಶುರುವಾಗುತ್ತದೆ.
ಲವ್, ಡೈಲಾಗ್, ಆ್ಯಕ್ಷನ್, ಎಮೋಷನ್‌ಗಳ ಹೂರಣ!
ನಾಯಕನ ಕಿರಿಚಾಟದೊಂದಿಗೆ ಟ್ರೇಲರ್ ಆರಂಭ ಆಗುತ್ತೆ. ಯಾವುದೋ ಶುಭ ಕಾರ್ಯವನ್ನು ತಡೆಯಲು ನಟ ರೊಚ್ಚಿಗೆದ್ದು ಬಂದದ್ದು ಕಾಣತ್ತೆ. ನಂತರ ಶಿವು ಮತ್ತು ಮಧು ಇಬ್ಬರು ಒಬ್ಬರನ್ನು ಒಬ್ಬರು ಎಷ್ಟು ಪ್ರೀತಿಸುತ್ತಾರೆ ಎನ್ನುವುದರ ಸಣ್ಣ ಪರಿಚಯ ಮಾಡಿಕೊಡಲಾಗಿದೆ. ಹಾಗೆ ಮಧು ಶಿವನ್ನು ಬಿಟ್ಟಿರಲು ಸಾಧ್ಯವಿಲ್ಲ ಅಂತ ಹೇಳುತ್ತಾಳೆ. ಇದರಿಂದ ಇಬ್ಬರ ಪ್ರೀತಿಗೆ ಎನೋ ಅಡ್ಡಿ ಆಗಿದೆ ಎನ್ನುವ ಸುಳಿವು ಸಿಗುತ್ತದೆ. ಬಳಿಕ ಟ್ರೇಲರ್‌ನಲ್ಲಿ ಆ್ಯಕ್ಷನ್, ಎಮೋಷನ್‌ಗಳು ಬರುತ್ತವೆ. ಇವರ ಪ್ರೇಮ್ ಕಹಾನಿಯಲ್ಲಿ ಏನೇನಾಗುತ್ತೆ. ಎನ್ನವುದನ್ನು ಸಿನಿಮಾದಲ್ಲಿ ನೋಡಬೇಕು.

ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡ ಧೀರೆನ್!
ಚಿತ್ರದ ಲವ್ ಸಾಂಗ್ ರಿಲೀಸ್ ಆದಾಗ, ಧೀರೆನ್ ಚಿತ್ರದಲ್ಲಿ ಒಬ್ಬ ಪ್ರೇಮಿಯಾಗಿ, ಲವ್ವರ್ ಬಾಯ್ ಆಗಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಟ್ರೇಲರ್ ಮೂಲಕ ಧೀರೆನ್ ಸರ್ಪ್ರೈಸ್ ಕೊಟ್ಟಿದ್ದಾರೆ. ಮೊದಲ ಚಿತ್ರದಲ್ಲೇ ಧೀರೆನ್ ಅವರು ಸಿಕ್ಕಾ ಪಟ್ಟೆ ಆ್ಯಕ್ಷನ್ ಮಾಡಿದ್ದಾರೆ. ಒಂದು ಕಡೆ ಸೀದಾ ಸಾದ ಪ್ರೇಮಿಯಾಗಿ ಕಾಣಿಸಿಕೊಂಡರೆ. ಮತ್ತೊಂದು ಕಡೆ, ರಾಕ್ಷಸನ ರೀತಿಯಲ್ಲಿ ಫೈಟ್ ಮಾಡಿದ್ದಾರೆ. ಇನ್ನು ನಟಿ ಮಾನ್ವಿತಾ ಅವರು ಕೂಡ ಕ್ಯೂಟ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಲವ್ ಹಾಡಿನಲ್ಲಿ ಕೊಂಚ ಬೋಲ್ಡ್ ಆಗಿದ್ದ ಮಾನ್ವಿತಾ, ಟ್ರೇಲರ್‌ನಲ್ಲಿ ಎಮೋಷನ್‌ಗಳನ್ನು ಅನಾವರಣ ಮಾಡಿದ್ದಾರೆ.
ಶಿವರಾಜ್ ಕುಮಾರ್ ಮೆಚ್ಚಿದ 'ಶಿವ 143'!
ನಟ ಶಿವರಾಜ್ ಕುಮಾರ್ 'ಶಿವ 143' ಟ್ರೇಲರ್ ನೋಡಿ ಮೆಚ್ಚಿ ಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಸಮಯದಿಂದ ಚಿತ್ರ ತಂಡದ ಜೊತೆಗೆ ಇದ್ದ ಶಿವರಾಜ್ ಕುಮಾರ್ ಚಿತ್ರ ಹೇಗೆ ಮೂಡಿ ಬಂದಿದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. "ರಾಜ್ ಕುಮಾರ್ ಮೊಮ್ಮಗ ಧೀರೆನ್ ಲಾಂಚ್ ಆಗ್ತಿದ್ದಾರೆ. ಸಿನಿಮಾ ಚೆನ್ನಾಗಿದೆ. ನಾನು ಲೈವ್ ಆಗಿ ಸಿನಿಮಾ ಶೂಟಿಂಗ್ ನೋಡಿದ್ದೆನೆ. ತುಂಬಾನೇ ಇನ್ಸ್‌ಪೈರಿಂಗ್ ಆಗಿದೆ. ಇದೊಂದು ವೈಲೆಂಟ್ ಲವ್ ಸ್ಟೋರಿ ಅಂತ ಹೇಳಬಹುದು. ಈಗಾಗಲೆ ರಿಲೀಸ್ ಆಗಿರುವ ಹಾಡು ಒಳ್ಳೆ ಹೆಸರು ಮಾಡಿದೆ. ಟ್ರೇಲರ್ ಬಂದಿದೆ. ಧೀರೆನ್ ಯಂಗ್ ಆ್ಯಕ್ಷನ್ ಹೀರೋ ಬರುವ ಭರವಸೆ ಮೂಡಿಸುತ್ತೆ." ಎಂದು ಹೇಳುತ್ತಾ ವಿಡಿಯೋ ಮೂಲಕ ಚಿತ್ರಕ್ಕೆ ಶಿವರಾಜ್ ಕುಮಾರ್ ಅವರು ಶುಭ ಕೋರಿದ್ದಾರೆ.


Click it and Unblock the Notifications











