Chiranjeevi Sarja: ಹುಟ್ಟುಹಬ್ಬದಂದು ಚಿರು ನೆನೆದ ಪತ್ನಿ ಮೇಘನಾ ರಾಜ್..'ಮಿಸ್ ಯೂ' ಎಂದ ಧ್ರುವ ಸರ್ಜಾ
ಇಂದು (ಅಕ್ಟೋಬರ್ 17) ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಇದ್ದಿದ್ದರೆ, ಮನೆ ಮುಂದೆ ಅಭಿಮಾನಿಗಳೊಂದಿಗೆ ಬರ್ತ್‌ಡೇಯನ್ನು ಜೋರಾಗಿಯೇ ಆಚರಿಸಿಕೊಳ್ಳುತ್ತಿದ್ದರು. ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿದ್ದವು. ಇಡೀ ಫ್ಯಾಮಿಲಿ ಜೊತೆ ಸೇರಿ ಸಂಭ್ರಮಿಸುತ್ತಿದ್ದರು.
ಚಿರಂಜೀವಿ ಸರ್ಜಾ ಅಭಿಮಾನಿಗಳು ಇಂದು (ಅಕ್ಟೋಬರ್ 17) ಇದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾರೆ. ಅವರ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಹುಟ್ಟುಹಬ್ಬಕ್ಕೆ 11 ದಿನಗಳಿಗೂ ಮುನ್ನ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಸಿನಿಮಾ 'ರಾಜಮಾರ್ತಾಂಡ' ರಿಲೀಸ್ ಆಗಿದೆ.

ಇದೇ ಅಕ್ಟೋಬರ್ 6ರಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅದೇ ದಿನ ಅಣ್ಣನ ಕೊನೆಯ ಸಿನಿಮಾ 'ರಾಜಮಾರ್ತಾಂಡ' ರಿಲೀಸ್ ಆಗಿತ್ತು. ಹುಟ್ಟುಹಬ್ಬದ ಸಂಬಂಧ ಇಂದು ಅಣ್ಣನನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನೆನಪಿಸಿಕೊಂಡು ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಶುಭಕೋರಿದ್ದಾರೆ. "ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ. ಎಂದಿನಂತೆ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಇಬ್ಬರ ಫೋಟೊ ಹಾಕಿ ಬರೆದುಕೊಂಡಿದ್ದಾರೆ.
ಇನ್ನೊಂದು ಕಡೆ ಮೇಘನಾ ಸರ್ಜಾ ಕೂಡ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಅಭಿಮಾನಿಗಳು ಮಾಡಿದ್ದ ಕಾಮನ್ ಡಿಪಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ ಅಭಿಮಾನಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ. ಇದರೊಂದಿಗೆ "ಹ್ಯಾಪಿ ಬರ್ತ್‌ಡೇ ಬಾಯ್" ಅಂತ ಚಿರಂಜೀವಿ ಸರ್ಜಾರನ್ನು ಟ್ಯಾಗ್ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬ ಚಿರು ಸಮಾಧಿಗೆ ಪೂಜೆ ಸಲ್ಲಿಸುವ ಸಾಧ್ಯತೆಯಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಎರಡೂ ಕುಟುಂಬಗಳೂ ಒಟ್ಟಿಗೆ ಸೇರುವ ನಿರೀಕ್ಷೆ ಇದ್ದು, ಇಂದಿನ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಚಿರಂಜೀವಿ ಸರ್ಜಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ, ದಿಢೀರನೇ ಅವರ ಆರೋಗ್ಯದಲ್ಲಿ ಏರು ಪೇರಾಗಿತ್ತು. ಜೂನ್ 7, 2020 ಚಿರಂಜೀವಿ ಸರ್ಜಾ ತೀವ್ರ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಚಿರಂಜೀವಿ ಸರ್ಜಾರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಇದು ಸರ್ಜಾ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು.
ಚಿರು ಅಗುವ ವೇಳೆ ಮೇಘನಾ ರಾಜ್ 5 ತಿಂಗಳ ಗರ್ಭಿಣಿಯಾಗಿದ್ದರು. ತಂದೆಯಾಗುತ್ತಿರುವ ಇದೇ ಖುಷಿಯಲ್ಲಿರುವಾಗಲೇ ಚಿರು ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಬಿಟ್ಟು ಹೊರಟು ಹೋಗಿದ್ದಾರೆ. ಮೇಘನಾ ಪುತ್ರ ರಾಯನ್ ರಾಜ್ ಸರ್ಜಾರಲ್ಲಿಯೇ ಚಿರಂಜೀವಿ ಸರ್ಜಾರನ್ನು ಕಂಡುಕೊಂಡಿದ್ದಾರೆ.
ಇತ್ತೀಚೆಗೆ ಚಿರಂಜೀವಿ ಸರ್ಜಾ ನಟಿಸಿದ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಸಿನಿಮಾ ರಿಲೀಸ್ ಆಗಿದೆ. ಸ್ವತ: ಧ್ರುವ ಸರ್ಜಾ ಅಣ್ಣನ ಪಾತ್ರಕ್ಕೆ ಧ್ವನಿ ನೀಡಿದ್ದರು. ಅಲ್ಲದೇ ತಾವೇ ಮುಂದೆ ನಿಂತು ಸಿನಿಮಾದ ಪ್ರಚಾರವನ್ನೂ ಮಾಡಿದ್ದರು. ಅಲ್ಲದೆ ಧ್ರುವ ಸರ್ಜಾ ತಮ್ಮದೇ ಹುಟ್ಟುಹಬ್ಬದಂದು 'ರಾಜಮಾರ್ತಾಂಡ' ಸಿನಿಮಾವನ್ನು ರಿಲೀಸ್ ಮಾಡಿದ್ದರು.
ಮೇಘನಾ ರಾಜ್ ಕೂಡ ಸಿನಿಮಾಗೆ ಬೆಂಬಲವಾಗಿ ನಿಂತಿದ್ದರು. ಈ ಸಿನಿಮಾವನ್ನು ಚಿರು ಕೊನೆಯ ಸಿನಿಮಾ ಅಂತ ಹೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೆನಪಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











