ಇದೇ ಮೊದಲ ಬಾರಿಗೆ ಮಗಳ ಫೋಟೊ ಹಂಚಿಕೊಂಡ ಧ್ರುವ ಸರ್ಜಾ: ಹೇಗಿದ್ದಾಳೆ ಪ್ರಿನ್ಸ್ ಪುತ್ರಿ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಫ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎಪಿ ಅರ್ಜುನ್ ನಿರ್ದೇಶಿಸಿದ 'ಮಾರ್ಟಿನ್' ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಶೂಟಿಂಗ್ ನಡೆಯುತ್ತಿದೆ.
ಈ ಎರಡು ಸಿನಿಮಾಗಳಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆನೂ ಪತ್ನಿ ಪ್ರೇರಣಾ ಹಾಗೂ ಮಗಳ ಜೊತೆನೂ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ಧ್ರುವ ಸರ್ಜ ಮಗಳು ಜನಿಸಿದ ಬಳಿಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಆಗಾಗ ಮಗಳೊಂದಿಗೆ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು. ಆ ವೇಳೆನೂ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಈಗ ತಮ್ಮ ಫ್ಯಾನ್ಸ್‌ಗೆ ತಮ್ಮ ಮುದ್ದಿನ ಮಗಳನ್ನು ಪರಿಚಯಿಸಿದ್ದಾರೆ.
7 ತಿಂಗಳ ಬಳಿಕ ಮಗಳ ಮುಖ ರಿವೀಲ್
ಧ್ರುವ ಸರ್ಜಾ ಇಂದು (ಮೇ 15) ಬೆಳಗ್ಗೆ ತಮ್ಮ ಅಭಿಮಾನಿಗಳಿಗೆ ದಿಢೀರನೇ ಸರ್ಪ್ರೈಸ್ ಕೊಟ್ಟಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗಳ ಫೋಟೊವನ್ನು ಶೇರ್ ಮಾಡಿದ್ದರು. ಜೊತೆಗೆ ಮುದ್ದಾಗಿ ತಮ್ಮ ಮಗಳ ಬಗ್ಗೆ ಬರೆದುಕೊಂಡಿದ್ದರು. ಈ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ವೇಳೆ ಧ್ರುವ ಸರ್ಜಾ ದಂಪತಿ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಮಗಳು ಜನಿಸಿದ 7 ತಿಂಗಳ ಬಳಿಕ ಈಗ ಮಗಳ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ
ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಷ್ಟೇ. ಆದರೆ, ಇನ್ನೂ ತಮ್ಮ ಮಗಳಿಗೆ ಹೆಸರನ್ನು ಇಟ್ಟಿಲ್ಲ. ಮುಂದಿನ ದಿನಗಳಲ್ಲಿ ಹೆಸರು ಇಡುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದರೊಂದಿಗೆ ಧ್ರುವ ಸರ್ಜಾ ಮುಂದಿನ ದಿನಗಳಲ್ಲಿ ಮಗಳ ಇನ್ನೂ ಹೆಚ್ಚಿನ ಫೋಟೊಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಅಂದ್ಹಾಗೆ ಈ ಹಂಚಿಕೊಂಡಿರೋ ಫೋಟೊಗಳು 7 ತಿಂಗಳ ಫೋಟೊ ಅಲ್ಲ. ಒಂದು ತಿಂಗಳ ಫೋಟೊ ಶೂಟ್. ಇಂತಹ ಇನ್ನೂ ಹಲವು ಫೋಟೊಗಳಿದ್ದು, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಧ್ರುವ ಸರ್ಜಾ ಫುಲ್ ಬ್ಯುಸಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೂವರೆಗೂ ನಟಿಸಿದ್ದು ಕೆಲವೇ ಸಿನಿಮಾಗಳು. ಆದರೂ, ಆಕ್ಷನ್ ಪ್ರಿನ್ಸ್‌ಗೆ ಅಭಿಮಾನಿಗಳೇನು ಕಮ್ಮಿಯಿಲ್ಲ. ಇದೂವರೆಗೂ ಧ್ರುವ ಸರ್ಜಾ ನಟಿಸಿದ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಹೀಗಾಗಿ ಮುಂದಿನ ಎರಡು ಸಿನಿಮಾಗಳ ಮೇಲೆ ಸ್ಯಾಂಡಲ್‌ವುಡ್ ಕಣ್ಣಿಟ್ಟಿದೆ.
'ಮಾರ್ಟಿನ್' ಟೀಸರ್ ಈಗಾಗಲೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. 10 ವರ್ಷಗಳ ಬಳಿಕ ಎಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಜೊತೆಯಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ಹೊಸ ದಾಖಲೆ ಬರೆಯಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಕೂಡ ಕುತೂಹಲವನ್ನು ದುಪ್ಪಟ್ಟು ಮಾಡಿದೆ.


Click it and Unblock the Notifications











