ಗೆಳೆಯನ ಬರ್ತ್‌ಡೇಗೆ 52 ಲಕ್ಷದ ಕಾರನ್ನೇ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಸರ್ಪ್ರೈಸ್‌ಗೆ ಭಾವಕನಾದ ಕುಚಿಕು!

ಸೆಲೆಬ್ರೆಟಿಗಳೇ ಹಾಗೇ ತಮ್ಮ ಆತ್ಮೀಯರಿಗೆ ದಿಢೀರ್ ಸರ್ಪ್ರೈಸ್ ಕೊಟ್ಬಿಡ್ತಾರೆ. ದಿಢೀರನೇ ಭೇಟಿ ಮಾಡುತ್ತಾರೆ. ಗೊತ್ತಿಲ್ಲದಂತೆ ಸಹಾಯ ಹಸ್ತ ಚಾಚುತ್ತಾರೆ. ಸ್ಯಾಂಡಲ್‌ವುಡ್‌ನಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದೆ.

ಇದು ಧ್ರುವ ಸರ್ಜಾ ಹಾಗೂ ಅವರ ಗೆಳೆಯನ ನಡುವಿನ ಬಾಂಧವ್ಯದ ಕಥೆ. ಧ್ರುವ ಸರ್ಜಾ ಎಲ್ಲಿಗೆ ಹೋದರೂ, ಆ ಗೆಳೆಯ ಜೊತೆಯಲ್ಲೇ ಇರುತ್ತಾರೆ. ಸದಾ ಆಕ್ಷನ್ ಪ್ರಿನ್ಸ್ ಹಿಂದೆ ನಿಲ್ಲೋ ಆ ಗೆಳೆಯನ ಹೆಸರೇ ಆಶ್ವಿನ್.

Dhruva Sarja Gifted 52 Lakh Toyota Fortuner to friend Ashwin on his birthday

ಅಶ್ವಿನ್ ಧ್ರುವ ಸರ್ಜಾ ಸಿನಿಮಾಗಳಿಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಅಶ್ವಿನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ದಿನದಂದು ಧ್ರುವ ಸರ್ಜಾ ದಿಢೀರನೇ ಕೊಟ್ಟ ಸರ್ಪ್ರೈಸ್ ಗಿಫ್ಟ್‌ಗೆ ಅವರ ಕಣ್ಣುಗಳು ಒದ್ದೆಯಾಗಿವೆ. ಧ್ರುವ ಕೊಟ್ಟ ದುಬಾರಿ ಉಡುಗೊರೆ, ಆ ಅಪರೂಪದ ಕ್ಷಣದ ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

52 ಲಕ್ಷ ರೂ. ದ ಕಾರು ಉಡುಗೊರೆ

ಆಕ್ಷನ್ ಪ್ರಿನ್ಸ್ ಸ್ಯಾಂಡಲ್‌ವುಡ್‌ನ ಸಕ್ಸಸ್‌ಫುಲ್ ನಟ. ನಟಿಸಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿವೆ. ಶೀಘ್ರದಲ್ಲೇ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಕೂಡ ಆಗುತ್ತೆ. ಹೀಗೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ನಟ ತನ್ನ ಆತ್ಮೀಯರ ಸುಖ-ಸಂತೋಷದಲ್ಲೂ ಭಾಗಿಯಾಗಿದ್ದಾರೆ. ತನ್ನ ಆತ್ಮೀಯ ಗೆಳೆಯ ಅಶ್ವಿನ್‌ಗೆ ದುಬಾರಿ ಮೊತ್ತ ಕಾರನ್ನು ಗಿಫ್ಟ್ ಮಾಡಿದ್ದಾರೆ.

Dhruva Sarja Gifted 52 Lakh Toyota Fortuner to friend Ashwin on his birthday

ಅಶ್ವಿನ್ ಹುಟ್ಟುಹಬ್ಬದಂದು 52 ಲಕ್ಷ ರೂ. ದುಬಾರಿ ಬೆಲೆ ಬಾಳುವ ಕಾರನ್ನು ಧ್ರುವ ಸರ್ಜಾ ಉಡುಗೊರೆಯಾಗಿ ನೀಡಿದ್ದಾರೆ. ದುಬಾರಿ ಟೊಯೊಟಾ ಫಾರ್ಚುನರ್ ಕಾರನ್ನು ನೀಡಿದ್ದಷ್ಟೇ ಅಲ್ಲ, ಬಾಲ್ಯದಲ್ಲೇ ನಿಧನರಾಗಿರೋ ಅಶ್ವಿನ್ ತಂದೆ-ತಾಯಿಯ ಫೋಟೊವನ್ನೂ ಹುಡುಕಿ ಕಾರಿನಲ್ಲಿಟ್ಟು ಗಿಫ್ಟ್ ಮಾಡಿದ್ದಾರೆ.

ಗೆಳೆಯನ ಕಣ್ಣುಗಳು ಒದ್ದೆ

ಧ್ರುವ ಸರ್ಜಾ ಖುದ್ದಾಗಿ ಅಶ್ವಿನ್ ಜೊತೆ ಶೋ ರೂಮ್‌ಗೆ ಬಂದಿದ್ದರು. ದುಬಾರಿ ಕಾರನ್ನು ಸರ್ಪ್ರೈಸ್ ಗಿಫ್ಟ್‌ ಮಾಡಿದ್ದರು. ಆ ಸಂದರ್ಭದಲ್ಲಿ ಅಶ್ವಿನ್ ಕಣ್ಣುಗಳು ಖುಷಿಗೆ ಒದ್ದೆಯಾಗಿದ್ದವು. ಇದೇ ವೇಳೆ ಶೋ ರೂಮ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ.

ಸಂಕಷ್ಟದಲ್ಲಿ ಅಶ್ವಿನ್‌ರನ್ನು ಕರೆತಂದು ತನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ ಧ್ರುವ ಸರ್ಜಾ. ಅಲ್ಲದೆ ಅವರ ಜೀವನಕ್ಕೆ ದಾರಿಯನ್ನೂ ಮಾಡಿಕೊಟ್ಟಿದ್ದಾರೆ. ಇವರಷ್ಟೇ ಅಲ್ಲ, ಕಷ್ಟ ಅಂತ ಬರೋ ಅಭಿಮಾನಿಗಳಿಗೂ ಸಹಾಯ ಹಸ್ತ ಚಾಚಿದ್ದಾರೆ ಅಂತ ಅಶ್ವಿನ್ ಮುಕ್ತವಾಗಿ ಹೇಳಿಕೊಳ್ಳುತ್ತಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ

ಇನ್ನು ಸಿನಿಮಾಗಳ ಕಡೆಗೆ ಬರೋದಾದರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಿವೆ. ಎ ಪಿ ಅರ್ಜುನ್ ನಿರ್ದೇಶಿಸಿರೋ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶೀಘ್ರದಲ್ಲಿಯೇ ಸಿನಿಮಾದ ಅಬ್ಬರದ ಪ್ರಚಾರ ಆರಂಭ ಆಗಲಿದೆ.

ಇನ್ನೊಂದು ಕಡೆ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ' ಶೂಟಿಂಗ್ ನಡೆಯುತ್ತಿದೆ. ಕೆವಿಎನ್ ಪ್ರೊಡಕ್ಷನ್ ದುಬಾರಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಜಯ್ ದತ್ ಹಾಗೂ ಶಿಲ್ಪ ಶೆಟ್ಟಿ ಈ ಸಿನಿಮಾದಲ್ಲಿ ನಟಿಸುತ್ತಿರೋ ಮತ್ತೊಂದು ಅಟ್ರಾಕ್ಷನ್.

More from Filmibeat

English summary
Dhruva Sarja Gifted 52 Lakh Toyota Fortuner to friend Ashwin on his birthday, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X