Dhruva Sarja: ಇದೇ ತಿಂಗಳು 'ಮಾರ್ಟಿನ್' ಟೀಸರ್: ಎಡಿಟಿಂಗ್ ಸ್ಟುಡಿಯೋದಲ್ಲಿ ಆಕ್ಷನ್ ಪ್ರಿನ್ಸ್ ಬ್ಯುಸಿ
ದರ್ಶನ್ ಸಿನಿಮಾ 'ಕ್ರಾಂತಿ' ಆಯ್ತು.. ಈಗ ಎಲ್ಲರ ಕಣ್ಣು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಮೇಲಿದೆ. ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ ಲಿಸ್ಟ್‌ನಲ್ಲಿ 'ಮಾರ್ಟಿನ್' ಕೂಡ ಇದೆ. ಅದರಲ್ಲೂ ಇದು ಎಪಿ ಅರ್ಜುನ್ ಹಾಗೂ ಧ್ರುವ ಕಾಂಬಿನೇಷನ್‌ನಲ್ಲಿ ಬರುತ್ತಿರೋದ್ರಿಂದ ನಿರೀಕ್ಷೆ ಅಂದ್ಕೊಂಡಿದ್ದಕ್ಕಿಂತ ಜಾಸ್ತಿನೇ ಇದೆ.
ಈ ಹಿಂದೆ ಅಂದುಕೊಂಡಂತೆ ಆಗಿದ್ದರೆ 'ಮಾರ್ಟಿನ್' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಬೇಕಿತ್ತು. ಆದರೆ, ಮಧ್ಯದಲ್ಲಾದ ಕೆಲವು ಅಡೆತಡೆಗಳು ಸ್ವಲ್ಪ ಮುಂದೂಡುವಂತೆ ಮಾಡಿತ್ತು.
ಈಗ 'ಮಾರ್ಟಿನ್' ಶೂಟಿಂಗ್ ಕಂಪ್ಲೀಟ್ ಆಗಿ ಮುಗಿದಿದೆ. ಈಗ ಐದು ಭಾಷೆಗಳಲ್ಲಿ ತಮ್ಮ ಸಿನಿಮಾದ ಟೀಸರ್ ರಿಲೀಸ್ ಮಾಡುವುದಕ್ಕೆ ಟೀಮ್ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ವಿಷಯ ಏನಂದ್ರೆ, ಇದೇ ಫೆಬ್ರವರಿಯಲ್ಲೇ 'ಮಾರ್ಟಿನ್' ಟೀಸರ್ ರಿಲೀಸ್ ಆಗುತ್ತಿದೆ. ಅದಕ್ಕೆ ಧ್ರುವ ಕೊಟ್ಟ ಸಾಕ್ಷಿ ಇಲ್ಲಿದೆ ನೋಡಿ.

ಫೆಬ್ರವರಿಯಲ್ಲಿ 'ಮಾರ್ಟಿನ್' ಟೀಸರ್
2023ರಲ್ಲಿ ರಿಲೀಸ್ ಆಗಲಿರೋ ಕೆಲವೇ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಮಾರ್ಟಿನ್' ಕೂಡ ಒಂದು. ಅಂದ್ಹಾಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರೋ ಮೊದಲ ಸಿನಿಮಾ (ಧ್ರುವ ಸರ್ಜಾ) ಕೂಡ ಹೌದು. ಹೀಗಾಗಿ ಕನ್ನಡ ಚಿತ್ರರಂಗಕ್ಕೆ 'ಮಾರ್ಟಿನ್' ಬಿಗ್ ಸಿನಿಮಾ ಅಂತ ಸಾಬೀತಾಗುತ್ತಾ? ಅಂತ ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಅದಕ್ಕೆ ಒಂದು ಟೀಸರ್ ಬೇಕೇ ಬೇಕು. ಅದೇ ಟೀಸರ್ ಈಗ ಸದ್ಯ ಎಡಿಟಿಂಗ್ ಟೇಬಲ್ ಮೇಲಿದೆ.

ಎಡಿಟಿಂಗ್ ಸ್ಟುಡಿಯೋದಲ್ಲಿ ಆಕ್ಷನ್ ಪ್ರಿನ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಅರ್ಜಾ ಎಡಿಟಿಂಗ್ ಸ್ಟುಡಿಯೋ ಬಿಟ್ಟು ಹೋಗುತ್ತಿಲ್ಲ. 'ಮಾರ್ಟಿನ್' ಟೀಸರ್ ರೆಡಿಯಾಗೋವರೆಗೂ ಕದಲುತ್ತಲೇ ಇಲ್ಲ ಅನ್ನೋದಕ್ಕೆ ಅವರೇ ಶೇರ್ ಮಾಡಿರೋ ಒಂದು ಫೋಟೊ ಇದೆ. 'ಮಾರ್ಟಿನ್' ಟೀಸರ್ ಇದೇ ಫೆಬ್ರವರಿಗೆ ರಿಲೀಸ್ ಆಗುತ್ತೆ ಅನ್ನೋದನ್ನು ಅವರೇ ಕನ್ಫರ್ಮ್ ಮಾಡಿದ್ದಾರೆ. ಅದಕ್ಕಾಗಿಯೇ ಟೀಸರ್‌ಗೆ ಬೇಕಾಗಿರೋ ಎಲ್ಲಾ ಕೆಲಸಗಳು ಭರದಿಂದ ಸಾಗಿದೆ. ಇದರಲ್ಲಿ ಧ್ರುವ ಸರ್ಜಾ ಟೀಸರ್ ರೆಡಿಯಾಗಲೇಬೇಕು ಅಂತ ಪಣ ತೊಟ್ಟು ಕೂತಂತಿದೆ.

ಭರ್ಜರಿ ಆಕ್ಷನ್.. ಮಾಸ್ ಎಂಟ್ರಿ ಫಿಕ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದ್ಮೇಲೆ ಡೈಲಾಗ್‌ಗಳು ಇರಬೇಕು. ಆದರೆ, ಈ ಸಿನಿಮಾ ಡೈಲಾಗ್‌ಗಳ ವಿಚಾರದಲ್ಲಿ ಕೊಂಚ ಡಿಫ್ರೆಂಟ್. ಎ ಪಿ ಅರ್ಜುನ್ ಡೈರೆಕ್ಷನ್‌ನಲ್ಲಿ ಸಿನಿಮಾ ಸಿಕ್ಕಾಪಟ್ಟೆ ಮಾಸ್ ಫೀಲ್ ಕೊಡಲಿದೆ ಅನ್ನೋ ಮಾತು ಚಿತ್ರರಂಗದಲ್ಲಿ ಕೇಳುವುದಕ್ಕೆ ಸಿಗುತ್ತಿದೆ. ಈಗಾಗಲೇ 57 ದಿನಗಳ ಕಾಲ ಬರೀ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಶೂಟ್ ಮಾಡಲಾಗಿದೆ. ಅಲ್ಲದೆ ಕಾಶ್ಮೀರ ಸೇರಿದಂತೆ ಹಲವೆಡೆ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಹೀಗಾಗಿ ನಿರೀಕ್ಷೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿದೆ.

'ಪೊಗರು'.. 'ಮಾರ್ಟಿನ್'..'KD'
ಧ್ರುವ ನಟನೆಯ ಕೊನೆಯ ಸಿನಿಮಾ 'ಪೊಗರು' ಮೂರು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಆದ್ರೀಗ 'ಮಾರ್ಟಿನ್' ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 'ಮಾರ್ಟಿನ್' ರಿಲೀಸ್ ಆಗುತ್ತಿದ್ದಂತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'KD' ಫುಲ್ ಸ್ವಿಂಗ್‌ನಲ್ಲಿ ಶೂಟಿಂಗ್ ಆರಂಭ ಆಗುತ್ತೆ. ಜೋಗಿ ಪ್ರೇಮ್ ಸ್ಟೈಲ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಲಿದೆ.


Click it and Unblock the Notifications











