Martin Box Office Day 5:5ನೇ ದಿನ 'ಮಾರ್ಟಿನ್' ಕಲೆಕ್ಷನ್ ಎಷ್ಟು ಕೋಟಿ? ಬಾಕ್ಸಾಫೀಸ್‌ನಲ್ಲಿ ಪ್ಲಸ್ or ಮೈನಸ್?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಬಿಡುಗಡೆಯಾಗಿ 6ನೇ ದಿನಕ್ಕೆ ಕಾಲಿಟ್ಟಿದೆ. ಮೂರು ವರ್ಷಗಳ ಬಳಿಕ ಬಿಗ್‌ ಬಜೆಟ್ ಸಿನಿಮಾದ ಮೂಲಕ ಥಿಯೇಟರ್‌ಗೆ ಲಗ್ಗೆ ಇಟ್ಟಿರುವ ಈ ಸಿನಿಮಾ ಗಳಿಕೆ ಮೇಲೆ ಇಡೀ ಚಿತ್ರರಂಗವೇ ಕಣ್ಣಿಟ್ಟಿದೆ. ನಿರೀಕ್ಷೆ ಮಾಡಿದಂತೆ ಮೊದಲ ಮೂರು ದಿನದ ಕಲೆಕ್ಷನ್ ಉತ್ತಮವಾಗಿದೆ. ಹಾಗೇ ಸೋಮವಾರದಿಂದ ಕೊಂಚ ಇಳಿಕೆ ಕಂಡಿದೆ.

ಯಾವುದೇ ಸಿನಿಮಾ ಆಗಿದ್ದರೂ, ಮೊದಲ ಸೋಮವಾರದಿಂದ ಬಾಕ್ಸಾಫೀಸ್‌ ಕಲೆಕ್ಷನ್ ಡ್ರಾಪ್ ಆಗುತ್ತೆ. ಹಾಗೇ 'ಮಾರ್ಟಿನ್' ಕೂಡ ಸೋಮವಾರದ ಕಲೆಕ್ಷನ್ ಡ್ರಾಪ್ ಆಗಿದ್ದರೂ, ಪ್ರದರ್ಶಕರ ವಲಯಕ್ಕೆ ತೃಪ್ತಿ ಸಿಕ್ಕಿತ್ತು. ಆದರೆ, ಐದನೇ ಇನ್ನೂ ಡ್ರಾಪ್ ಆಗಿದೆ. ಇನ್ನೊಂದು ವೀಕೆಂಡ್ ಬರುವವರೆಗೂ 'ಮಾರ್ಟಿನ್' ಸಿನಿಮಾ ಕಲೆಕ್ಷನ್‌ನಲ್ಲಿ ಹೀಗೆ ಡ್ರಾಪ್ ಅನ್ನು ನಿರೀಕ್ಷೆ ಮಾಡಬಹುದು.

Dhruva Sarja Martin movie box office collection day 5 Karnataka report

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೊಟ್ಟ ಕಥೆಗೆ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಮಾಸ್ ಅವತಾರದಲ್ಲಿ ಧ್ರುವ ಸರ್ಜಾ ಅಖಾಡಕ್ಕೆ ಇಳಿದಿದ್ದರು. ದುಬಾರಿ ಆಕ್ಷನ್ ಸೀಕ್ವೆನ್ಸ್, ಇಂಟ್ರುಡಕ್ಷನ್, ಸಾಂಗ್‌ಗಳಿಂದ 'ಮಾರ್ಟಿನ್' ಗಮನ ಸೆಳೆದಿತ್ತು. ಹಾಗಿದ್ದರೆ, ಐದನೇ ದಿನ 'ಮಾರ್ಟಿನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಇಲ್ಲಿವರೆಗೂ ಒಟ್ಟು ಎಷ್ಟು ಕಲೆಕ್ಷನ್ ಆಗಿದೆ? ನಿರ್ಮಾಪಕರು ಸೇಫ್ ಆಗಿದ್ದಾರಾ? ತಿಳಿಯಲು ಮುಂದೆ ಓದಿ.

5ನೇ ದಿನ 'ಮಾರ್ಟಿನ್' ಗಳಿಸಿದ್ದೆಷ್ಟು?

'ಮಾರ್ಟಿನ್' ಸ್ಯಾಂಡಲ್‌ವುಡ್‌ನಲ್ಲಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ನಿರ್ಮಾಪಕ ಉದಯ್ ಕೆ ಮೆಹ್ತಾ ದೊಡ್ಡ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಮೊದಲ ಮೂರು ದಿನ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ 4ನೇ ದಿನದಿಂದ ಕೊಂಚ ಇಳಿಕೆ ಕಂಡಿದೆ. ಹಾಗಂತ ಕರ್ನಾಟಕದ ಮಾರುಕಟ್ಟೆಗೆ ಅದು ಒಳ್ಳೆಯ ಗಳಿಕೆನೇ. ನಾಲ್ಕನೇ ದಿನ ಈ ಸಿನಿಮಾ 1.7 ಕೋಟಿ ರೂಪಾಯಿ ಗಳಿಸಿತ್ತು. ನಿನ್ನೆ(ಅಕ್ಟೋಬರ್ 15) ಅಂದರೆ ಐದನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು 1 ಕೋಟಿ ರೂಪಾಯಿ ಎಂದು sacnilk ವರದಿ ಮಾಡಿದೆ.

Dhruva Sarja Martin movie box office collection day 5 Karnataka report

ಇಲ್ಲಿವರೆಗೆ 'ಮಾರ್ಟಿನ್' ಕಲೆಕ್ಷನ್ ಎಷ್ಟು?

ಆಕ್ಷನ್ ಪ್ರಿನ್ಸ್ ಇದ್ಮೇಲೆ ಆಕ್ಷನ್ ಸೀನ್‌ಗಳು ಇರಲೇಬೇಕು. 'ಮಾರ್ಟಿನ್‌' ಸಿನಿಮಾದಲ್ಲಿ ಹೆಚ್ಚಾಗಿ ಆಕ್ಷನ್ ಸೀನ್ ಹಾಗೂ ಮಾಸ್ ಸೀನ್‌ಗಳ ಮೇಲೆ ಹೆಚ್ಚು ಗಮನ ಹರಿಸಲಾಗಿತ್ತು. ಸಹಜವಾಗಿ ಧ್ರುವ ಸರ್ಜಾ ಸಿನಿಮಾದಲ್ಲಿ ಡೈಲಾಗ್‌ಗಳು ಹೆಚ್ಚು ಇರುತ್ತವೆ. ಆದರೆ, ಮಾರ್ಟಿನ್‌ನಲ್ಲಿ ದೊಡ್ಡ ದೊಡ್ಡ ಡೈಲಾಗ್‌ಗಳನ್ನು ಹೇಳಿಸಿರಲಿಲ್ಲ. ಹೀಗಿದ್ದರೂ, ಸಿನಿಮಾ ಓಪನಿಂಗ್ ಚೆನ್ನಾಗಿತ್ತು. ನಾಲ್ಕನೇ ದಿನದಿಂದ ಇನ್ನೊಂದು ವೀಕೆಂಡ್ ಬರೋವರೆಗೂ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಎಳೆಯಬೇಕಿದೆ.

5 ದಿನಗಳ ಬಾಕ್ಸ್‌ ಆಫೀಸ್ ಕಲೆಕ್ಷನ್ (ಕರ್ನಾಟಕ)

ಮೊದಲ ದಿನ - 6.5 ಕೋಟಿ ರೂ.
ಎರಡನೇ ದಿನ - 5.1 ಕೋಟಿ ರೂ.
ಮೂರನೇ ದಿನ - 4.1 ಕೋಟಿ ರೂ.
ನಾಲ್ಕನೇ ದಿನ - 1.7 ಕೋಟಿ ರೂ.
ಐದನೇ ದಿನ - 1.0 ಕೋಟಿ ರೂ.
ಒಟ್ಟು - 18.4 ಕೋಟಿ ರೂ.

ನಿರ್ಮಾಪಕರು ಸೇಫ್ ಆದ್ರಾ?

'ಮಾರ್ಟಿನ್' ಕನ್ನಡದ ಬಿಗ್ ಬಜೆಟ್ ಸಿನಿಮಾ ಅಂತ ನಿರ್ಮಾಪಕರೇ ಹೇಳಿದ್ದಾರೆ. ಸಾಕಷ್ಟು ಖರ್ಷು ಮಾಡಿದ ಸಿನಿಮಾ. ಹೀಗಾಗಿ 18 ಕೋಟಿ ರೂಪಾಯಿ ನಿರ್ಮಾಪಕನ ಜೇಬು ತುಂಬಿರಲ್ಲ. ಇನ್ನೋ ಒಂದಿಷ್ಟು ದಿನ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡರೂ ಅಲ್ಲಿಂದ ಲಾಭ ನಿರೀಕ್ಷೆ ಮಾಡಲಾಗುವುದಿಲ್ಲ. ಆದರೆ, ಹಲವು ಭಾಷೆಗಳಿಗೆ ಡಬ್ ಆಗಿರುವುದರಿಂದ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಮಾರಾಟ ಆಗಿರುವ ಸಾಧ್ಯತೆಯಿದೆ. ಬೇರೆ ಬೇರೆ ರೈಟ್ಸ್‌ಗಳಿಂದ ನಿರ್ಮಾಪಕರು ಸೇಫ್ ಆಗಬಹುದು.

ವೀಕೆಂಡ್ ಕಲೆಕ್ಷನ್ ಮುಖ್ಯ

'ಮಾರ್ಟಿನ್' ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಬೇಕು. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಮೂರು ದಿನಗಳು 'ಮಾರ್ಟಿನ್' ಬಾಕ್ಸಾಫೀಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದರೆ, ಬಾಕ್ಸಾಫೀಸ್‌ನಲ್ಲಿ ಈ ವಾರ ಮುಗಿಯುವ ಹೊತ್ತಿಗೆ 25 ಕೋಟಿ ರೂಪಾಯಿ ಕ್ಲಬ್ ಸೇರಬಹುದು. ಏನಕ್ಕೂ ಈ ಅಂಕಿ ಅಂಶಗಳು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, 'ಮಾರ್ಟಿನ್' ತಂಡ ಅಧಿಕೃತ ಮಾಹಿತಿ ನೀಡಬೇಕಿದೆ.

More from Filmibeat

English summary
Dhruva Sarja Martin movie box office collection day 5 Karnataka report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X