Martin Box Office Day 6: 6ನೇ ದಿನ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿತೇ 'ಮಾರ್ಟಿನ್'? ಹೇಗಿದೆ ವಾತಾವರಣ?
2024ರ ಸೆಕೆಂಡ್ ಹಾಫ್‌ನಲ್ಲಿ ಕನ್ನಡ ಚಿತ್ರರಂಗ ನಿಟ್ಟುಸಿರು ಬಿಡುವಂತೆ ಆಗಿದೆ. ಸ್ಟಾರ್ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆಗುತ್ತಿವೆ. ದುನಿಯಾ ವಿಜಯ್ 'ಭೀಮ', ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಮಾರ್ಟಿನ್' ಕೂಡ ಸದ್ದು ಮಾಡುತ್ತಿದೆ.
ಧ್ರುವ ಸರ್ಜಾ ಲೀಡ್‌ನಲ್ಲಿ ನಟಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಕನ್ನಡ, ಹಿಂದಿ, ತೆಲುಗು ಬಿಟ್ಟರೆ ಬೇರೆ ಭಾಷೆಗಳಲ್ಲಿ ಅಷ್ಟೊಂದು ಸದ್ದು ಮಾಡದೇ ಹೋದರೂ, ಮೊದಲ ಐದು ದಿನಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. 'ಮಾರ್ಟಿನ್' ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಮೊದಲ ವಾರ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದರು.

ಮೊದಲ ಐದು ದಿನ 'ಮಾರ್ಟಿನ್' ಕಲೆಕ್ಷನ್ ಇದ್ದಂತೆ ಆರನೇ ದಿನ ಇಲ್ಲ. ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿಲ್ಲ. ಬಹುಶ: ನಾಳೆಯಿಂದ ಮತ್ತೆ 'ಮಾರ್ಟಿನ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಏರಿಕೆ ಆಗುಬಹುದು. ಹಾಗಿದ್ದರೆ ಆರನೇ ದಿನ 'ಮಾರ್ಟಿನ್' ಗಳಿಕೆ ಎಷ್ಟು? ಕಲೆಕ್ಷನ್ ಡ್ರಾಪ್ ಆಗುವುದಕ್ಕೆ ಕಾರಣವೇನು? ತಿಳಿಯಲು ಮುಂದೆ ಓದಿ.
'ಮಾರ್ಟಿನ್' 6ನೇ ದಿನ ಕಲೆಕ್ಷನ್ ಎಷ್ಟು?
ಧ್ರುವ ಸರ್ಜಾ ನಟಿಸಿದ 'ಮಾರ್ಟಿನ್' ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿ ಇಳಿಮುಖವಾಗುತ್ತಿದೆ. ಸೋಮವಾರದಿಂದ ಮುಂದಿನ ವೀಕೆಂಡ್‌ವರೆಗೂ ಡ್ರಾಪ್ ಆಗುವುದು ಸಹಜ. ಆದರೆ, ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ 'ಮಾರ್ಟಿನ್' ಕಲೆಕ್ಷನ್ ಹೆಚ್ಚಾಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. 5ನೇ ದಿನ ಬಾಕ್ಸಾಫೀಸ್‌ನಲ್ಲಿ ಒಂದು ಕೋಟಿ ರೂಪಾಯಿ ಗಳಿಸಿದ್ದ 'ಮಾರ್ಟಿನ್' ಆರನೇ ದಿನವೂ 1 ಕೋಟಿ ರೂಪಾಯಿ ಗಳಿಸಿದೆ ಎನ್ನುತ್ತಿದೆ ವಿತರಕರ ವಲಯ. ಆದರೆ, sacnilk 64 ಲಕ್ಷ ರೂಪಾಯಿ ಎಂದು ವರದಿ ಮಾಡಿದೆ.

ಒಟ್ಟು 6 ದಿನಗಳ ಕಲೆಕ್ಷನ್ ಎಷ್ಟು?
'ಮಾರ್ಟಿನ್' ಸಿನಿಮಾ ಆರಂಭದ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಆದರೆ, ನಂತರದ ದಿನಗಳಲ್ಲಿ ಅದೇ ಕ್ರೇಜ್ ಅನ್ನು ಮುಂದುವರೆಸಿಕೊಂಡು ಹೋಗಿಲ್ಲ. ಮೊದಲ ಮೂರು ದಿನ 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ವೀಕೆಂಡ್ ಮುಗಿಯುವುದರೊಳಗೆ 25 ಕೋಟಿ ರೂಪಾಯಿ ಕಲೆ ಹಾಕುತ್ತಾ? ಅನ್ನೋದು ಸದ್ಯ ಕುತೂಹಲ.
6 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ (ಕರ್ನಾಟಕ)
ಮೊದಲ ದಿನ 6.5 ಕೋಟಿ ರೂ.
ಎರಡನೇ ದಿನ 5.1 ಕೋಟಿ ರೂ.
ಮೂರನೇ ದಿನ 4.1 ಕೋಟಿ ರೂ.
ನಾಲ್ಕನೇ ದಿನ 1.7 ಕೋಟಿ ರೂ.
ಐದನೇ ದಿನ 1.0 ಕೋಟಿ ರೂ.
ಆರನೇ ದಿನ 1.0 ಕೋಟಿ ರೂ.
ಒಟ್ಟು 19.4 ಕೋಟಿ ರೂ.
ವೀಕೆಂಡ್ ಭವಿಷ್ಯವೇನು?
'ಮಾರ್ಟಿನ್' ಸಿನಿಮಾ ವೀಕೆಂಡ್‌ನಲ್ಲಿ ಜಾದು ಮಾಡಲೇಬೇಕಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಈ ಸಿನಿಮಾ ಉತ್ತಮ ಗಳಿಕೆ ಕಂಡರೆ, ನಿರ್ಮಾಪಕರು ನಿಟ್ಟುಸಿರು ಬಿಡಬಹುದು. ಇದರೊಂದಿಗೆ ಈ ವಾರ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗದೇ ಇರುವುದರಿಂದ 'ಮಾರ್ಟಿನ್'ಗೆ ಅಡ್ವಾಂಟೇಜ್ ಹೆಚ್ಚಿದೆ. ಈ ಮೂರು ದಿನ ಜನರನ್ನು ಥಿಯೇಟರ್‌ಗೆ ಎಳೆದು ತರಲೇಬೇಕಿದೆ.
ಲಾಭದಲ್ಲಿ ಇದೆಯಾ?
'ಮಾರ್ಟಿನ್' ನಿರ್ಮಾಪಕರೇ ಹೇಳುವಂತೆ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಆದರೆ, ಸಿನಿಮಾ ಬಜೆಟ್‌ಗೆ ಹೋಲಿಕೆ ಮಾಡಿದರೆ, ಥಿಯೇಟ್ರಿಕಲ್ ಕಲೆಕ್ಷನ್ ಸಾಕಾಗುವುದಿಲ್ಲ. ಆದರೆ, ನಿರ್ಮಾಪಕರಿಗೆ ಬೇರೆ ಬೇರೆ ಮೂಲಗಳಿಂದ ಹಣ ಬಂದಿದೆ ಅನ್ನೋ ಮಾಹಿತಿಯಿದೆ. ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್, ಡಬ್ಬಿಂಗ್, ಆಡಿಯೋ ಹೀಗೆ ಈ ಏರಿಯಾಗಳಲ್ಲಿ ಉತ್ತಮ ಬ್ಯುಸಿನೆಸ್ ಆಗಿದೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿದೆ. ಏನಕ್ಕೂ ಈ ಬಾಕ್ಸಾಫೀಸ್ ಅಂಕಿ ಸಂಖ್ಯೆಗಳು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದಾಗಿದ್ದು, 'ಮಾರ್ಟಿನ್' ತಂಡ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಬೇಕಿದೆ.


Click it and Unblock the Notifications











