Martin Box Office Day 7: 7ನೇ ದಿನ ಬಾಕ್ಸಾಫೀಸ್‌ನಲ್ಲಿ 'ಮಾರ್ಟಿನ್' ಖಬರ್ ಏನು? ₹20 ಕೋಟಿಯ ಗಡಿ ದಾಟಿತೇ?

ಬಹಳ ದಿನಗಳ ಬಳಿಕ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿರುವ ಖುಷಿಯಲ್ಲಿ ಸ್ಯಾಂಡಲ್‌ವುಡ್‌ ಇದೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ರಂದು ದಸರಾ ಹಬ್ಬಕ್ಕೆ ಬಿಡುಗಡೆಯಾಗಿತ್ತು. ಆಕ್ಷನ್ ಪ್ರಿನ್ಸ್ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ 'ಮಾರ್ಟಿನ್' ದೇಶಾದ್ಯಂತ ಪ್ರತಿಕ್ರಿಯೆ ಹೇಗಿರಬಹುದೆಂದು ಕುತೂಹಲದಿಂದ ನೋಡಲಾಗಿತ್ತು.

ಸಿನಿಮಾ ಮಂದಿ ನಿರೀಕ್ಷೆ ಮಾಡಿದಂತೆ 'ಮಾರ್ಟಿನ್‌'ಗೆ ಕನ್ನಡದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಹಿಂದಿ ಹಾಗೂ ತೆಲುಗಿನಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದ್ದು, ತಮಿಳು ಹಾಗೂ ಮಲಯಾಳಂನಲ್ಲಿ 'ಮಾರ್ಟಿನ್‌' ರೆಸ್ಪಾನ್ಸ್ ಚೆನ್ನಾಗಿಲ್ಲ. ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲಿ ಎರಡು ಭಾಷೆಗಳ ಕಲೆಕ್ಷನ್ ಉತ್ತಮವಾಗಿಲ್ಲ. ಆದರೆ, ಕನ್ನಡದ ಮಟ್ಟಿಗೆ ಒಳ್ಳೆಯ ಗಳಿಕೆ ಎನ್ನಬಹುದು.

Dhruva Sarja Martin movie box office collection day 7 Karnataka report

ಒಂದು ವೇಳೆ ಬಜೆಟ್ ಕಡಿಮೆ ಮಾಡಿ ಕೇವಲ ಕನ್ನಡದಲ್ಲಿ ರಿಲೀಸ್ ಮಾಡಿದಿದ್ದರೆ, ನಿರ್ಮಾಪಕರಿಗೆ ಲಾಭ ಹೆಚ್ಚಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸದ್ಯ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದೆ. ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಹಾಗಿದ್ದರೆ, ಬಾಕ್ಸಾಫೀಸ್‌ನಲ್ಲಿ 'ಮಾರ್ಟಿನ್' ಖಬರ್ ಏನಿದೆ? 7ನೇ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ತಿಳಿಯಲು ಮುಂದೆ ಓದಿ.

7ನೇ ದಿನ 'ಮಾರ್ಟಿನ್' ಗಳಿಸಿದ್ದೆಷ್ಟು?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸ್ಟಾರ್ ಆಗಬಹುದು ಅನ್ನೋ ನಿರೀಕ್ಷೆಯನ್ನು 'ಮಾರ್ಟಿನ್' ಹುಟ್ಟಿಸಿದ್ದಂತೂ ನಿಜ. ಆದರೆ, ಸ್ವಲ್ಪದರಲ್ಲೇ ಎಡವಿದೆ ಅನ್ನೋದೂ ಅಷ್ಟೇ ಸತ್ಯ. ಆದರೆ, ಮಾರ್ಟಿನ್ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ. 7ನೇ ದಿನ ಡ್ರಾಪ್ ಆಗಿದ್ದರೂ, 6ನೇ ದಿನಕ್ಕೆ ಹೋಲಿಸಿದರೆ ಹೆಚ್ಚೇನು ಅಂತರವಿಲ್ಲ. 7ನೇ ದಿನ ಈ ಸಿನಿಮಾ ಸುಮಾರು 90 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯ ಲೆಕ್ಕ.

Dhruva Sarja Martin movie box office collection day 7 Karnataka report


ಒಟ್ಟು 6 ದಿನಗಳ ಕಲೆಕ್ಷನ್ ಎಷ್ಟು?

'ಮಾರ್ಟಿನ್' ಕರ್ನಾಟಕದಲ್ಲಿ ಮೊದಲ ಮೂರು ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ನೋಡಿ ಒಂದು ವಾರಕ್ಕೆ 30 ಕೋಟಿ ರೂಪಾಯಿ ಗಳಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಾಲ್ಕನೇ ದಿನ ಗಳಿಕೆಯಲ್ಲಿ ದೊಡ್ಡ ಮಟ್ಟಕ್ಕೆ ಡ್ರಾಪ್ ಆಗಿದ್ದರಿಂದ 20 ಕೋಟಿ ರೂಪಾಯಿ ದಾಟಿದೆ. ಆರನೇ ದಿನ 90 ಲಕ್ಷ ರೂಪಾಯಿ ಆಗಿದ್ದರಿಂದ ಸಿನಿಮಾ ಕಲೆಕ್ಷನ್ 20 ಕೋಟಿಯ ಗಡಿ ಮುಟ್ಟಿದೆ.

7 ದಿನಗಳ ಬಾಕ್ಸ್‌ ಆಫೀಸ್ ಕಲೆಕ್ಷನ್ (ಕರ್ನಾಟಕ)

ಮೊದಲ ದಿನ 6.5 ಕೋಟಿ ರೂ.
ಎರಡನೇ ದಿನ 5.1 ಕೋಟಿ ರೂ.
ಮೂರನೇ ದಿನ 4.1 ಕೋಟಿ ರೂ.
ನಾಲ್ಕನೇ ದಿನ 1.7 ಕೋಟಿ ರೂ.
ಐದನೇ ದಿನ 1.0 ಕೋಟಿ ರೂ.
ಆರನೇ ದಿನ 1.0 ಕೋಟಿ ರೂ.
ಏಳೆನೇ ದಿನ 90 ಲಕ್ಷ ರೂ.
ಒಟ್ಟು 20.30 ಕೋಟಿ ರೂ.

ವೀಕೆಂಡ್‌ನಲ್ಲಿ ₹25 ಕೋಟಿ ದಾಟುತ್ತಾ?

'ಮಾರ್ಟಿನ್' ಪ್ರದರ್ಶನ ಎರಡನೇ ವಾರಕ್ಕೆ ಕಾಲಿಟ್ಟಿದೆ. ಎರಡನೇ ವೀಕೆಂಡ್ ಆರಂಭ ಆಗಿದೆ. ಹೀಗಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಒಳ್ಳೆಯ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಈ ಮೂರು ದಿನಗಳಿಂದ 5 ಕೋಟಿಗೂ ಅಧಿಕ ಕಲೆಕ್ಷನ್ ಆದರೆ, 25 ಕೋಟಿ ರೂ. ಕ್ಲಬ್ ಸೇರಲಿದೆ. ಹಾಗೇ ಯಾವುದೇ ಹೊಸ ಸಿನಿಮಾಗಳು ಇಲ್ಲದೆ ಇರುವುದರಿಂದ 'ಮಾರ್ಟಿನ್‌'ಗೆ ಯಾವುದೇ ಅಡೆತಡೆಯೂ ಇಲ್ಲ.

ಪ್ಯಾನ್ ಇಂಡಿಯಾ ರೆಸ್ಪಾನ್ಸ್ ಹೇಗಿದೆ?

'ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಹಿಂದಿಯಲ್ಲಿ ಒಂದೂವರೆ ಕೋಟಿ ಆಸು ಪಾಸಿನಲ್ಲಿ ಕಲೆಕ್ಷನ್ ಆಗಿದ್ದು, ತೆಲುಗಿನಲ್ಲಿ ಒಂದು ಕೋಟಿ ಕಲೆಕ್ಷನ್ ಆಗಿದೆ ಎನ್ನುತ್ತಾರೆ ಟ್ರೇಡ್ ಎಕ್ಸ್‌ಪರ್ಟ್‌ಗಳು. ಆದರೆ, ತಮಿಳು ಹಾಗೂ ಮಲಯಾಳಂನಲ್ಲಿ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿಲ್ಲ. ಇನ್ನು ಬೆಂಗಾಲಿ ಹಾಗೂ ಫಾರಿನ್ ಭಾಷೆಗಳಲ್ಲಿ ಈ ಸಿನಿಮಾಗೆ ಹೇಗೆ ರೆಸ್ಪಾನ್ಸ್ ಸಿಕ್ಕಿದೆ ಅನ್ನೋ ಮಾಹಿತಿ ಸಿಗಬೇಕಿದೆ.

More from Filmibeat

English summary
Dhruva Sarja Martin movie box office collection day 7 Karnataka report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X