Martin Box Office Day 9: ಬಾಕ್ಸಾಫೀಸ್‌ನಲ್ಲಿ 'ಮಾರ್ಟಿನ್' ಖದರ್ ಹೇಗಿದೆ? ಮೊದಲ ವಾರ ನಿರ್ಮಾಪಕರ ಜೇಬು ಸೇರಿದ್ದೆಷ್ಟು?
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ 'ಮಾರ್ಟಿನ್' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಎಲ್ಲರಿಗೂ ಕುತೂಹಲ. ಮೊದಲ ಮುಗಿಸಿ, ಎರಡನೇ ವಾರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಕಾಲಿಟ್ಟಿದೆ. ಮೊದಲ ಮೂರು ದಿನ ಒಳ್ಳೆ ಕಲೆಕ್ಷನ್ ಮಾಡಿದ್ದ ಸಿನಿಮಾ ಯಾಕೋ ನಿಧಾನವಾಗಿ ಮಂಕಾಗುತ್ತಾ ಸಾಗಿತ್ತು. ಆದರೆ, ಎರಡನೇ ವೀಕೆಂಡ್‌ನಲ್ಲಿ ಮತ್ತೆ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿತ್ತು.
'ಮಾರ್ಟಿನ್' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿಲ್ಲ. ಆದರೆ, ಕರ್ನಾಟಕದ ಮಟ್ಟಿಗೆ ಈ ಸಿನಿಮಾ ಕಲೆಕ್ಷನ್ ಸಮಧಾನ ತಂದಿದೆ. ಆದರೆ, ಸಿನಿಮಾ ಬಜೆಟ್‌ಗೆ ಹೋಲಿಸಿದರೆ 'ಮಾರ್ಟಿನ್' ಎಲ್ಲೂ ಸಾಕಾಗಲ್ಲ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ. ಆದರೆ, ಈ ಸಿನಿಮಾ ಧ್ರುವ ಸರ್ಜಾಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಂದು ಬೂಸ್ಟ್ ಅನ್ನಂತೂ ಕೊಟ್ಟಿದೆ.

ಎ.ಪಿ ಅರ್ಜುನ್ ನಿರ್ದೇಶನ, ಅರ್ಜುನ್ ಸರ್ಜಾ ಕಥೆ, ಉದಯ್ ಮೆಹ್ತಾ ನಿರ್ಮಾಣ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆಯನ್ನಂತೂ ಹುಟ್ಟಾಕಿತ್ತು. ಬೆಂಗಳೂರು ಸೇರಿದಂತೆ ಹಲವು ಏರಿಯಾಗಳಲ್ಲಿ ಮಳೆಯಾಗುತ್ತಿರುವುದರಿಂದಲೂ 'ಮಾರ್ಟಿನ್' ಕಲೆಕ್ಷನ್ ಡ್ರಾಪ್ ಆಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, 9ನೇ ದಿನ ಧ್ರುವ ಸರ್ಜಾ ಸಿನಿಮಾ ಗಳಿಸಿದ್ದೆಷ್ಟು? ಮೊದಲ ವಾರ ನಿರ್ಮಾಪಕರ ಜೇಬು ಸೇರಿದ್ದು ಎಷ್ಟು ಹಣ? ತಿಳಿಯಲು ಮುಂದೆ ಓದಿ.
'ಮಾರ್ಟಿನ್' 9ನೇ ದಿನದ ಕಲೆಕ್ಷನ್ ಎಷ್ಟು?
ಧ್ರುವ ಸರ್ಜಾಗೆ ಮಾಸ್ ಅಭಿಮಾನಿಗಳು ಇದ್ದಾರೆ. ಆದರೆ, ಇದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೇಗೆ ವರ್ಕ್ ಆಗಬಹುದು ಅನ್ನೋ ಕುತೂಹಲವಿತ್ತು. ಹಿಂದಿ ಹಾಗೂ ತೆಲುಗು ಬಿಟ್ಟರೆ, ಬೇರೆ ಕಡೆಗಳಲ್ಲಿ ಹೆಚ್ಚಾಗಿ ಸದ್ದು ಮಾಡಿಲ್ಲ. ಆದರೆ, ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಧ್ರುವ ಸರ್ಜಾ ಸಿನಿಮಾ ಗಳಿಕೆ ಚೆನ್ನಾಗಿತ್ತು. ಆದರೆ, 2ನೇ ಶನಿವಾರ ಬಾಕ್ಸಾಫೀಸ್‌ನಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಿಲ್ಲ. 9ನೇ ದಿನ ಈ ಸಿನಿಮಾ ಗಳಿಸಿದ್ದು ಕೇವಲ 35 ರಿಂದ 40 ಲಕ್ಷ ರೂಪಾಯಿ ಎಂದು ವಿತರಕರ ವಲಯ ಹೇಳುತ್ತಿದೆ.

ಫಸ್ಟ್ ವೀಕೆಂಡ್ ಕಲೆಕ್ಷನ್ ಹೇಗಿದೆ?
'ಮಾರ್ಟಿನ್' ಸಿನಿಮಾ ಮೊದಲ ವಾರ ಕಳೆದು, ಎರಡನೇ ವಾರಕ್ಕೆ ಎಂಟ್ರಿ ಕೊಟ್ಟಿದೆ. ಮೊದಲಿದ್ದ ಸ್ಕ್ರೀನ್‌ಗಳು ಎರಡನೇ ವಾರದಲ್ಲಿ ಇಲ್ಲ. ಹಾಗಾಗಿ ಕಲೆಕ್ಷನ್‌ನಲ್ಲಿ ಸಹಜವಾಗಿಯೇ ಡ್ರಾಪ್ ಆಗಿದೆ. ಹಾಗಿದ್ದರೆ ಮೊದಲ ವಾರ ನಿರ್ಮಾಪಕರಿ ಸಿಕ್ಕ ಹಣ ಎಷ್ಟು? ಯಾವ್ಯಾವ ಏರಿಯಾದಿಂದ ಎಷ್ಟೆಷ್ಟು ಹಣ ಬಂದಿದೆ? ಯಾವ ಏರಿಯಾದಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋ ವರದಿ ಇಲ್ಲಿದೆ.
ಮೊದಲ ವಾರ 'ಮಾರ್ಟಿನ್' ಶೇರ್
BKT 7.4 ಕೋಟಿ ರೂ. (Share)
MMCH 2.4 ಕೋಟಿ ರೂ. (Share)
Chitradurga DAVANAGERE 1.4 ಕೋಟಿ ರೂ. (Share)
Mumbai Karanataka 2.1 ಕೋಟಿ ರೂ. (Share)
Shivamoga+ DK 1.1 ಕೋಟಿ ರೂ. (Share)
Hyderabad Karanataka 80 ಲಕ್ಷ ರೂ. (Share)
ಒಟ್ಟು 15.2 ಕೋಟಿ ರೂ. (Share)
9 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ಧ್ರುವ ಸರ್ಜಾ 'ಮಾರ್ಟಿನ್' ಆಕ್ಷನ್ ಸಿನಿಮಾ. ಧ್ರುವ ಸರ್ಜಾ ಆಕ್ಷನ್ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಷನ್ ಪ್ರಿಯರಿಗೆ 'ಮಾರ್ಟಿನ್' ಇಷ್ಟ ಆಗಿದೆ. ಆದರೆ, ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಬೇಕಿದೆ. ಹಾಗಿದ್ದರೆ, ಕಳೆದ 9 ದಿನಗಳಲ್ಲಿ ಮಾರ್ಟಿನ್ ಗಳಿಸಿದ ಒಟ್ಟು ಕಲೆಕ್ಷನ್ ಹೀಗಿದೆ ನೋಡಿ.
7 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ (ಕರ್ನಾಟಕ)
ಮೊದಲ ದಿನ 6.5 ಕೋಟಿ ರೂ.
ಎರಡನೇ ದಿನ 5.1 ಕೋಟಿ ರೂ.
ಮೂರನೇ ದಿನ 4.1 ಕೋಟಿ ರೂ.
ನಾಲ್ಕನೇ ದಿನ 1.7 ಕೋಟಿ ರೂ.
ಐದನೇ ದಿನ 1.0 ಕೋಟಿ ರೂ.
ಆರನೇ ದಿನ 1.0 ಕೋಟಿ ರೂ.
ಏಳೆನೇ ದಿನ 90 ಲಕ್ಷ ರೂ.
ಎಂಟನೇ ದಿನ 60 ಲಕ್ಷ ರೂ.
ಒಂಬತ್ತನೇ ದಿನ 40 ಲಕ್ಷ ರೂ.
ಒಟ್ಟು 21.30 ಕೋಟಿ ರೂ.
ಭಾನುವಾರ ಎಷ್ಟಾಗುತ್ತೆ ಕಲೆಕ್ಷನ್?
ಹಬ್ಬದ ಬ್ಯುಸಿಯಲ್ಲಿ 'ಮಾರ್ಟಿನ್' ಸಿನಿಮಾ ನೋಡದವರು ಎರಡನೇ ವೀಕೆಂಡ್‌ನಲ್ಲಿ ನೋಡಬಹುದು ಅನ್ನೋ ನಿರೀಕ್ಷೆಯಿದೆ. ಅದರಲ್ಲೂ ಎರಡನೇ ಭಾನುವಾರ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ ಆಗಬಹುದು. ಆದರೆ, ಇಂದು (ಅಕ್ಟೋಬರ್ 20) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮ್ಮಿ ಅಂದರೂ 4 ಕೋಟಿ ಮೇಲೆ ಗಳಿಕೆ ಕಂಡರೆ 25 ಕೋಟಿ ರೂಪಾಯಿ ದಾಟುತ್ತೆ. ಆದರೆ, ಕಲೆಕ್ಷನ್ ಇಷ್ಟೊಂದು ಏರಿಕೆ ಆಗುವುದು ಅನುಮಾನ ಎನ್ನಲಾಗಿದೆ. ಈ ಅಂಕಿ ಅಂಶಗಳು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ್ದು, ಅಧಿಕೃತ ಮಾಹಿತಿಯನ್ನು ಚಿತ್ರತಂಡ ರಿವೀಲ್ ಮಾಡಬೇಕಿದೆ.


Click it and Unblock the Notifications











