"ಅಮ್ಮನ ಪಕ್ಕ ಕೂತಿದ್ದೀನಿ ಎಪಿ ಅರ್ಜುನ್ ಅರೆಸ್ಟ್ ಅಂತ ಬರ್ತಿದ್ರೆ ಹೆಂಗಾಗ್ಬೇಕು ನನಗೆ" ; ಮಾರ್ಟಿನ್ ಡೈರೆಕ್ಟರ್ ಕಿಡಿ

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಧ್ರುವ ಸರ್ಜಾ ಲೀಡ್‌ ರೋಲ್‌ನಲ್ಲಿ ನಟಿಸಿರುವ ಈ ಸಿನಿಮಾ ಸುತ್ತ ವಿವಾದಗಳು ಹುಟ್ಟಿಕೊಂಡಿವೆ. ನಿರ್ದೇಶಕ ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಎಪಿ ಅರ್ಜುನ್ ಪತ್ರಿಕಾಗೋಷ್ಠಿ ಮಾಡಿ ಸ್ಪಷನೆ ಕೊಟ್ಟಿದ್ದಾರೆ.

ಆ ವೇಳೆ 'ಮಾರ್ಟಿನ್' ಸಿನಿಮಾ ತಂಡವಿರಲಿಲ್ಲ. ಈ ಸಂಬಂಧ ಮತ್ತೆ ಮಾರ್ಟಿನ್ ತಂಡ ಪತ್ರಿಕಾ ಗೋಷ್ಠಿಯನ್ನು ಕರೆದಿತ್ತು. ಅದರಲ್ಲಿ ನಿರ್ಮಾಪಕ ಉದಯ್ ಮೆಹ್ತಾ, ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್ ಭಾಗಿಯಾಗಿದ್ದರು. ಈ ವೇಳೆ ಮತ್ತೆ ಎಪಿ ಅರ್ಜುನ್ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆ ಅರೆಸ್ಟ್ ಅಂತ ಪ್ರಸಾರ ಮಾಡಿದ್ದರ ಬಗ್ಗೆನೂ ಕಿಡಿಕಾರಿದ್ದಾರೆ.

Dhruva Sarja Martin movie commission controversy director AP Arjun lashed out at the media

'ಮಾರ್ಟಿನ್' ಸಿನಿಮಾ ವಿಎಫ್‌ಎಕ್ಸ್ ವರ್ಕ್ ಮಾಡುವುಕ್ಕೆ ಇಬ್ಬರು ವ್ಯಕ್ತಿಗಳಿಗೆ 3 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ, ಅವರು ಅಂದುಕೊಂಡ ಸಮಯಕ್ಕೆ ವಿಎಫ್‌ಎಕ್ಸ್ ಕೆಲಸ ಮುಗಿಸಿರಲಿಲ್ಲ. ಹೀಗಾಗಿ ನಿರ್ಮಾಪಕರು ದೂರನ್ನು ದಾಖಲಿಸಿದ್ದರು. ಈ ವೇಳೆ ಇಬ್ಬರು ಆರೋಪಿಗಳು ಎಪಿ ಅರ್ಜುನ್ ಕಮಿಷನ್ ತೆಗೆದುಕೊಂಡಿದ್ದಾರೆಂದು ಆರೋಪಿಸಿದ್ದರು. ಅದಕ್ಕೀಗ ಮತ್ತೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಸಂಭಾವನೆ ವಿಚಾರದ ಬಗ್ಗೆನೂ ಮಾತಾಡಿದ್ದಾರೆ.

"ನಮ್ಮದು ಹಾಗೂ ನಿರ್ಮಾಪಕರದ್ದು ಒಪ್ಪಂದಗಳು ಏನಿವೆ ಅದು ಕಾನೂನಾತ್ಮಕವಾಗಿದೆ. ಅದನ್ನು ಲೀಗಲ್ ಆಗಿಯೇ ಸರಿ ಮಾಡಿಕೊಳ್ಳುತ್ತೇವೆ. ಇಲ್ಲಿವರೆಗೂ ನಾನು ಅದನ್ನು ಹೊರಗೆ ತೆಗೆದುಕೊಂಡೇ ಬಂದಿಲ್ಲ. ಎಲ್ಲರೂ ಮಾಡುವುದು ದುಡ್ಡಿಗಾಗಿಯೇ. ಹೀಗಾಗಿ ನನ್ನ ಹಾಗೂ ನಿರ್ಮಾಪಕರ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ. ಕೊಡಬೇಕು ತಗೋಬೇಕು ಅನ್ನುವುದರಲ್ಲಿಯೇ ನಾನು ಡಿಸೈಡ್ ಮಾಡಿಕೊಳ್ಳುತ್ತೇವೆ." ಎಂದು ಎಪಿ ಅರ್ಜುನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Dhruva Sarja Martin movie commission controversy director AP Arjun lashed out at the media

ಸಿನಿಮಾ ಮಾಡಬೇಕಾದರೂ ಫಿಲ್ಮ್ ಚೇಂಬರ್‌ಗೆ ಹೋಗಿಲ್ಲ. ನಿರ್ಮಾಪಕರು ಹಾಗೂ ನಿರ್ದೇಶಕರ ಮಧ್ಯೆ ಒಪ್ಪಂದ ಆಗಿರುತ್ತೆ. ಈಗ ಎಲ್ಲವೂ ಒಪ್ಪಂದದ ಮೇರೆಗೆ ನಡೆಯುತ್ತಿದೆ. ಬಾಯಿ ಮಾತಿನಲ್ಲಿ ಹೇಳಿದರೆ ಮಾತು ತಪ್ಪಬಹುದು. ಅದಕ್ಕೆ ಲೀಗಲ್ ಆಗಿಯೇ ಎಲ್ಲವೂ ನಡೆದಿದ್ದು, ಅದರ ಪ್ರಕಾರವೇ ಸಿನಿಮಾ ನಡೆದುಕೊಂಡು ಹೋಗುತ್ತಿದೆ ಎಂದು ಎಪಿ ಅರ್ಜುನ್ ತಮ್ಮ ಹಾಗೂ ನಿರ್ಮಾಪಕರ ಮಧ್ಯೆ ಭಿನ್ನಬಿಪ್ರಾಯವಿದೆ ಎನ್ನುವ ವಿಷಯವನ್ನು ಕ್ಲಿಯರ್ ಮಾಡಿದ್ದಾರೆ.

"ಒಬ್ಬರು 50 ಲಕ್ಷ ಅಂದರು, ಇನ್ನೊಬ್ಬರು ಒಂದು ಕೋಟಿ ಅಂದರೆ, ಮತ್ತೊಬ್ಬರು 20 ಕೋಟಿ ಅಂತ ಹೇಳುತ್ತಿದ್ದಾರೆ. ನ್ಯೂಸ್ ಮಾಡುವುದಕ್ಕಿಂತ ಮುಂಚೆ ಆಧಾರಗಳನ್ನು ಇಟ್ಟುಕೊಳ್ಳಬೇಕಲ್ವಾ? ಜಸ್ಟ್ ಐದು ಸಾವಿರ ರೂಪಾಯಿ ಕಮಿಷನ್ ತೆಗೆದುಕೊಂಡಿದ್ದೇನೆ ಅಂತ ಹೇಳಿದರೆ, ನಾನು ಒಂದು ಕೋಟಿ ರೂಪಾಯಿ ಕೊಡುತ್ತೇನೆ. ಇದನ್ನು ನಾನು ಪ್ರೆಸ್ ಮುಂದೆ ಅನೌನ್ಸ್ ಮಾಡುತ್ತಿದ್ದೇನೆ." ಮಾಧ್ಯಮದ ಮುಂದೆ ಸವಾಲು ಹಾಕಿದ್ದಾರೆ.

ಮನೆಯಲ್ಲಿ ಕೂತು ಹೆಂಡತಿ, ಮಗ ಹಾಗೂ ಅಮ್ಮನ ಜೊತೆ ಟಿವಿ ನೋಡುತ್ತಿರುವಾಗ ಎಪಿ ಅರ್ಜುನ್ ಅರೆಸ್ಟ್ ಬರುತ್ತಿತ್ತೆಂದು ಬೇಸರ ವ್ಯಕ್ತಪಡಿಸಿದ್ದಾರೆ. "ನಿರ್ಮಾಪಕರು ಹೇಳಿದ್ರಲ್ಲ ನನ್ನ ಬಗ್ಗೆ ದೂರನ್ನು ಕೊಟ್ಟಿಲ್ಲ ಅಂತ. ಮನೆಯಲ್ಲಿ ಕೂತುಕೊಂಡು ನಾನೇ ನೋಡುತ್ತಿದ್ದೇನೆ. ಪಕ್ಕದಲ್ಲಿ ಹೆಂಡತಿ ಇದ್ದಳು. ಮಗನ ಜೊತೆ ಆಟ ಆಡುತ್ತಿದೆ. ಎಪಿ ಅರ್ಜುನ್ ಅರೆಸ್ಟ್ ಅರೆಸ್ಟ್ ಅಂತ ಬರುತ್ತಿದೆ. ನಮ್ಮ ಅಮ್ಮ ಪಕ್ಕದಲ್ಲಿ ಕೂತಿದ್ದಾರೆ. ಹೆಂಗಾಗ ಬೇಕು ನನಗೆ? " ಎಂದು ನಿರ್ದೇಶಕ ಎಪಿ ಅರ್ಜುನ್ ಆಕ್ರೋಶ ಹೊರಹಾಕಿದ್ದಾರೆ.

More from Filmibeat

English summary
AP Arjun lashed out at the media on Martin commission controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X