Martin Teaser : ಕರ್ನಾಟಕದಲ್ಲಿ ನಂ 1: ಪ್ಯಾನ್‌ ಇಂಡಿಯಾದಲ್ಲಿ ಎಷ್ಟನೇ ಸ್ಥಾನ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಟೀಸರ್ ಸಖತ್ತಾಗೇ ಕಿಕ್ ಕೊಟ್ಟಿದೆ. ಪ್ಯಾನ್ ಇಂಡಿಯಾ ಟೀಸರ್ ಹೇಗಿರುತ್ತೋ? ಇಷ್ಟ ಆಗುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿ ಇದ್ದವರಿಗೆ ಮಾರ್ಟಿನ್ ಟೀಸರ್ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಧ್ರುವ ಸರ್ಜಾ ಎಂಟ್ರಿ, ಆಕ್ಷನ್ ಎಲ್ಲವೂ ಸಿನಿಪ್ರಿಯರಿಗೆ ತುಂಬಾನೇ ಇಷ್ಟ ಆಗಿದೆ. ಈ ಟೀಸರ್ ರಿಲೀಸ್ ಆದಲ್ಲಿಂದ ಯೂಟ್ಯೂಬ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಈ ಟೀಸರ್ ಎಲ್ಲಾ ಕಡೆ ಟ್ರೆಂಡಿಂಗ್‌ನಲ್ಲಿದೆ.

ಅರ್ಜುನ್ ಸರ್ಜಾ ಕಥೆ ಬರೆದಿರೋ 'ಮಾರ್ಟಿನ್' ಪ್ಯಾನ್ ಇಂಡಿಯಾ ಲೆವೆಲ್‌ವರೆಗೂ ಟ್ರೆಂಡ್ ಆಗುತ್ತಿದೆ. ನಿನ್ನೆ (ಫೆಬ್ರವರಿ 23) ಸಂಜೆ ರಿಲೀಸ್ ಆಗಿದ್ದ ಟೀಸರ್ ಸುಮಾರು 19 ಗಂಟೆಗಳ ಬಳಿವೂ ಟ್ರೆಂಡಿಂಗ್‌ನಲ್ಲಿ ಮುಂದುವರೆದಿದೆ. ಧ್ರುವ ಹಾಗೂ ಎ ಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಎರಡನೇ ಸಿನಿಮಾ ಔಟ್ ಅಂಡ್ ಔಟ್ ಆಕ್ಷನ್ ಆಗಿದೆ. ಟೀಸರ್ ಕೂಡ ಹಾಲಿವುಡ್‌ ಲೆವೆಲ್‌ನಲ್ಲಿ ಅಂತ ಸಿನಿಪ್ರಿಯರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ 'ಮಾರ್ಟಿನ್' ಟೀಸರ್ ಟ್ರೆಂಡ್ ಕರ್ನಾಟಕದಲ್ಲಿ ಹೇಗಿದೆ? ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಹೇಗಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

Dhruva Sarja Martin Movie Teaser Treanding No 1 Karnataka Pan India 10th Rank

ಟೀಸರ್ ರಿಲೀಸ್ ಆದ 9 ಗಂಟೆಗಳಲ್ಲಿ ನಂ 1

'ಮಾರ್ಟಿನ್' ಟೀಸರ್ ಅನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಹಾಗಂತ ಎಲ್ಲಾ ಭಾಷೆಗೂ ಒಂದೊಂದು ಟೀಸರ್ ಅಂತ ರಿಲೀಸ್ ಮಾಡಲು ಹೋಗಿರಲಿಲ್ಲ. 'ಕೆಜಿಎಫ್' ಸ್ಟ್ರಾಟಜಿಯನ್ನು 'ಮಾರ್ಟಿನ್' ಕೂಡ ಬಳಸಿತ್ತು. ಎಲ್ಲಾ ಭಾಷೆಗೂ ಸೇರಿ ಒಂದೇ ಟೀಸರ್ ಅಂತ ರಿಲೀಸ್ ಮಾಡಿದ್ದರು. 'ಮಾರ್ಟಿನ್' ತೆರೆಕಂಡ 9 ಗಂಟೆಗಳಲ್ಲಿ ಕರ್ನಾಟಕದಲ್ಲಿ ನಂ 1 ಸ್ಥಾನದಲ್ಲಿತ್ತು. ಆ ಬಳಿಕ 19 ಗಂಟೆಗಳಾದ್ಮೇಲೂ 4ನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ಹೀಗಾಗಿ ಕರ್ನಾಟಕದಲ್ಲಿ ಈ ಸಿನಿಮಾಗೆ ಮ್ಯಾಸೀವ್ ಆರಂಭ ಸಿಕ್ಕಿದೆ ಅಂತ ಹೇಳಬಹುದು.

ಧ್ರುವ ಸರ್ಜಾಗೆ ಕರ್ನಾಟಕದಲ್ಲಿ ಸಮಸ್ಯೆನೇ ಇಲ್ಲ. ಅಲ್ಲದೆ 'ಪೊಗರು' ಬಳಿಕ ತೆಲುಗು ಹಾಗೂ ತಮಿಳು ಜನರಿಗೂ ಪರಿಚಿತರಾಗಿದ್ದಾರೆ. ಇನ್ನು ಸವಾಲು ಎದುರಾಗಿದ್ದು ಹಿಂದಿ ಬೆಲ್ಟ್‌ನಲ್ಲಿ. ಸದ್ಯಕ್ಕೆ 'ಮಾರ್ಟಿನ್' ಟೀಸರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿಯೂ ಟ್ರೆಂಡಿಂಗ್‌ನಲ್ಲಿ 10ನೇ ಸ್ಥಾನದಲ್ಲಿದೆ ಎಂದು ಟೀಮ್ ಮಾಹಿತಿ ನೀಡಿದೆ. ಹೀಗಾಗಿ 'ಮಾರ್ಟಿನ್' ಟೀಸರ್ ಭಾರತದಾದ್ಯಂತ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಕ್ರೇಜ್ ಅನ್ನು ಧ್ರುವ ಸರ್ಜಾ ಮುಂದಕ್ಕೆ ಹೇಗೆ ತೆಗೆದುಕೊಂಡು ಹೋಗುತ್ತಾರೆ ಅನ್ನೋದೇ ಮುಂದಿರುವ ಚಾಲೆಂಜ್.

Dhruva Sarja Martin Movie Teaser Treanding No 1 Karnataka Pan India 10th Rank

'ಮಾರ್ಟಿನ್' ಯಾರು?

ಧ್ರುವ ಸರ್ಜಾ 'ಮಾರ್ಟಿನ್' ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಅದರ ಜೊತೆ ಕುತೂಹಲವನ್ನೂ ಕೆರಳಿದಿದ್ದಾರೆ. ಈ ಸಿನಿಮಾದಲ್ಲಿ ನಾನು 'ಮಾರ್ಟಿನ್' ಅಲ್ಲ ನನ್ನ ಹೆಸರು 'ಅರ್ಜುನ್' ಎಂದು ಹೇಳಿ ಕುತೂಹಲ ಕೆರಳಿಸಿದ್ದಾರೆ. ಹೀಗಾಗಿ ಸಿನಿಪ್ರಿಯರು 'ಮಾರ್ಟಿನ್' ಯಾರು? ಅನ್ನೋ ಪ್ರಶ್ನೆಗೆ ಉತ್ತರವನ್ನು ಹುಡುಕಾಡುತ್ತಿದ್ದಾರೆ. ಈಗಾಗಲೇ ಅರ್ಜುನ್ ಸರ್ಜಾ ಈ ಸಿನಿಮಾದಲ್ಲಿ ನಾನು ನಟಿಸಿಲ್ಲ ಅಂತಾನೂ ಹೇಳಿದ್ದಾರೆ. ಹಾಗಿದ್ದರೆ, ಮಾರ್ಟಿನ್ ಯಾರು? ಪ್ರಶ್ನೆಗೆ ಸಿನಿಮಾ ತೆರೆಕಂಡ ಬಳಿಕ ಉತ್ತರ ಸಿಗಲಿದೆ.

ನೆಟ್ಟಿಗರು "ಮಾರ್ಟಿನ್ ಅನ್ನೋದು ಸಿನಿಮಾದಲ್ಲಿ ಧ್ರುವ ಸರ್ಜಾನ ಕೋಡ್‌ ನೇಮ್" ಎಂದು ಗೆಸ್ ಮಾಡುತ್ತಿದ್ದಾರೆ. ಈ ನಡುವೆ ಮತ್ತೆ ಕೆಲವರು ಧ್ರುವ ಸರ್ಜಾ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಗೆಸ್ ಮಾಡುತ್ತಿದ್ದಾರೆ. ಏನೇ ಇದ್ದರೂ, 'ಮಾರ್ಟಿನ್' ಅಬ್ಬರ ಆರಂಭ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿದೆ. ಆ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.

More from Filmibeat

English summary
Dhruva Sarja Martin Movie Teaser Treanding No 1 Karnataka Pan India 10th Rank, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X