Martin Box Office:3 ದಿನಗಳಲ್ಲಿ 'ಮಾರ್ಟಿನ್' ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್? ಕರ್ನಾಟಕದ ಗಳಿಕೆ ಎಷ್ಟು?

'ಕಾಂತಾರ' ಬಳಿಕ ಕನ್ನಡ ಚಿತ್ರರಂಗದಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಇದೂವರೆಗೂ ಕನ್ನಡದಲ್ಲಿ ನಿರ್ಮಿಸಿದ ಪ್ಯಾನ್ ಇಂಡಿಯಾ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡಿವೆ. ಈಗ 'ಮಾರ್ಟಿನ್' ಸಿನಿಮಾದ ಸರದಿ. ಈ ಸಿನಿಮಾ ಕೂಡ ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗಳಲ್ಲಿ ಮೋಡಿ ಮಾಡುತ್ತಾ? ಅನ್ನೋ ಕುತೂಹಲ ಮೂಡಿದೆ.

'ಮಾರ್ಟಿನ್' ಕನ್ನಡದ ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಸಿನಿಮಾ ಕಲೆಕ್ಷನ್ ಕೂಡ ದೊಡ್ಡ ಮಟ್ಟಕ್ಕೆ ಆಗಬೇಕು. ಆಕ್ಷನ್ ಸೀನ್‌ಗಳು, ಹೀರೋ ಇಂಟ್ರುಡಕ್ಷನ್ ಸೇರಿದಂತೆ ಸಿನಿಮಾಗಾಗಿ ಸಿಕ್ಕಾಪಟ್ಟೆ ಖರ್ಚು ಮಾಡಲಾಗಿದೆ. ಅರ್ಜುನ್ ಸರ್ಜಾ ಕಥೆ ಬರೆದಿದ್ದರೆ, ಎ ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ 'ಮಾರ್ಟಿನ್' ನಿರೀಕ್ಷೆ ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿದೆ.

Dhruva Sarja movie Martin box office collection Day 3 Karnataka Report

ದಸರಾ ಹಬ್ಬದ ಸಂಭ್ರಮದ ಪಕ್ಕಾ ಆಕ್ಷನ್ ಮಾಸ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಯಾವ್ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಕರ್ನಾಟಕದಲ್ಲಿ ಧ್ರುವ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ? ಬೇರೆ ಭಾಷೆಯಲ್ಲಿ 'ಮಾರ್ಟಿನ್‌'ಗೆ ಸಿಕ್ಕಿರುವ ರೆಸ್ಪಾನ್ಸ್ ಏನು? ಮೊದಲ ಮೂರು ದಿನಗಳಲ್ಲಿ 'ಮಾರ್ಟಿನ್' ಸಿನಿಮಾ ಚಮತ್ಕಾರ ಮಾಡಿತೇ? ತಿಳಿಯಲು ಮುಂದೆ ಓದಿ.

'ಮಾರ್ಟಿನ್' 3ನೇ ದಿನದ ಕಲೆಕ್ಷನ್ ಎಷ್ಟು?

'ಮಾರ್ಟಿನ್' ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ ಸಿನಿಮಾವನ್ನು ಪ್ರೇಕ್ಷಕರು ಕೈ ಬಿಟ್ಟಿಲ್ಲ. ಈ ಸಿನಿಮಾ ಬಿಡುಗಡೆಗೂ ಮುನ್ನ ಎಷ್ಟು ಪ್ರಚಾರ ಗಿಟ್ಟಿಸಿಕೊಂಡಿತ್ತೋ ಅದಕ್ಕಿಂತಲೂ ದುಪ್ಪಟ್ಟು ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿದೆ. ಹಬ್ಬ ಮುಗಿಸಿ ರಿಲ್ಯಾಕ್ಸ್ ಆಗಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ (ಅಕ್ಟೋಬರ್ 13) 'ಮಾರ್ಟಿನ್' ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಕರ್ನಾಟಕದ ವಿತರಕರ ಪ್ರಕಾರ 'ಮಾರ್ಟಿನ್' ನಿನ್ನೆ (ಅಕ್ಟೋಬರ್ 13) 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಿದ್ದಾರೆ. ಅದೇ ಇಂಡಸ್ಟ್ರಿ ಟ್ರ್ಯಾಕರ್ Scnilk ಪ್ರಕಾರ 3.25 ಕೋಟಿ ರೂಪಾಯಿ (Early Estimates) ಕಲೆಕ್ಷನ್ ಆಗಿದೆ ಎನ್ನಲಾಗಿದೆ.

'ಮಾರ್ಟಿನ್' 3 ದಿನಗಳ ಗಳಿಕೆ ಎಷ್ಟು?

ಬಹಳ ದಿನಗಳ ಬಳಿಕ ಕನ್ನಡ ಸಿನಿಮಾದ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಕಂಡಿದೆ. ಕಳೆದ ಒಂದೂವರೆ ವರ್ಷದಿಂದ ಚೇತರಿಕೆ ಕಾಣದ ಚಿತ್ರರಂಗಕ್ಕೆ 'ಮಾರ್ಟಿನ್' ಕಿಕ್ ಕೊಟ್ಟಿರೋದಂತೂ ಸತ್ಯ. ಮೊದಲ ಮೂರು ದಿನಗಳಲ್ಲಿ 'ಮಾರ್ಟಿನ್' 15.45 ಕೋಟಿ ರೂಪಾಯಿಯಿಂದ 17 ಕೋಟಿ ರೂಪಾಯಿ ಆಸು ಪಾಸಿನಲ್ಲಿ ಗಳಿಕೆ ಕಂಡಿರುಬಹುದು ಎನ್ನಲಾಗಿದೆ. ಸದ್ಯ Scnilk ರಿಪೋರ್ಟ್ ಹೀಗಿದೆ.

ಮೊದಲ ದಿನ 6.7 ಕೋಟಿ ರೂ.
ಎರಡನೇ ದಿನ 5.5 ಕೋಟಿ ರೂ.
ಮೂರನೇ ದಿನ 3.25 ಕೋಟಿ ರೂ. (Early Estimates)
(ವಿತರಕರ ಲೆಕ್ಕದ 5 ಕೋಟಿ ರೂ.)
ಒಟ್ಟು 15.45 to 17.2 ಕೋಟಿ ರೂ.

ಬೇರೆ ಭಾಷೆಯಲ್ಲಿ ಹೇಗಿದೆ ರೆಸ್ಪಾನ್ಸ್?

'ಮಾರ್ಟಿನ್'ಗೆ ಕನ್ನಡದಲ್ಲಿ ಮೊದಲ ಮೂರು ದಿನ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಉಳಿದ ಭಾಷೆಯಲ್ಲಿ ಅದ್ಭುತ ರೆಸ್ಪಾನ್ಸ್ ಏನೂ ಸಿಕ್ಕಿಲ್ಲ. ಇಂದಿನಿಂದ (ಅಕ್ಟೋಬರ್ 14) 'ಮಾರ್ಟಿನ್' ಬೇರೆ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್ ಕಾಣಬಹುದು ಎನ್ನಲಾಗಿದೆ. ಮೂರು ದಿನಗಳಲ್ಲಿ ಹಿಂದಿಯಲ್ಲಿ 75 ಲಕ್ಷ ರೂಪಾಯಿ, ತೆಲುಗಿನಲ್ಲಿ 1 ಕೋಟಿ ರೂ. ಕಲೆಕ್ಷನ್ ಆಗಿದೆ. ಅದೇ ತಮಿಳು ಹಾಗೂ ಮಲಯಾಳಂನಲ್ಲಿ ಆ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿಲ್ಲ.

ಸೋಮವಾರದ ಪರೀಕ್ಷೆ ಗೆಲ್ಲುತ್ತಾ?

'ಮಾರ್ಟಿನ್' ಸಿನಿಮಾ ಮೊದಲ ದಿನ ದಸರಾದ ಅಡ್ವಾಂಟೇಜ್ ಗಿಟ್ಟಿಸಿಕೊಂಡಿದೆ. ಆದರೆ, ಇಂದಿನಿಂದ (ಅಕ್ಟೋಬರ್ 14) ಅಸಲಿ ಪರೀಕ್ಷೆ ಶುರುವಾಗಲಿದೆ. ಧ್ರುವ ಸರ್ಜಾ ಸಿನಿಮಾ ಈ ವಾರ ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಸಿನಿಮಾ ಸೇಫ್ ಜೋನ್‌ಗೆ ಹೋಗುತ್ತೆ. ದೀಪಾವಳಿ ಹಬ್ಬ ಬರುವವರೆಗೆ ಯಾವುದೇ ದೊಡ್ಡ ಸಿನಿಮಾ ಇಲ್ಲದೇ ಇರುವುದರಿಂದ 'ಮಾರ್ಟಿನ್‌' ಒಳ್ಳೆಯ ಅವಕಾಶವಿದೆ.

More from Filmibeat

English summary
Dhruva Sarja movie Martin box office collection Day 3 Karnataka Report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X