ಇದೇ ಚಿರಂಜೀವಿ ಸರ್ಜಾ ಕೊನೆಯ ಫೋಟೋ; ಅಣ್ಣನೊಂದಿಗಿನ ಕೊನೆಯ ಫೋಟೋ ಬಗ್ಗೆ ಧ್ರುವ ಹೇಳಿದ್ದೇನು?

ಆಕ್ಷನ್ ಪ್ರಿನ್ ಧ್ರುವ ಸರ್ಜಾ ನಟಿಸಿದ 'ಮಾರ್ಟಿನ್' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಮೊದಲ ದಿನವೇ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಾ? ದಾಖಲೆಗಳನ್ನು ಸೃಷ್ಟಿ ಮಾಡುತ್ತಾ? ಅನ್ನೋದು ಕುತೂಹಲ ಎಲ್ಲರಲ್ಲೂ ಇದೆ.

ಕರ್ನಾಟಕದಲ್ಲಿ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಧ್ರುವ ಸರ್ಜಾ ವೃತ್ತಿ ಬದುಕಿಗೆ ಈ ಸಿನಿಮಾ 'ಮಾರ್ಟಿನ್' ಟರ್ನಿಂಗ್ ಪಾಯಿಂಟ್ ಆಗುತ್ತಾ? ಅನ್ನೋ ಪ್ರಶ್ನೆಗೆ ಇನ್ನೇನು ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ. ಧ್ರುವ ಸರ್ಜಾ ನಟಿಸಿದ ಈ ಸಿನಿಮಾ ಬಿಡುಗಡೆಗೂ ಮುನ್ನ ಫಿಲ್ಮಿಬೀಟ್ ಕನ್ನಡಕ್ಕೆ ಸಂದರ್ಶನ ನೀಡಿದ್ದರು.

Dhruva Sarja opens up about his brother Chiranjeevi Sarja last photo

ಈ ವೇಳೆ ಧ್ರುವ ಸರ್ಜಾ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಣ್ಣನೊಂದಿಗೆ ತೆಗೆಸಿಕೊಂಡ ಕೊನೆಯ ಫೋಟೋ ಬಗ್ಗೆ ಧ್ರುವ ಸರ್ಜಾ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಫಿಲ್ಮಿ ಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಧ್ರುವ ಸರ್ಜಾ ತಮ್ಮ ಅಣ್ಣನನ್ನು ನೆನಪಿಸಿಕೊಂಡ ಕ್ಷಣಗಳ ಝಲಕ್ ಇಲ್ಲಿದೆ.

ಚಿರಂಜೀವಿ ಅಗಲುವ ಕೇವಲ ಎರಡು ದಿನ ಮುನ್ನ ಅವರ ಅಂಕಲ್ ಕಿಶೋರ್ ಸರ್ಜಾ ಅವರ ಮನೆಗೆ ಹೋಗಿದ್ದರು. ಕಿಶೋರ್ ಸರ್ಜಾ ಅವರ ಪತ್ನಿಯ ಹುಟ್ಟು ಹಬ್ಬವಿತ್ತು. ಆ ವೇಳೆ ಧ್ರುವ ಸರ್ಜಾ, ಅವರ ಪತ್ನಿ, ಚಿರಂಜೀವಿ ಸರ್ಜಾ ಎಲ್ಲೂ ಅವರ ಮನೆಯಲ್ಲಿ ಸೇರಿಕೊಂಡಿದ್ದರು. ಆ ವೇಳೆ ಕಿಶೋರ್ ಸರ್ಜಾ ಅವರು ಹಿಂದೆ ತೆಗೆದಿದ್ದ ಫೋಟೋವನ್ನು ರೀ ಕ್ರಿಯೇಟ್ ಮಾಡಿದ್ದರು. ಅದು ಚಿರಂಜೀವಿ ಸರ್ಜಾ ಅವರ ಕೊನೆಯ ಫೋಟೋ ಆಗಿತ್ತು.

"ನಮ್ಮ ಅಣ್ಣನಂದು ನನ್ನ ಜೊತೆ ಕೊನೆಯ ಫೋಟೋ. ನಾನು ನನ್ನ ಹೆಂಡ್ತಿ. ಕಿಶೋರ್ ಅಂಕಲ್‌ದು ಮನೆಗೆ ಹೋಗಿರುತ್ತೇವೆ. ಆಂಟಿನ ಭೇಟಿ ಮಾಡುವುದಕ್ಕೆ ಅಂತ. ನಮ್ಮ ಅಣ್ಣ, ನಮ್ಮ ಅತ್ತಿಗೆ ಹಾಗೂ ನನ್ನ ಹೆಂಡ್ತಿ ಎಲ್ಲರೂ ಹೋಗಿರುತ್ತೇವೆ. ಅವತ್ತು ಅಪರ್ಣ ಆಂಟಿ ಬರ್ತ್‌ಡೇ ಇತ್ತು. ಅದು ಜೂನ್ 5ನೇ ತಾರೀಕು." ಎಂದು ಈ ಫೋಟೋ ನೋಡಿ ನೆನಪಿಸಿಕೊಳ್ಳುತ್ತಾರೆ.

Dhruva Sarja opens up about his brother Chiranjeevi Sarja last photo

ಬಹಳ ವರ್ಷಗಳ ಹಿಂದೆ ತೆಗೆದ ಫೋಟೋವನ್ನು ಮತ್ತೆ ರೀ ಕ್ರಿಯೇಟ್ ಮಾಡೋಣ ಅಂತ ಚಿರಂಜೀವಿ ಸರ್ಜಾ ಅವರೇ ಹೇಳಿದ್ದರು. ಅದು ಅವರು ಅಗಲುವ ಎರಡು ದಿನ ಮುನ್ನ."ಆ ನೈಟ್ ನಮ್ಮ ಅಣ್ಣನೇ ಹೇಳಿದ್ದು. ನಾನು ನನ್ನ ಹೆಂಡ್ತಿ ಬಾಲ್ಯದ ಗೆಳತಿಯರು. ನನ್ನ ಹೆಂಡ್ತಿ ನನ್ನ ಬರ್ತ್‌ಡೇಗೆ ಬಂದಿರುತ್ತಾರೆ. ನಾನು ಅವಾಗ ಐದನೇ ಕ್ಲಾಸ್ ಏನೋ ಓದುತ್ತಿದ್ದೆ. ಆ ಚಿಕ್ಕ ವಯಸ್ಸಿನಲ್ಲಿ ಕಿಶೋರ್ ಅಂಕಲ್ ಫೋಟೋ ಕ್ಲಿಕ್ ಮಾಡಿದ್ರು. ಅಲ್ಬಮ್‌ನಲ್ಲಿ ನೋಡು ಅಂದಾಗ, ಅಲ್ಬಮ್ ಹುಡುಕುತ್ತಿದ್ವಿ. 10-15 ಅಲ್ಬಮ್ ಇತ್ತು ಹುಡುಕುತ್ತಿದ್ವಿ. ಒಂದು ಅಲ್ಬಮ್‌ನಲ್ಲಿ ಈ ಫೋಟೋ ಸಿಕ್ಕಿತ್ತು." ಎಂದು ಧ್ರುವ ಸರ್ಜಾ ನೆನಪಿಸಿಕೊಂಡಿದ್ದಾರೆ.

"ಇದು ಊಟಿಯದ್ದು ಅಲ್ವಾ ಅಂತ ನಾನು ಅಂದೆ. ಹೌದು ಅಂತ ಹೋಗಬೇಕಾದರೆ, ನನ್ನ ಬ್ರದರ್ ನಮ್ಮನ್ನು ತಡೆದರು. ಇದನ್ನು ರೀ ಕ್ರಿಯೇಟ್ ಮಾಡೋಣ ಅಂತ, ನೀನು ಹಿಂಗೆ ಬಾ.. ನೀನು ಇಲ್ಲಿ ಇರು. ಕನ್ನಡ ಹಾಕೋ ಅಂತ ಹೇಳಿ ತೆಗೆದ ಫೋಟೋ ಅದು. ಇದು ಅವರ ಕೊನೆಯ ಫೋಟೋ." ಎಂದು ಧ್ರುವ ಸರ್ಜಾ ತಮ್ಮ ಅಣ್ಣನ ಬಗ್ಗೆ ನೆನೆದು ಭಾವುಕರಾಗಿದ್ದಾರೆ.

More from Filmibeat

English summary
Dhruva Sarja opens up about his brother Chiranjeevi Sarja last photo:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X