'ಮಾರ್ಟಿನ್‌'ಗೆ ಕೊನೆಯ ಹಂತದ ಪ್ರಚಾರ; ಯಾವ್ಯಾವ ಊರಲ್ಲಿ ಏನೇನು ನಡೆಯುತ್ತೆ?

'ಕಾಂತಾರ'ನೇ ಕೊನೆ. ಭಾರತದಾದ್ಯಂತ ಸದ್ದು ಮಾಡುವಂತಹ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿಲ್ಲ. ರಿಷಬ್ ಶೆಟ್ಟಿ ಸಿನಿಮಾ ಬಳಿಕ ಮತ್ತೆ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ಗೆ ಹೋಗೇ ಇಲ್ಲ. ಈಗ ಹೆಚ್ಚು ಕಡಿಮೆ ಎರಡು ವರ್ಷಗಳ ಬಳಿಕ ಕನ್ನಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಮಾರ್ಟಿನ್'.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಅಷ್ಟೇ ಅಲ್ಲದೆ ಕನ್ನಡದ ಅತೀ ದೊಡ್ಡ ಬಜೆಟ್ ಸಿನಿಮಾ ಕೂಡ ಇದೇನೆ. ಸುಮಾರು ಮೂರು ವರ್ಷಗಳಿಂದ ನಿರ್ಮಾಣ ಆಗಿರುವ ಈ ಸಿನಿಮಾ ಇದೇ ಅಕ್ಟೋಬರ್ 11 ರಂದು ರಿಲೀಸ್ ಆಗುತ್ತಿದೆ. ದಸರಾ ಹಬ್ಬಕ್ಕೆ ಸಿನಿಪ್ರಿಯರನ್ನು ರಂಜಿಸುವುದಕ್ಕೆ 'ಮಾರ್ಟಿನ್' ಸಜ್ಜಾಗಿ ನಿಂತಿದೆ. ಈಗಾಗಲೇ ಸೆನ್ಸಾರ್ ಕೂಡ ಆಗಿದೆ.

Dhruva Sarja Pan India movie Martin final stage promotion started here is the details

'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗ ಕೊನೆಯ ಹಂತದ ಪ್ರಚಾರ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಅಕ್ಟೋಬರ್ 4 ರಿಂದ ಅಕ್ಟೋಬರ್ 8ನೇ ತಾರೀಕಿನವರೆಗೂ ಬಿಡುವಿಲ್ಲದೆ ಕೊನೆಯ ಹಂತದ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಅಷ್ಟಕ್ಕೂ ಎಲ್ಲೆಲ್ಲಿ ಇವೆಂಟ್ ಇದೆ? ಹೇಗಿರುತ್ತೆ ಇವೆಂಟ್? ತಿಳಿಯಲು ಮುಂದೆ ಓದಿ.

ಹೈದರಾಬಾದ್‌ನಲ್ಲಿ ಇಂಟ್ರೋ ಸಾಂಗ್

ಇಂದಿನಿಂದ (ಅಕ್ಟೋಬರ್ 3) 'ಮಾರ್ಟಿನ್' ಸಿನಿಮಾದ ಕೊನೆಯ ಹಂತದ ಪ್ರಚಾರ ಆರಂಭ ಆಗುತ್ತಿದೆ. ಹೈದರಾಬಾದ್‌ನಲ್ಲಿ 'ಮಾರ್ಟಿನ್' ಸಿನಿಮಾದ ಕೊನೆಯ ಹಂತದ ಪ್ರಚಾರ ಆರಂಭ ಆಗುತ್ತಿದೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಇಂಟ್ರೋ ಸಾಂಗ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಜೊತೆಗೆ ತಮ್ಮ ಸಿನಿಮಾದ ಬಗ್ಗೆ ತೆಲುಗು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತೆ.

Dhruva Sarja Pan India movie Martin final stage promotion started here is the details

ಹುಬ್ಬಳ್ಳಿ ಫ್ಯಾನ್ಸ್ ಭೇಟಿ

ಹೈದರಾಬಾದ್‌ನಿಂದ ಸೀದಾ 'ಮಾರ್ಟಿನ್' ಚಿತ್ರತಂಡ ಹುಬ್ಬಳ್ಳಿಗೆ ಆಗಮಿಸಲಿದೆ. ಅಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲಿದೆ. ಧ್ರುವ ಸರ್ಜಾ ಫ್ಯಾನ್ಸ್ ಭೇಟಿ ಮಾಡಿದ ಬಳಿಕ ಅಲ್ಲಿನ ಮಾಧ್ಯಮಗಳೊಂದಿಗೆ ಸಿನಿಮಾ ಮಾಹಿತಿ ಹಂಚಿಕೊಳ್ಳಲಿದೆ. ಹುಬ್ಬಳ್ಳಿಯಲ್ಲಿ ಕನ್ನಡ ಸಿನಿಮಾದ ಹಲವು ಕಾರ್ಯಕ್ರಮಗಳು ನಡೆದಿವೆ. ಕನ್ನಡ ಸಿನಿಮಾ ಅತೀ ಹೆಚ್ಚು ಸರ್ಪೋರ್ಟ್ ಸಿಗುವ ಹುಬ್ಬಳ್ಳಿಯಲ್ಲಿ ಒಂದು ದಿನ ಪ್ರಚಾರ ನಡೆಯಲಿದೆ.

ದಾವಣಗೆರೆಯಲ್ಲಿ ಪ್ರೀ ರಿಲೀಸ್ ಇವೆಂಟ್

ಹುಬ್ಬಳ್ಳಿ ಮುಗಿಸಿಕೊಂಡು ಧ್ರುವ ಸರ್ಜಾ ಮತ್ತು ಅವರ 'ಮಾರ್ಟಿನ್' ಟೀಮ್ ದಾವಣಗೆರೆಗೆ ಆಗಮಿಸಲಿದ್ದಾರೆ. ಅಕ್ಟೋಬರ್ 6ರಂದು 'ಮಾರ್ಟಿನ್' ಚಿತ್ರದ ಪ್ರೀ ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಳ್ಳಲಾಗಿದೆ. ಅಂದೇ ಧ್ರುವ ಸರ್ಜಾ ಅವರ ಹುಟ್ಟುಹಬ್ಬ ಕೂಡ ಇರುವುದರಿಂದ ದಾವಣಗೆರೆಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಅದರ ಸ್ವರೂಪ ಹೇಗಿರುತ್ತೆ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.

ಮುಂಬೈನಲ್ಲಿ ಫೈನಲ್ ಇವೆಂಟ್

ದಾವಣಗೆರೆ ಬಳಿಕ ಮುಂಬೈಗೆ 'ಮಾರ್ಟಿನ್' ತಂಡ ಪಯಣ ಬೆಳೆಸಲಿದೆ. ಅಲ್ಲಿ ಕೊನೆಯ ಹಂತದ ಪ್ರಚಾರವನ್ನು ಮಾಡಲಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ಹಿಂದಿ ಮಾರುಕಟ್ಟೆ ಮುಖ್ಯ. ಸಿನಿಮಾ ಚೆನ್ನಾಗಿದ್ದರೆ, ಹಿಂದಿ ಏರಿಯಾಗಳಿಂದ ಹೆಚ್ಚು ಹಣ ಕಲೆಕ್ಷನ್ ಆಗುತ್ತೆ. ಈ ಕಾರಣಕ್ಕೆ ಮುಂಬೈನಲ್ಲಿ ಕೊನೆಯದಾಗಿ ಪ್ರಚಾರ ಆರಂಭ ಆಗಲಿದೆ.

More from Filmibeat

English summary
Dhruva Sarja Pan India movie Martin final stage promotion started here is the details:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X