"ಉದಯ್ ಮೆಹ್ತಾ ಎಪಿ ಅರ್ಜುನ್ ಕಿತ್ತಾಟ ಹೊಸದೇನಲ್ಲ.. ಎಲ್ಲರಿಗೂ ಈಗ ಗೊತ್ತಾಗಿದೆಯಷ್ಟೇ"; ಧ್ರುವಾ ಸರ್ಜಾ

2024, ಕನ್ನಡ ಚಿತ್ರರಂಗದ ಮಟ್ಟಿಗೆ ನಿರಾಸೆ ಮೂಡಿಸಿದ ವರ್ಷ. ಈ ವರ್ಷ ಒಂದೇ ಒಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅದ್ಭುತ ಅನ್ನುವಂತಹ ಕಲೆಕ್ಷನ್ ಮಾಡಿಲ್ಲ. ಈ ವರ್ಷ ಕೂಡ ಹೀಗೆ ಮುಗಿದು ಹೋಗುತ್ತೆ ಅನ್ನುವ ಬೇಸರದಲ್ಲಿದ್ದ ಸಿನಿಪ್ರಿಯರ ಪಾಲಿಗೆ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಭರವಸೆ ಮೂಡಿಸುತ್ತಿದೆ. ಅದುವೇ ಧ್ರುವ ಸರ್ಜಾ ನಟನೆಯ 'ಮಾರ್ಟಿನ್'.

ಧ್ರುವ ಸರ್ಜಾ ಹಾಗೂ ಎಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮತ್ತೊಂದು ಅದ್ಧೂರಿ ಸಿನಿಮಾ. ಕಳೆದ ಮೂರೂವರೆ ವರ್ಷಗಳಿಂದ ನಿರ್ಮಾಣಗೊಂಡಿದ್ದ ಈ ಸಿನಿಮಾ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. 'ಮಾರ್ಟಿನ್' ಸಿನಿಮಾದ ನಿರ್ಮಾಪಕ ಎಪಿ ಅರ್ಜುನ್ ಕಮಿಷನ್ ತೆಗೆದುಕೊಂಡಿದ್ದಾರೆ ಅನ್ನೋ ಸಂಗತಿ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

Dhruva Sarja reaction on Martin director AP Arjun Commission matter

ಕೆಲವು ದಿನಗಳ ಹಿಂದೆ ನಿರ್ಮಾಪಕ ಉದಯ್ ಮೆಹ್ತಾ ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಆ ಸಂಬಂಧ 'ಮಾರ್ಟಿನ್‌'ಗೆ ವಿಎಫ್‌ಎಕ್ಸ್ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಬಂಧಿತರು ಎಪಿ ಅರ್ಜುನ್ 50 ಲಕ್ಷ ರೂಪಾಯಿ ಕಮಿಷನ್ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅದಕ್ಕೀಗ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹೆಚ್ಚು ಕಡಿಮೆ ಎರಡು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಅಕ್ಟೋಬರ್ 11ರಂದು 'ಮಾರ್ಟಿನ್' ಸಿನಿಮಾ ರಿಲೀಸ್ ಆಗುತ್ತೆ ಅಂತ ಸಿನಿಮಾ ತಂಡವೂ ಅನೌನ್ಸ್ ಮಾಡಿದೆ. ಈ ಗ್ಯಾಪ್‌ನಲ್ಲಿ ಸಿನಿಮಾ ತಂಡ ಪ್ರಚಾರವನ್ನೂ ಆರಂಭ ಮಾಡಿತ್ತು. ಇದೇ ಆಗಸ್ಟ್ 5ರಂದು 'ಮಾರ್ಟಿನ್' ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗುತ್ತಿದೆ. ಅಷ್ಟರಲ್ಲೇ 'ಮಾರ್ಟಿನ್' ಸುತ್ತ ವಿವಾದ ಹುಟ್ಟಿಕೊಂಡಿದೆ.

Dhruva Sarja reaction on Martin director AP Arjun Commission matter

ಸದ್ಯ ಈ ವಿವಾದ ಬಗ್ಗೆ ಧ್ರುವ ಸರ್ಜಾ ಕೂಲ್ ಆಗಿಯೇ ಗ್ಯಾರಂಟಿ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧ್ರುವ ಸರ್ಜಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಎಪಿ ಅರ್ಜುನ್. ಈ ಕಾರಣಕ್ಕೆ ಈ ಆರೋಪವನ್ನು ಮೇಲ್ನೋಟಕ್ಕೆ ಧ್ರುವ ಸರ್ಜಾ ಕೂಡ ಒಪ್ಪುತ್ತಿಲ್ಲ. ಅಲ್ಲದೇ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ಎಪಿ ಅರ್ಜುನ್ ಕಿತ್ತಾಟ ಇದೇ ಮೊದಲೇನಲ್ಲ. ಎಲ್ಲರಿಗೂ ಈಗ ತಿಳಿದಿದೆ ಅಷ್ಟೇ ಎಂದು ಕೂಲ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

"ಅವರಿಬ್ಬರ ಕಿತ್ತಾಟ ಹೊಸತೇನು ಅಲ್ಲ. ಮಾಧ್ಯಮಗಳಿಗೆ ಹೊಸದಾಗಿ ಗೊತ್ತಾಗಿದೆಯಷ್ಟೇ. ಅದರ ಪಾಡಿಗೆ ಅದು ನಡೀತಾನೇ ಇದೆ. ಇದರಿಂದ ಸಿನಿಮಾಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಸಿಜಿ ಎಲ್ಲಾ ಆಗಿದೆ. ಅಕ್ಟೋಬರ್ 11ಕ್ಕೆ, ನಮ್ಮ ನಾಡ ಹಬ್ಬ ದಸರಾಗೆ ಮಾರ್ಟಿನ್ ಸಿನಿಮಾ ಬಿಡುಗಡೆಯಾಗುತ್ತೆ. ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ರೀ ರೆಕಾರ್ಡಿಂಗ್ ಸೆಕೆಂಡ್ ಹಾಫ್ ಕೂಡ ಮುಗಿದು ಹೋಗಿದೆ. " ಎಂದು ಧ್ರುವ ಸರ್ಜಾ ಹೇಳಿದ್ದಾರೆ.

"ಅವರಿಬ್ಬರ ವಿವಾದದ ಮಧ್ಯೆ ನಾನು ಹೋಗಿಲ್ಲ. ಯಾಕಂದ್ರೆ ನನಗೆ ಮೊದಲ ಚಾನ್ಸ್ ಕೊಟ್ಟ ನಿರ್ದೇಶಕ ಎಪಿ ಅರ್ಜುನ್. ಮತ್ತೆ ನಮ್ಮ ಪ್ರಡ್ಯೂಸರ್ ಉದಯ್ ಮೆಹ್ತಾ. ಇಬ್ಬರೂ ನನಗೆ ಒಳ್ಳೆಯ ಸ್ನೇಹಿತರೇ. ಇವರಿಬ್ಬರ ಮಧ್ಯೆ ನಾನು ಹೋಗಿಲ್ಲ. ಬ್ಯಾಲೆನ್ಸ್ ಆಗುತ್ತೆ. ಸಿನಿಮಾಗೇನು ಮೋಸ ಆಗುವುದಿಲ್ಲ. ಸಿನಿಮಾಗೆ ಮಾಡಿರುವ ಖರ್ಚು ಕಾಣಿಸುತ್ತೆ." ಎಂದು ನಿರ್ದೇಶಕ ಎಪಿ ಅರ್ಜುನ್ ಭರವಸೆ ಕೊಟ್ಟಿದ್ದಾರೆ.

More from Filmibeat

English summary
Dhruva Sarja reaction on Martin director AP Arjun Commission matter:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X