ಪ್ರಥಮ್ ವಿಷಯದಲ್ಲಿ ದರ್ಶನ್ ಸರ್ ಜೊತೆ ನಿಲ್ಲೋದು ನನ್ನ ಕರ್ತವ್ಯ"; ಮುನಿಸು ಮರೆತು ದಾಸನ ಪರ ನಿಂತ ಧ್ರುವ ಸರ್ಜಾ!

ಕಳೆದ ಕೆಲವು ದಿನಗಳಿಂದ ಪ್ರಥಮ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಕಾದಾಟು ತಾರಕ್ಕೇರುತ್ತಲೇ ಇದೆ. ದೇವಸ್ಥಾನದ ಪೂಜೆಗೆಂದು ಹೋಗಿದ್ದ ಪ್ರಥಮ್‌ಗೆ ದರ್ಶನ್ ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿತ್ತು. ಲಾಯರ್ ಜಗದೀಶ್ ಜೊತೆ ಪ್ರಥಮ್ ನಡೆಸಿದ ಸಂಭಾಷಣೆ ವೈರಲ್ ಆಗಿತ್ತು. ಅಲ್ಲಿಂದ ಶುರುವಾಗಿದ್ದು ಇನ್ನೂ ಮುಂದುವರೆಯುತ್ತಲೇ ಇದೆ.

ಅಭಿಮಾನಿಗಳು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸುತ್ತಿರುವ ಪ್ರಥಮ್, ದರ್ಶನ್ ಅವರೇ ಬಂದು ಹೇಳಿಕೆ ಕೊಡಬೇಕೆಂದು ಮಾಧ್ಯಮಗಳ ಮೂಲಕ ಒತ್ತಡ ಹಾಕಿದ್ದರು. ಈ ವೇಳೆ ಪ್ರಥಮ್ ಆಕ್ರೋಶದಲ್ಲಿ ದರ್ಶನ್ ಅವರ ವಿಗ್ ಬಗ್ಗೆನೂ ಮಾತಾಡಿ ಅಗೌರವ ನೀಡಿದ್ದರು. ಅಲ್ಲಿಂದ ಪ್ರಥಮ್ ಹೇಳಿಕೆಯನ್ನು ಚಿತ್ರರಂಗದ ಪ್ರಮುಖರು ಖಂಡಿಸುತ್ತಿದ್ದಾರೆ. ನಿರ್ಮಾಪಕ ಕೆ. ಮಂಜು ವಿರೋಧಿಸಿದ ಬಳಿಕ ಈಗ ಧ್ರುವ ಸರ್ಜಾ ಕೂಡ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ.

Dhruva Sarja says it s my responsibility to support Darshan on Pratham allegation

'ಸು ಫ್ರಮ್ ಸೋ' ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ನಟಿ ರಮ್ಯಾಗೆ ಕಳುಹಿಸಿದ ಅಶ್ಲೀಲ ಸಂದೇಶಗಳನ್ನು ಖಂಡಿಸಿ, ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಅಚ್ಚರಿ ಎಂಬಂತೆ ಹಿಂದಿನ ಮುನಿಸನ್ನು ಮರೆತು ದರ್ಶನ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ರಮ್ಯಾ ಹಾಗೂ ದರ್ಶನ್ ಬಗ್ಗೆ ಧ್ರುವ ಸರ್ಜಾ ಕೊಟ್ಟ ಹೇಳಿಕೆಗಳ ಝಲಕ್ ಇಲ್ಲಿದೆ.

"ರಮ್ಯಾ ಮೇಡಂ ಜೊತೆ ಇದ್ದೇವೆ"

"ರಮ್ಯಾ ಮೇಡಂ ಅವರ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿದರು. ಅದಾದ್ಮೇಲೆ ಕಮೆಂಟ್‌ಗಳು ಶುರುವಾಯ್ತು. ಅವರು ಹೇಳಿದ ಹಾಗೇ ತುಂಬಾನೇ ಕೆಟ್ಟದಾಗಿ ಮೆಸೇಜ್‌ಗಳನ್ನು ಮಾಡಿದರು. ಅದಾದ್ಮೇಲೆ ಕಂಪ್ಲೆಂಟ್ ಕೂಡ ಕೊಟ್ಟರು. ಅದೆಲ್ಲವನ್ನು ಕೇಳಿಯೇ ಬೇಜಾರಾಯ್ತು. ನಾವೆಲ್ಲರೂ ರಮ್ಯಾ ಮೇಡಂ ಅವರ ಜೊತೆ ಇದ್ದೇವೆ" ಧ್ರುವ ಸರ್ಜಾ ಹೇಳಿದ್ದಾರೆ.

"ಪ್ರಥಮ್ ವರ್ತನೆ ಬೇಜಾರಾಗಿದೆ"

"ಎರಡನೇ ವಿಚಾರ, ನಮ್ಮ ಪ್ರಥಮ್ ಸರ್ ಹಾಗೂ ಅವರ ವರ್ತನೆಯಿಂದ ತುಂಬಾನೇ ಬೇಜಾರಾಗಿದೆ. ಈ ವಿಷಯದಲ್ಲಿ ದರ್ಶನ್ ಸರ್ ಜೊತೆ ನಿಲ್ಲುವುದು ನಮ್ಮ ಡ್ಯೂಟಿ ಹಾಗೂ ಕರ್ತವ್ಯವಾಗಿದೆ. ಯಾಕಂದ್ರೆ, ಇಲ್ಲಿ ಮೂರು ವಿಷಯವಿದೆ. ಮೊದಲನೆಯದ್ದು, ಪ್ರಥಮ್ ಸರ್‌ಗೆ ಯಾರೋ ಮಚ್ಚು ಇಟ್ಟರು. ಹಾಗೇ ಡ್ರ್ಯಾಗನ್ ತೋರಿಸಿದರು. ಜೀವ ಬೆದರಿಕೆ ಹಾಕಿದರು ಅಂತ ಹೇಳಿದರು. ಇವೆಲ್ಲವನ್ನೂ ಇವರೇ ಹೇಳಿದ್ದು, ಯಾರೋ ಕಂಪ್ಲೆಂಟ್ ಕೊಡಬೇಡ ಅಂದರು, ಇವರು ಕೊಟ್ಟಿಲ್ಲ. ಎಫ್‌ಐಆರ್ ಫೈಲ್ ಮಾಡಿಲ್ಲ. ತುಂಬಾ ವಿಚಾರವಂತರು ನಮ್ಮ ಲಾಯರ್ ಜಗದೀಶ್ ಸರ್. ಅವರೂ ಹೇಳಿದರು ದೂರು ಕೊಟ್ಟುಬಿಡಿ ಅಂದರು. ಭವಿಷ್ಯದಲ್ಲಿ ಏನಾಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು ಅನಿಸುತ್ತೆ. ಅವರ ಮಾತನ್ನು ಪ್ರಥಮ್ ಕೇಳಬೇಕಿತ್ತು ಅಂತ ನಮ್ಮೆಲ್ಲರಿಗೂ ಅನಿಸಿತು. ಅದಾದ್ಮೇಲೆ ತುಂಬಾನೇ ಕೆಟ್ಟದಾಗಿ, ಗೌರವ ಇಲ್ಲದೆ ಚಿಟಕಿ ಹೊಡೆದುಕೊಂಡು, ವಿಗ್ ಅದೂ ಇದು ಅಂದ್ಕೊಂಡು ಮಾತಾಡಿದರು. ಅದು ಅಗತ್ಯವಿರಲಿಲ್ಲ ಅಂತಾನೂ ಅನಿಸಿತ್ತು. ಎಲ್ಲರಿಗೂ ಮರ್ಯಾದೆ ಅನ್ನೋದು ಇರುತ್ತೆ. ಎಲ್ಲರಿಗೂ ಅವರದ್ದೇ ಆದ ಸೆಲ್ಫ್ ರೆಸ್ಪೆಕ್ಟ್ ಅಂತ ಇರುತ್ತೆ. ಯಾರೋ ಒಬ್ಬರು ಡೌನ್ ಆಗಿದ್ದಾರೆ ಅಂದ ತಕ್ಷಣ. ಆಳಿಗೊಂದು ಕಲ್ಲು ಹೊಡೆಯಬಾರದು." ಎಂದು ಧ್ರುವ ಸರ್ಜಾ ಬೇಸರ ಹೊರ ಹಾಕಿದ್ದಾರೆ.

Dhruva Sarja says it s my responsibility to support Darshan on Pratham allegation

ಶಿವಣ್ಣ, ಸುದೀಪ್ ಸರ್ ಬೇಸರ ಆಗಿರಲ್ವಾ?

"ಎರಡನೇ ವಿಚಾರ, ಈ ವಿಷಯದಿಂದ ಸುದೀಪ್ ಸರ್‌ಗೆ ಬೇಜಾರಾಗಿರಲ್ವಾ? ಶಿವಣ್ಣನಿಗೆ ಬೇಜಾರಾಗಿರಲ್ವಾ? ಪುನೀತ್ ಸರ್ ಇದ್ದಿದ್ದರೆ ಬೇಜಾರಾಗುತ್ತಿರಲಿಲ್ಬಾ? ನಮ್ಮ ಅಣ್ಣನಿಗೆ ಬೇಜಾರಾಗಿತ್ತಿರಲಿಲ್ವಾ? ವಿಜಿ ಸರ್‌ಗೆ ಬೇಜಾರಾಗಿರಲ್ವಾ? ಧನಂಜಯ ಅವರಿಗೆ ಬೇಜಾಗಿರಲ್ವಾ? ಎಲ್ಲರಿಗೂ ಬೇಜಾರಾಗಿರುತ್ತೆ. ನಮ್ಮ ಸೀನಿಯರ್ಸ್ ಇಂತಹ ಉದಾಹರಣೆಯನ್ನು ಕೊಟ್ಟಿದಲ್ಲ. ಶಿವಣ್ಣನೇ ಆಗಲಿ, ನಮ್ಮ ಅಂಕಲ್ ಆಗಿಲಿ ಅನಂತ್‌ ಸರ್‌ಗೆ ಹೀಗೆಲ್ಲ ರೂಢ್ ಆಗಿ ಮಾತಾಡಿದ್ದರೇ? ಹೀಗಾಗಿ ಈ ವಿಷಯದ ಬಗ್ಗೆ ಎಲ್ಲಾ ಕಲಾವಿದರೂ ಮಾತಾಡಬೇಕು. ಈಗ ಸುದೀಪ್ ಸರ್‌ಗೆ, ಪುನೀತ್‌ ಸರ್‌ಗೆ ಯಾರಾದರೂ ಏನಾದರೂ ಅಂದಿದ್ದರೆ ಎಲ್ಲರೂ ಮಾತಾಡುತ್ತಿದ್ವಿ. ಈಗ ಮಾತಾಡುವ ಸಮಯ ಬಂದಿದೆ. ಯಾಕಂದ್ರೆ ಈಗ ಮಾತಾಡಲಿಲ್ಲ ಅಂದರೆ, ಒಬ್ಬರಿದ್ದವರು ಜಾಸ್ತಿ ಜನ ಆಗುತ್ತಾರೆ. ಇದೊಂದು ಕೆಟ್ಟ ಉದಾಹರಣೆಯಾಗಿ ಸೆಟ್ ಆಗುತ್ತೆ." ಎಂದಿದ್ದಾರೆ.

"ಇದು ಒಳ್ಳೆಯ ಬೆಳವಣಿಗೆ ಅಲ್ಲ"

"ಮೂರನೇ ವಿಚಾರ ಬಂದು, ಯಾರು ನಿಮಗೆ ಬೆದರಿಕೆ ಹಾಕಿದ್ರೋ ಅವರ ಮೇಲೆ ನೀವು ಆಕ್ಷನ್ ತೆಗೆದುಕೊಳ್ಳಬೇಕು. ಅದು ಬಿಟ್ಟು ಉಪವಾಸ ಮಾಡುತ್ತೇನೆ. ನೀವು ಬಂದು ಸ್ಟೇಟ್‌ಮೆಂಟ್ ಕೊಡಿ ಅಂತ ಹೇಳೋದು ಒಳ್ಳೆಯ ಬೆಳವಣಿಗೆ ಅಲ್ವೇ ಅಲ್ಲ ಅಂತ ಅನಿಸುತ್ತೆ. ಏನು ಸಾಬೀತು ಮಾಡುವುದಕ್ಕೆ ಹೊರಟಿದ್ದಾರೆ ಅಂತಾನೇ ಗೊತ್ತಾಗುತ್ತಿಲ್ಲ. ಇನ್ನೊಂದು ಆಂಗಲ್‌ನಲ್ಲಿ ಯೋಚಿಸುವುದಾರೇ.. ಒಂದು ವೇಳೆ ಅವರಿಗೆ ಈ ವಿಷಯ ಗೊತ್ತೇ ಇಲ್ಲ ಅಂತ ಪ್ರೂವ್ ಆದರೆ ಏನು? ಅವರು ಏನಾದರೂ ಕಳಿಸಿದ್ರಾ? ಪ್ರಥಮ್‌ಗೆ ಬೆದರಿಕೆ ಹಾಕಿ ಅಂತ? ಖಂಡಿತಾ ಇಲ್ಲ." ಎಂದು ಧ್ರುವ ಸರ್ಜಾ ಹೇಳಿದ್ದಾರೆ.

More from Filmibeat

English summary
Dhruva Sarja says it's my responsibility to support Darshan on Pratham allegation.
Read more about: dhruva sarja darshan ramya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X