Dhruva Sarja: ಅಣ್ಣ ಅಂದ್ರೆ ಅದೆಂಥಾ ಪ್ರೀತಿ.. ಚಿರು ಸಮಾಧಿ ಮೇಲೆ ಮಲಗಿದ್ದ ಧ್ರುವ ಸರ್ಜಾ!
ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಇಬ್ಬರ ಬಾಂಧವ್ಯ ಎಲ್ಲರಿಗೂ ಗೊತ್ತೇ ಇದೆ. ರಕ್ತ ಸಂಬಂಧದಲ್ಲಿ ಅಣ್ಣ ತಮ್ಮಂದಿರಂತೆ ಇದ್ದರೂ, ರಿಯಲ್ ಲೈಫ್‌ನಲ್ಲಿ ಸ್ನೇಹಿತರಂತೆ ಇದ್ದರು. ಒಬ್ಬರಿಗೆ ಇನ್ನೊಬ್ಬರು ಬೆನ್ನೆಲುಬಾಗಿ ನಿಂತಿದ್ದರು. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾ ಬೆಳೆದ ಸಹೋದರಿವರು.
ಅಣ್ಣ ಚಿರಂಜೀವಿ ಸರ್ಜಾ ಅಂದರೆ ಧ್ರುವಾಗೆ ಅಷ್ಟೊಂದು ಬಾಂಧವ್ಯವಿತ್ತು. ದಿಢೀರನೇ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದಾಗ, ಧ್ರುವ ಸರ್ಜಾ ಮಾನಸಿಕವಾಗಿ ಕುಸಿದಿದ್ದರು. ಅಣ್ಣನನ್ನು ಕಳೆದುಕೊಂಡ ದು:ಖದಲ್ಲಿ ಇದ್ದರೂ ಕುಟುಂಬಕ್ಕಾಗಿ ಎಲ್ಲರಿಗೂ ಧೈರ್ಯ ತುಂಬಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಆಕ್ಷನ್ ಪ್ರಿನ್ ಧ್ರುವ ಸರ್ಜಾ ಅಣ್ಣ ಸಮಾಧಿ ಮುಂದೆ ಮಲಗಿದ್ದಾರೆ. ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ.
ಅಣ್ಣ ಅಂದ್ರೆ ಪಂಚ ಪ್ರಾಣ
ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ನಡುವಿನ ಸಂಬಂಧ ದೃಷ್ಟಿ ತೆಗೆಯುವಂತಿತ್ತು. ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ ಅನ್ನೋದು ಹೊಸ ವಿಷಯವೇನಲ್ಲ. ಒಟ್ಟಿಗೆ ಕೂತು ಚೆಸ್ ಆಡೋದು, ಒಂದೇ ತಟ್ಟೆಯಲ್ಲಿ ಊಟ ಮಾಡುವುದ ಡೈಲಿ ರೊಟೀನ್ ಆಗಿತ್ತು.
ಅಣ್ಣ ಸಿನಿಮಾ ರಿಲೀಸ್ ಆದರೆ ತಮ್ಮ ಆ ದಿನ ಫ್ರೀ ಮಾಡಿಕೊಂಡು ಥಿಯೇಟರ್‌ಗೆ ವಿಸಿಟ್ ಹಾಕುತ್ತಿದ್ದರು. ಅದೇ ಧ್ರುವ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಚಿರಂಜೀವಿ ಸರ್ಜಾ ಶೂಟಿಂಗ್ ಚಕ್ಕರ್ ಹೊಡೆದು ಅಭಿಮಾನಿಗಳೊಂದಿಗೆ ಸಿನಿಮಾ ನೋಡುತ್ತಿದ್ದರು. ಅಣ್ಣ-ತಮ್ಮ ಅಂದರೆ ಹೀಗಿರಬೇಕು ಅಂತ ಅದೆಷ್ಟೋ ಅಭಿಮಾನಿಗಳು ಖುಷಿ ಪಟ್ಟಿದ್ದು ಇದೆ. ಆ ಮಟ್ಟಿಗೆ ಅಣ್ಣನ ಮೇಲೆ ಪ್ರೀತಿ ಇತ್ತು.
ಚಿರು ಸಮಾಧಿ ಮೇಲೆ ಮಲಗಿದ ವಿಡಿಯೋ ವೈರಲ್
ಇಂದು( ಸೆಪ್ಟೆಂಬರ್ 8) ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಚಿರಂಜೀವಿ ಸರ್ಜಾ ಸಮಾಧಿ ಮೇಲೆ ಧ್ರುವ ಸರ್ಜಾ ಮಲಗಿರುವ ವಿಡಿಯೋ ಅದು. ಗಾಢ ನಿದ್ದೆಯಲ್ಲಿದ್ದ ಧ್ರುವ ಸರ್ಜಾರನ್ನು ಅಭಿಮಾನಿಗಳು ಬಂದು ಎಬ್ಬಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅಣ್ಣನ ಮೇಲೆ ತಮ್ಮನ ಪ್ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಮೂಲಗಳ ಪ್ರಕಾರ, ಧ್ರುವ ಸರ್ಜಾ ರಾತ್ರಿ ಇಡೀ ಚಿರಂಜೀವಿ ಸರ್ಜಾ ಸಮಾಧಿ ಪಕ್ಕದಲ್ಲಿಯೇ ಮಲಗಿದ್ದರು ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ. ಅಲ್ಲದೆ ಧ್ರುವ ಸರ್ಜಾ ಈ ವಿಡಿಯೋ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಲ್ಲ.
ಚಿರು ಸಮಾಧಿ ಎಲ್ಲಿದೆ?
ಚಿರಂಜೀವಿ ಸರ್ಜಾ ಸಮಾಧಿ ಕನಕಪುರ ರಸ್ತೆಯ ನೆಲಗುಳಿಯ ಬಳಿ ಇರುವ ಧ್ರುವ ಸರ್ಜಾ ಫಾರ್ಮ್ ಹೌಸ್‌ನಲ್ಲಿದೆ. ಇಲ್ಲಿ ಧ್ರುವ ಅಣ್ಣನಿಗಾಗಿ ಸಮಾಧಿಯನ್ನು ಕಟ್ಟಿಸಿದ್ದಾರೆ. ಇಲ್ಲೇ ಇಡೀ ರಾತ್ರಿ ಧ್ರುವ ಸರ್ಜಾ ಮಲಗಿದ್ದರು ಎಂದು ವರದಿಯಾಗಿದೆ.
ಧ್ರುವ ಸರ್ಜಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಈ ವಿಡಿಯೋ ಕಣ್ಣೀರು ಇಡುತ್ತಿರುವ ಎಮೋಜಿಗಳನ್ನು ಹಾಕುತ್ತಿದ್ದಾರೆ. ಕೆಲವರು ಭಾವನಾತ್ಮಕವಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಚಿರಂಜೀವಿ ಸರ್ಜಾ ನಟನೆಯ ಕೊನೆ ಸಿನಿಮಾಗೆ ಸ್ವತ: ಧ್ರುವ ಡಬ್ ಮಾಡಿದ್ದರು. ಅಕ್ಟೋಬರ್ 6ರಂದು ಧ್ರುವ ಹುಟ್ಟುಹಬ್ಬದಂದು ಚಿರು ನಟನೆಯ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಬಿಡುಗಡೆಯಾಗಲಿದೆ.


Click it and Unblock the Notifications











