Martin Box Office:'ಮಾರ್ಟಿನ್' ಮೊದಲ ದಿನದ ಬಾಕ್ಸಾಫೀಸ್ ರಿಪೋರ್ಟ್ ಏನಿದೆ? ಕಲೆಕ್ಷನ್ ಎಷ್ಟು?

ಸುಮಾರು ಒಂದೂವರೆ ಎರಡು ವರ್ಷಗಳ ಬಳಿಕ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಈ ಬಿಗ್ ಬಜೆಟ್ ಸಿನಿಮಾಗೆ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋದು ಕುತೂಹಲ ಎಲ್ಲರಲ್ಲೂ ಇತ್ತು. ಯಾಕಂದ್ರೆ ಇದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ.

'ಮಾರ್ಟಿನ್' ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿ ಇತ್ತು. ಆಕ್ಷನ್ ಸೀನ್‌ಗಳಿಗೆ, ಇಂಟ್ರುಡಕ್ಷನ್‌ಗೆ ಕೋಟಿ ಲೆಕ್ಕದಲ್ಲಿ ಹಣ ಸುರಿದು ಮಾಡಿದ ಸಿನಿಮಾವಿದು. ಉದಯ್ ಮೆಹ್ತಾ ನಿರ್ಮಾಣದ ಈ ಸಿನಿಮಾ ಇಂದು (ಅಕ್ಟೋಬರ್ 11) ದೇಶಾದ್ಯಂತ ಬಿಡುಗಡೆಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದೆ.

Martin movie Box office Day 1 prediction

ಸದ್ಯಕ್ಕೆ ಕನ್ನಡದ ಭಾಷೆಯಲ್ಲಿ 'ಮಾರ್ಟಿನ್‌'ಗೆ ರೆಸ್ಪಾನ್ಸ್ ಹೇಗೆ ಸಿಕ್ಕಿದೆ? ಅನ್ನೋ ಲೆಕ್ಕಾಚಾರವನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿದ್ದಾರೆ. ಕರ್ನಾಟಕದಲ್ಲಿ 'ಮಾರ್ಟಿನ್' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಉಳಿದ ಭಾಷೆಯಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಮಾರ್ಟಿನ್' ಅಂದಾಜು ಗಳಿಕೆ ಎಷ್ಟು?

ಮೂರು ವರ್ಷಗಳ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾವೊಂದು ರಿಲೀಸ್ ಆಗಿದೆ. 'ಮಾರ್ಟಿನ್' ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದ ಧ್ರುವ ಫ್ಯಾನ್ಸ್‌ಗೆ ಕೊನೆಗೂ ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ಅಷ್ಟೊಂದು ರೆಸ್ಪಾನ್ಸ್ ಸಿಗದೇ ಹೋದರೂ, ನೇರವಾಗಿ ಥಿಯೇಟರ್‌ಗೆ ಬಂದು 'ಮಾರ್ಟಿನ್' ನೋಡಿದ್ದಾರೆ. ಸದ್ಯ ವಿತರಕರ ವಲಯ ಹಾಗೂ ಇಂಡಸ್ಟ್ರಿ ಟ್ರೇಡಿಂಗ್ ವೆಬ್‌ ಸ್ಟೈಟ್ Sacnilk ಹೆಚ್ಚು ಕಡಿಮೆ ಒಂದೇ ಅಂಕಿ ಸಂಖ್ಯೆಗಳನ್ನು ಕೊಟ್ಟಿದೆ. ಕರ್ನಾಟಕದಲ್ಲಿ 'ಮಾರ್ಟಿನ್' 6 ರಿಂದ 6.2 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಹಿಸಲಾಗಿದೆ.

ಕರ್ನಾಟಕದಲ್ಲಿ ಹೇಗಿದೆ ರೆಸ್ಪಾನ್ಸ್?

'ಮಾರ್ಟಿನ್' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ. ಕರ್ನಾಟಕದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಬ್ಬದ ದಿನವಾಗಿದ್ದರೂ ಕರ್ನಾಟಕದ ಥಿಯೇಟರ್‌ನಿಂದ ಈ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲಿಯೇ ಈ ಸಿನಿಮಾ ಹೆಚ್ಚು ಕಡಿಮೆ ಆರರಿಂದ ಏಳು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಸಿನಿಮಾ ನಿಖರವಾದ ಕಲೆಕ್ಷನ್ ಅನ್ನು ಚಿತ್ರತಂಡವೇ ರಿವೀಲ್ ಮಾಡುವ ಸಾಧ್ಯತೆಯಿದೆ.

Martin movie Box office Day 1 prediction

ಬೇರೆ ಭಾಷೆಯ ರೆಸ್ಪಾನ್ಸ್ ಹೇಗಿದೆ?

ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್'ಗೆ ತೆಲುಗು ಹಾಗೂ ತಮಿಳಿನಲ್ಲೂ ನಿರೀಕ್ಷೆಯಷ್ಟೇ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲೂ ಎಕ್ಸ್‌ಪೆಕ್ಟ್ ಮಾಡಿದಷ್ಟು ಕಲೆಕ್ಷನ್ ಆಗಿದೆ ಎನ್ನಲಾಗಿದೆ. ತೆಲುಗಿನಲ್ಲಿ ಮೊದಲ ದಿನ 50 ರಿಂದ 60 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಹಾಗೇ ಹಿಂದಿ ಬೆಲ್ಟ್‌ನಲ್ಲಿ 'ಮಾರ್ಟಿನ್' ಸಿನಿಮಾ 25 ರಿಂದ 30 ಲಕ್ಷ ರೂಪಾಯಿ ಮೊದಲ ದಿನದ ಕಲೆಕ್ಟ್ ಮಾಡಿದೆ ಎನ್ನಲಾಗಿದೆ.

ವೀಕೆಂಡ್‌ನಲ್ಲಿ ಹೇಗಿರುತ್ತೆ?

'ಮಾರ್ಟಿನ್' ಸಿನಿಮಾವನ್ನು ಅದ್ಧೂರಿಯಾಗಿ ಶೂಟಿಂಗ್ ಮಾಡಲಾಗಿದೆ. ಇದು ಕನ್ನಡದ ಬಿಗ್‌ ಬಜೆಟ್ ಸಿನಿಮಾಗ. ಈ ಬಗ್ಗೆ ಸಿನಿಮಾ ನೋಡಿದ ಪ್ರೇಕ್ಷಕರು ಮಾತಾಡುತ್ತಿದ್ದಾರೆ. ಹೀಗಾಗಿ ಹಬ್ಬದ ಮೂಡಿನಲ್ಲಿರುವ ಜನರು ವೀಕೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಸಿನಿಮಾ ನೋಡಿದರೆ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗಬಹುದು. ಒಂದು ಅಂದಾಜಿನ ಪ್ರಕಾರ, 30 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Dhruva Sarja Starrer Martin movie Karnataka Box office Day 1 prediction report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X