Martin Box Office Day 2:2ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತೇ 'ಮಾರ್ಟಿನ್'? ಎಷ್ಟಾಯ್ತು ಕಲೆಕ್ಷನ್?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ. ಬಹಳ ದಿನಗಳ ಬಳಿಕ ಕನ್ನಡದಲ್ಲೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉಳಿದ ಸಿನಿಮಾಗಳಂತೆ ಮೋಡಿ ಮಾಡುತ್ತಾ? ಅನ್ನೋ ಕುತೂಹಲ ಎಲ್ಲಾ ಚಿತ್ರರಂಗದಲ್ಲೂ ಇದೆ.

'ಮಾರ್ಟಿನ್' ಸಿನಿಮಾಗೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಕನ್ನಡದಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗಿದ್ದರೆ, ತೆಲುಗು ಹಾಗೂ ಹಿಂದಿಯಲ್ಲೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಇದೇ ಕಲೆಕ್ಷನ್ ಎರಡನೇ ದಿನಕ್ಕೂ ಮುಂದುವರೆಯುತ್ತಾ? ಅನ್ನೋದನ್ನು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ. ಹಬ್ಬದ ಎರಡು ದಿನಗಳಲ್ಲೂ ಪಾಸಿಟಿವ್ ರೆಸ್ಪಾನ್ಸ್ ಸಿಗಬಹುದಾ? ಅನ್ನೋ ಪ್ರಶ್ನೆ ಉತ್ತರ ಸಿಕ್ಕಿದೆ.

Dhruva Sarja Starrer Martin movie Karnataka Box office Day 2 report

ಮೊದಲನೇ ಆಯುಧ ಪೂಜೆ, ಎರಡನೇ ದಿನ ವಿಜಯ ದಶಮಿ. ಈ ಎರಡೂ ದಿನ ಬಾಕ್ಸಾಫೀಸ್‌ನಲ್ಲಿ ಮಸ್ತ್ ಆಗಿಯೇ ಕಲೆಕ್ಷನ್ ಆಗಿದೆ. ಎರಡನೇ ದಿನದ ಕಲೆಕ್ಷನ್ ಕರ್ನಾಟಕದಲ್ಲಿ ಮಾರ್ನಿಂಗ್ ಶೋ ಡಲ್ ಇತ್ತು. ಥಿಯೇಟರ್ ಆಕ್ಯೂಪೆನ್ಸಿ ಕೇವಲ ಶೇ.28.8ರಷ್ಟಿದ್ದರೆ, ಮಧ್ಯಾಹ್ನ ಶೇ.60.07, ಸಂಜೆ ಶೇ.57.78 ರಷ್ಟು ಥಿಯೇಟರ್‌ಗಳು ಫುಲ್ ಆಗಿವೆ ಎಂದು ಇಂಡಸ್ಟ್ರಿ ಟ್ರ್ಯಾಕರ್ Sacnilk ಮಾಹಿತಿ ನೀಡಿದೆ. ಹಾಗಿದ್ದರೆ, ಎರಡನೇ ದಿನ 'ಮಾರ್ಟಿನ್' ಕಲೆಕ್ಷನ್ ಎಷ್ಟು? ಕರ್ನಾಟಕದ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ತಿಳಿಯಲು ಮುಂದೆ ಓದಿ.

2ನೇ ದಿನ 'ಮಾರ್ಟಿನ್' ಕಲೆಕ್ಷನ್ ಎಷ್ಟು?

ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾ 2ನೇ ದಿನವೂ ಕಲೆಕ್ಷನ್ ಉತ್ತಮವಾಗಿದೆ. ಮೊದಲನೇ ದಿನ ಈ ಸಿನಿಮಾ 6.7 ಕೋಟಿ ರೂಪಾಯಿ (Nett) ಕಲೆಕ್ಷನ್ ಮಾಡಿದೆ. ಹಾಗೇ ಎರಡನೇ ದಿನವೂ ಹೆಚ್ಚು ಕಡಿಮೆ ಅಷ್ಟೇ ಕಲೆಕ್ಷನ್ ಆಗಿದೆ. Sacnilk ಪ್ರಕಾರ ಎರಡನೇ ದಿನ 'ಮಾರ್ಟಿನ್' ಸಿನಿಮಾ ಎಲ್ಲಾ ಭಾಷೆಗಳಿಂದ 5 ಕೋಟಿ ರೂಪಾಯಿ (Nett) (Early Estimates) ಕಲೆಕ್ಷನ್ ಆಗಿದೆ. ಎರಡನೇ ದಿನ ಸರಾಸರಿ ಶೇ.48.81ರಷ್ಟು ಕಲೆಕ್ಷನ್ ಆಗಿದೆ.

ವಿತರಕರು ಏನಂತಾರೆ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಎರಡು ದಿನಗಳ ಕಲೆಕ್ಷನ್ ವಿತರಕರ ವಲಯ ಏನು ಅನ್ನುತ್ತೆ? ಅನ್ನೋ ಕುತೂಹಲವಂತೂ ಇದ್ದೇ ಇರುತ್ತೆ. ಕರ್ನಾಟಕದ ವಿತರಕರ ಪ್ರಕಾರ, 'ಮಾರ್ಟಿನ್' ಸಿನಿಮಾ ಸಿಂಗಲ್ ಸ್ಕ್ರೀನ್‌ಗಳಲ್ಲಿ ಹೆಚ್ಚು ಗಳಿಕೆ ಕಂಡಿದೆ. ಧ್ರುವ ಸರ್ಜಾ ಮಾಸ್ ಹೀರೋ ಆಗಿದ್ದರಿಂದ ಥಿಯೇಟರ್‌ಗೆ ಹೋಗಿ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಎರಡು ದಿನಗಳ ಒಟ್ಟು ಕಲೆಕ್ಷನ್ 12 ರಿಂದ 13 ಕೋಟಿ ರೂಪಾಯಿ ಎಂದು ಅಂದಾಜು ಹಾಕಿದ್ದಾರೆ. ಅದೇ Sacnilk 11.70 ಕೋಟಿ ರೂಪಾಯಿ ಎಂದು ಹೇಳಿದೆ.

Dhruva Sarja Starrer Martin movie Karnataka Box office Day 2 report

ಕರ್ನಾಟಕದಲ್ಲಿ ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್ ?

ಎರಡನೇ ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಶೇ. 55ರಷ್ಟು ಥಿಯೇಟರ್ ಫುಲ್ ಆಗಿದೆ. ಅದೇ ಹುಬ್ಬಳ್ಳಿ ಶೇ.43ರಷ್ಟು, ಮೈಸೂರು ಶೇ.73, ಶಿವಮೊಗ್ಗ ಶೇ.62, ಕುಂದಾಪುರ ಶೇ.41, ತುಮಕೂರು ಶೇ.56, ರಾಯಚೂರಿನಲ್ಲಿ ಅತೀ ಹೆಚ್ಚು ಶೇ. 70ರಷ್ಟು ಮಂದಿ ಥಿಯೇಟರ್‌ನಲ್ಲಿ ಸಿನಿಮಾವನ್ನು ನೋಡಿದ್ದಾರೆ. ಮಂಗಳೂರು, ಕಲಬುರ್ಗಿ, ಬೆಳಗಾವಿ ಕಡೆಗಳಲ್ಲಿ ಈ ಸಿನಿಮಾ ರೆಸ್ಪಾನ್ಸ್ ಕಮ್ಮಿಯಿದೆ.

ಯಾವ ಭಾಷೆಯಲ್ಲಿ ಪ್ರತಿಕ್ರಿಯೆ ಹೇಗಿದೆ?

ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾ ಕನ್ನಡದಲ್ಲಿ ಹೆಚ್ಚು ಕಲೆಕ್ಷನ್ ಆಗಿದೆ. ಕನ್ನಡ ಬಿಟ್ಟರೆ, ಹಿಂದಿ ಏರಿಯಾಗಳಲ್ಲಿ ಎರಡು ದಿನಗಳಲ್ಲಿ ಅಂದಾಜು ಒಂದು ಕೋಟಿ ದಾಟಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಇನ್ನೂ ನಿಖರವಾದ ಅಂಕಿ ಅಂಶಗಳು ಸಿಕ್ಕಿಲ್ಲ. ತೆಲುಗಿನಲ್ಲೂ ಸಿನಿಮಾ ತಕ್ಕ ಮಟ್ಟಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮೂಲಗಳ ಪ್ರಕಾರ, ಎರಡು ದಿನಗಳಲ್ಲಿ ತೆಲುಗು ಏರಿಯಾಗಳಲ್ಲಿ ಒಂದೂ ಕೋಟಿ ಇನ್ನೂ ದಾಟಿಲ್ಲ ಎನ್ನಲಾಗಿದೆ.

ಸೂಚನೆ: ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಬೇರೆ ಮೂಲಗಳಿಂದ ಮಾಹಿತಿ ಕಲೆ ಹಾಕಿ ಅಂಕಿ ಅಂಶಗಳನ್ನು ನೀಡಲಾಗಿದ್ದು, ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಬೇಕಿದೆ.

More from Filmibeat

English summary
Dhruva Sarja Starrer Martin movie Karnataka Box office Day 2 report:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X