ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಜೋಡಿಯ 'ಮಾರ್ಟಿನ್' ಸಿನಿಮಾ ಕಥೆ ಎಲ್ಲಿಗೆ ಬಂತು?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. ಈಗಾಗಲೇ ಅಂಬಾರಿ ಅರ್ಜುನ್ ನಿರ್ದೇಶನ 'ಮಾರ್ಟಿನ್' ಶೂಟಿಂಗ್ ಬಹುತೇಕ ಮುಗಿದಿದೆ. ಅಲ್ಲದೆ ಇಷ್ಟರೊಳಗೆ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಅದ್ಯಾಕೋ ಬಿಡುಗಡೆ ನಿಧಾನವಾಗಿ ಸಾಗುತ್ತಿದೆ.

ಧ್ರುವ ಸರ್ಜಾ ಅಭಿಮಾನಿಗಳು 'ಮಾರ್ಟಿನ್' ಜಪ ಮಾಡುತ್ತಿರುವಾಗಲೇ ಅಭಿಮಾನಿಗಳಿಗೆ ಮತ್ತೊಂದು ಹೊಸ ಅಪ್‌ಡೇಟ್ ಸಿಕ್ಕಿದೆ. ಹಾಗಂತ ಇದು 'ಮಾರ್ಟಿನ್' ಸಿನಿಮಾದಿಂದ ಅಲ್ಲ. ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಕೊಟ್ಟಿರೋದು ನಿರ್ದೇಶಕ ಜೋಗಿ ಪ್ರೇಮ್. 'ಮಾರ್ಟಿನ್‌'ಗಿಂತ ತಡವಾಗಿ ಆರಂಭ ಆಗಿದ್ದ 'ಕೆಡಿ' ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಅನ್ನೋ ಸುದ್ದಿ ಓಡಾಡುತ್ತಿದೆ.

Dhruva Sarja starrer Martin or KD which movie going to release first

ಹೊಸ ವರ್ಷದ ಸಂಭ್ರಮದ ಮೂಡಿನಲ್ಲಿ ಜೋಗಿ ಪ್ರೇಮ ಇಂದು (ಜನವರಿ 3) ಕೆಡಿ ಸಿನಿಮಾದ ಖುಷಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಇಡೀ ತಂಡ ಹೊಸ ವರ್ಷವನ್ನು ಕೇಕ್ ಕಟ್ ಮಾಡಿ ಸಂಭ್ರಮಿಸುವ ವಿಡಿಯೋವನ್ನೂ ಶೇರ್ ಮಾಡಿದ್ದಾರೆ. ಇಲ್ಲಿ ಖುಷಿ ವಿಷಯ ಏನಪ್ಪಾ ಅಂದ್ರೆ, ಈ ವಿಡಿಯೋ ಜೊತೆಗೆ ಇದೇ ವರ್ಷ 'ಕೆಡಿ' ಸಿನಿಮಾ ರಿಲೀಸ್ ಆಗುತ್ತೆ ಅಂತಾನೂ ಹೇಳಿಕೊಂಡಿದ್ದಾರೆ.

"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.. ಇದೇ 2024ರಲ್ಲಿ 'ಕೆಡಿ' ಸಿನಿಮಾ ಇಡೀ ವಿಶ್ವವನ್ನು ವಶಪಡಿಸಿಕೊಳ್ಳುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ" ಎಂದು ಜೋಗಿ ಪ್ರೇಮ್ ವಿಡಿಯೋ ಜೊತೆಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಹೊಸದೊಂದು ಅನುಮಾನ ಮೂಡುವುದಕ್ಕೆ ಶುರುವಾಗಿದೆ.

ಒಂದ್ಕಡೆ 'ಮಾರ್ಟಿನ್' ಸಿನಿಮಾ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಇನ್ನೊಂದು ಕಡೆ 'ಕೆಡಿ' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದೆ ಅನ್ನೋ ಸುದ್ದಿ ಹೊರಬಿದ್ದಿದೆ. 'ಮಾರ್ಟಿನ್' ರೆಡಿಯಿದ್ದರೂ, ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ. ಹೀಗಾಗಿ ಬೈ ಚಾನ್ಸ್ 'ಕೆಡಿ' ಮೊದಲು ಬಿಡುಗಡೆ ಆಗಬಹುದಾ? ಅನ್ನೋ ಗುಮಾನಿ ಅಭಿಮಾನಿಗಳಲ್ಲಿ ಮೂಡಿರೋದಂತೂ ನಿಜ.

'ಮಾರ್ಟಿನ್' ಹಾಗೂ 'ಕೆಡಿ' ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳೇ. ಆದರೆ, 'ಕೆಡಿ' ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ತಾರೆಯರು ಇದ್ದಾರೆ. ಹೀಗಾಗಿ ಈ ಸಿನಿಮಾ ಬೇಗನೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರೀಚ್ ಆಗಬಹುದು. ಒಂದು ವೇಳೆ 'ಕೆಡಿ' ಸಿನಿಮಾ ತೆರೆಕಂಡ ಬಳಿಕ 'ಮಾರ್ಟಿನ್' ರಿಲೀಸ್ ಆದರೆ, ನಷ್ಟಕ್ಕಿಂತ ಹೆಚ್ಚು ಲಾಭವೇ. ಹೀಗಾಗಿ ಎರಡೂ ತಂಡಗಳು ಇಂತಹದ್ದೊಂದು ಚರ್ಚೆ ಮಾಡಿಬಹುದು ಅನ್ನೋ ಅನುಮಾನ ಹಲವರಲ್ಲಿದೆ.

ಆದರೆ, ಇನ್ನೊಂದು ಮೂಲ ಬೇರೆ ಕಥೆಯನ್ನೇ ಹೇಳುತ್ತಿದೆ. ಸಂಕ್ರಾಂತಿ ವೇಳೆಗೆ 'ಮಾರ್ಟಿನ್' ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಚಿತ್ರತಂಡ ಬಿಗ್ ಅಪ್‌ಡೇಟ್ ಕೊಡಬಹುದು. ಅದಕ್ಕೆ ಬೇಕಿರೋ ಸಕಲ ಸಿದ್ಧತೆಗಳನ್ನೂ ಚಿತ್ರತಂಡ ಮಾಡಿಕೊಳ್ಳುತ್ತಿದೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ 'ಮಾರ್ಟಿನ್' ಮೊದಲು ರಿಲೀಸ್ ಆಗುತ್ತಾ? 'ಕೆಡಿ' ಮೊದಲು ರಿಲೀಸ್ ಆಗುತ್ತಾ? ಅನ್ನೋ ಪ್ರಶ್ನೆಯಂತೂ ಮೂಡಿರೋದು ನಿಜ.

More from Filmibeat

English summary
Martin or KD : Dhruva Sarja's which movie going to release first:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X