'ಮಾರ್ಟಿನ್' ಟೀಸರ್ ಡಿಲೀಟ್.. ರಷ್ಯಾ ಹ್ಯಾಕರ್ಸ್‌ಗಳದ್ದೇ ಕೈವಾಡ? ಧ್ರುವ ತಂಡಕ್ಕೆ ಸಿಕ್ಕಿದ್ದೆಷ್ಟು ಹೋಗಿದ್ದೆಷ್ಟು?
ಈ ವರ್ಷ ರಿಲೀಸ್ ಆಗಲಿರೋ ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್'. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎ ಪಿ ಅರ್ಜುನ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ರೆಡಿಯಾಗಿದೆ.
ಈಗಾಗಲೇ 'ಮಾರ್ಟಿನ್' ಸಿನಿಮಾದ ಪವರ್‌ಫುಲ್ ಆಕ್ಷನ್ ಟೀಸರ್ ರಿಲೀಸ್ ಆಗಿದ್ದು, ದೇಶಾದ್ಯಂತ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಯೂಟ್ಯೂನ್‌ನಲ್ಲಿ 'ಮಾರ್ಟಿನ್' ಟೀಸರ್ ಹೊಸ ದಾಖಲೆ ಬರೆಯುವತ್ತ ಮುನ್ನುಗುತ್ತಿತ್ತು. ಅಷ್ಟರಲ್ಲೇ ಟೀಸರ್ ಅನ್ನೇ ಕಿಡಿಗೇಡಿಗಳು ಡಿಲೀಟ್ ಮಾಡಿದ್ದರು.

ಹೌದು, ಧ್ರುವ ಸರ್ಜಾ ನಟಿಸಿರೋ ಮೊದಲ ಪ್ಯಾನ್ ಇಂಡಿಯಾ ಸಿನಿಮಾದ ಮೊದಲ ಟೀಸರ್ ಅನ್ನು ಕಿಡಿಗೇಡಿಗಳು ಡಿಲೀಟ್ ಮಾಡಿದ್ದರು. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಧ್ರುವ ಸರ್ಜಾ ಅಭಿಮಾನಿಗಳು 'ಮಾರ್ಟಿನ್' ಸಿನಿಮಾವನ್ನು ಗೆಲ್ಲಿಸೋ ಪಣ ತೊಟ್ಟು ನಿಂತಿದ್ದಾರೆ. ಅಸಲಿಗೆ 'ಮಾರ್ಟಿನ್' ಟೀಸರ್ ರಿಲೀಸ್ ಆಗಿದ್ದು ಯಾವಾಗ? ಡಿಲೀಟ್ ಮಾಡಿದ್ದು ಯಾರು? ಸಿಕ್ಕಿದ್ದೆಷ್ಟು ಹೋಗಿದ್ದೆಷ್ಟು? ಈ ಎಲ್ಲಾ ಡಿಟೈಲ್ಸ್ ತಿಳಿಯಲು ಮುಂದೆ ಓದಿ.
'ಮಾರ್ಟಿನ್' ಟೀಸರ್ ಆಗಿದ್ಯಾವಾಗ?
ಧ್ರುವ ಸರ್ಜಾ ಆಕ್ಷನ್ ಲುಕ್ ಕೊಟ್ಟಿರೋ ಸಿನಿಮಾ 'ಮಾರ್ಟಿನ್' ಟೀಸರ್‌ಗೆ ಮೆಚ್ಚುಗೆ ಸಿಕ್ಕಿತ್ತು. ಯೂಟ್ಯೂನ್‌ನಲ್ಲೂ ಟೀಸರ್‌ಗೆ ಭರ್ಜರಿ ವೀವ್ಸ್ ಸಿಕ್ಕಿತ್ತು. ಆದರೆ, ಮೂರು ದಿನಗಳ ಹಿಂದೆ, ಅಂದ್ರೆ ಶುಕ್ರವಾರ (ಏಪ್ರಿಲ್ 21) 'ಮಾರ್ಟಿನ್' ಟೀಸರ್ ಅನ್ನು ಲಹರಿ ಯೂಟ್ಯೂಬ್ ಚಾನೆಲ್‌ನಿಂದ ಡಿಲೀಟ್ ಆಗಿತ್ತು. ತಕ್ಷಣವೇ ಈ ವಿಷಯವನ್ನು ಅಭಿಮಾನಿಗಳು ಚಿತ್ರತಂಡದ ಗಮನಕ್ಕೆ ತಂದಿದ್ದರು.
'ಮಾರ್ಟಿನ್' ಟೀಸರ್ ಡಿಲೀಟ್ ಆದ ಬಳಿಕ ಲಹರಿ ಯೂಟ್ಯೂನ್ ಚಾನೆಲ್ ಹ್ಯಾಕ್ ಆಗಿದ್ದು ಸಿನಿಮಾ ತಂಡಕ್ಕೆ ಗೊತ್ತಾಗಿತ್ತು. "ಲಹರಿ ಯೂಟ್ಯೂಬ್ ಚಾನೆಲ್‌ನಲ್ಲಿರೋ ಎಲ್ಲಾ ಕಂಟೆಂಟ್ ಹಾಗೇ ಇತ್ತು. ಆದರೆ, ಮಾರ್ಟಿನ್ ಟೀಸರ್ ಅನ್ನು ಮಾತ್ರ ಡಿಲೀಟ್ ಮಾಡಲಾಗಿತ್ತು" ಎಂದು ಮಾರ್ಟಿನ್ ತಂಡದ ಸದಸ್ಯರೊಬ್ಬರು ಬಹಿರಂಗ ಪಡಿಸಿದ್ದಾರೆ.

ಹಿಂದಿಕ್ಕುತ್ತಿತ್ತು 'ಪಠಾಣ್' ಟೀಸರ್
ಲಹರಿ ಸಂಸ್ಥೆ ಹಾಗೂ 'ಮಾರ್ಟಿನ್' ತಂಡ ಟೀಸರ್ ಅನ್ನು ರಿಕವರಿ ಮಾಡಲು ಹರಸಾಹಸ ಮಾಡಿತ್ತು. ಈ ವೇಳೆ ರಷ್ಯಾದಿಂದ ಲಹರಿ ಚಾನೆಲ್ ಅನ್ನು ಹ್ಯಾಕ್ ಮಾಡಿದ್ದಾಗಿ ಮೂಲಗಳು ಹೇಳುತ್ತಿವೆ. ಅಲ್ಲಿಂದ 'ಮಾರ್ಟಿನ್' ಟೀಸರ್ ಅನ್ನು ಡಿಲೀಟ್ ಮಾಡಲಾಗಿದೆ ಎನ್ನುತ್ತಿದ್ದಾರೆ.
ಡಿಲೀಟ್ ಆಗಿದ್ದ 'ಮಾರ್ಟಿನ್' ಟೀಸರ್ ನಿನ್ನೆ (ಏಪ್ರಿಲ್ 24)ಯಷ್ಟೇ ರಿಕವರಿ ಮಾಡಲಾಗಿದೆ. 83.50 ಮಿಲಿಯನ್ ವೀವ್ಸ್ ಮತ್ತೆ ಮರಳಿ ಬಂದಿದೆ. ಆದರೆ, ಹೆಚ್ಚು ಜನರಿಗೆ ಈ ಟೀಸರ್ ತಲುಪುತ್ತಿಲ್ಲ. ಇನ್ನು ಮೂರು ನಾಲ್ಕು ದಿನ ಆಗಿದ್ದರೆ, ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ಟ್ರೈಲರ್ ಅನ್ನು ಹಿಂದಿಕ್ಕುತ್ತಿತ್ತು ಅಂತ 'ಮಾರ್ಟಿನ್' ತಂಡ ಹೇಳುತ್ತಿದೆ. ಸದ್ಯ 'ಪಠಾಣ್' ಟ್ರೈಲರ್‌ಗೆ 92 ಮಿಲಿಯನ್ ವೀವ್ಸ್ ಸಿಕ್ಕಿದೆ.
ಸಿಕ್ಕಿದ್ದೆಷ್ಟು ಹೋಗಿದ್ದೆಷ್ಟು?
'ಮಾರ್ಟಿನ್' ಟೀಸರ್ ರಿಕವರಿ ಆಗಿದ್ದರೂ, ಹೋಗಿದ್ದೆಲ್ಲ ಮರಳಿ ಬಂದಿಲ್ಲ. ಟೀಸರ್ ಡಿಲೀಟ್ ಆಗುವುದಕ್ಕೂ ಮುನ್ನ ಸುಮಾರು 78 ಸಾವಿರ ಕಮೆಂಟ್ ಇತ್ತು. ಅದರಲ್ಲಿ ಈಗ ಕೇವಲ 8 ಸಾವಿರದಷ್ಟು ಮಾತ್ರ ಮರಳಿ ಬಂದಿದೆ. ಅಲ್ಲದೆ 11 ಲಕ್ಷ ಲೈಕ್ಸ್‌ನಲ್ಲಿ 9.41 ಲಕ್ಷ ಅಷ್ಟೇ ರಿಕವರಿ ಆಗಿದೆ ಅನ್ನೋದು ಚಿತ್ರತಂಡದ ವಾದ.
" ಕೆಜಿಎಫ್ ಹಾಗೂ RRR ಬಳಿಕ ಭಾರತೀಯ ಚಿತ್ರೋದ್ಯಮದ ಬಹು ನಿರೀಕ್ಷಿತ ಸಿನಿಮಾ ಅಂದ್ರೆ 'ಮಾರ್ಟಿನ್'. ಹೀಗಾಗಿ ಅದರ ಆಗಮನಕ್ಕೆ ಕಾಯುತ್ತಿರೋ ಸಿನಿಮಾ ಪ್ರೇಮಿಗಳು ಈ ಸಿನಿಮಾ ಗೆಲ್ಲಿಸೋಕಂತೂ ಪಣ ತೊಟ್ಟಿರೋದಂತೂ ನಿಜ." ಎಂದು ಅಭಿಮಾನಿಗಳು ಪೋಸ್ಟರ್ ರಿಲೀಸ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











