'ಪೊಗರು' ಕ್ಲೈಮ್ಯಾಕ್ಸ್‌ನಲ್ಲಿ ಅಬ್ಬರಿಸಿದ್ದ ಜರ್ಮನ್ ಬಾಡಿ ಬಿಲ್ಡರ್ ನಿಧನ: 30ನೇ ವಯಸ್ಸಿನಲ್ಲಿ ಸಾವನ್ನಪ್ಪಲು ಕಾರಣವೇನು?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ವಿದೇಶಿ ಬಾಡಿ ಬಿಲ್ಡರ್‌ಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ತಮ್ಮ ದೇಹದಾಢ್ಯತೆಯಿಂದಲೇ ವಿಶ್ವದಾದ್ಯಂತ ಜನಪ್ರಿಯರಾಗಿದ್ದ ಬಾಡಿ ಬಿಲ್ಡರ್‌ಗಳು ಈ ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಈ ವಿಷಯ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ಅಮೆರಿಕದ ಜನಪ್ರಿಯ ಬಾಡಿ ಬಿಲ್ಡರ್ ಕಾಯ್ ಗ್ರೀನ್, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರೋ ಜಾನ್ ಲುಕಾಸ್ ಹಾಗೂ ಜರ್ಮನಿಯ ಫಿಟ್ನೆಸ್ ಸೆನ್ಸೇಷನ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯನಾಗಿದ್ದ ಜೋ ಲಿಂಡ್ನೆರ್ 'ಪೊಗರು' ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಈ ಮೂವರು ಬಾಡಿ ಬಿಲ್ಡರ್ ಜೊತೆ ಧ್ರುವ ಸರ್ಜಾ ಆಕ್ಷನ್ ಸೀನ್‌ಗಳು ಆಕ್ಷನ್ ಪ್ರಿಯರನ್ನು ರೊಚ್ಚಿಗೆಬ್ಬಿಸಿದ್ದವು. ಈ ಮೂವರು ಬಾಡಿ ಬಿಡ್ಡರ್‌ನಲ್ಲಿ ಅತ್ಯಂತ ಕಿರಿಯನಾಗಿದ್ದ ಜರ್ಮನಿ ಮೂಲದ ಜೋ ಲಿಂಡ್ನೆರ್ ದಿಢೀರನೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು.

Dhruva Sarja Starrer Pogaru Movie Body Builder Jo Lindner Dies

'ಪೊಗರು' ಸಿನಿಮಾದಲ್ಲಿಸ ಜೋ ಲಿಂಡ್ನೆರ್

ಬಾಡಿ ಬಿಲ್ಡಿಂಗ್ ಅನ್ನೋದು ಒಂದು ಕ್ರೇಜ್, ನಶೆ ಇದ್ದಂತೆ. ಒಮ್ಮೆ ಆ ನಶೆ ಏರಿಸಿಕೊಂಡರೆ ಜಿಮ್ ಅವರೇ ಮನೆಯಿದ್ದಂತೆ. ಧ್ರುವ ಸರ್ಜಾ ಕೂಡ ಬಾಡಿ ಬಿಲ್ಡಿಂಡ್‌ ಮೇಲೆ ಒಲವಿದೆ. ಶೂಟಿಂಗ್ ಇಲ್ಲದೆ ಇರುವಾಗ ಜಿಮ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಇದೇ ಕ್ರೇಜ್‌ನಿಂದಲೇ ವಿಶ್ವದಲ್ಲಿ ತಮ್ಮ ದೇಹದಾಢ್ಯತೆಯಿಂದ ಸದ್ದು ಮಾಡಿದ್ದ ಜರ್ಮನಿ ಮೂಲಕದ ಜೋ ಲಿಂಡ್ನರ್ ಅನ್ನು ಕಾಯ್ ಗ್ರೀನ್ ಹಾಗೂ ಜಾನ್ ಲುಕಾಸ್ ಜೊತೆ ಕರೆತಂದಿದ್ದರು.

ಜರ್ಮನಿ ಮೂಲದವರಾದರೂ ಜೋ ಲಿಂಡ್ನರ್ ಹಲವು ವರ್ಷಗಳಿಂದ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ದೇಹದಾಢ್ಯತೆಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಈ ವಿಡಿಯೋಗಳಿಂದಲೇ ವಿಶ್ವದಾದ್ಯಂತ ಹಲವರನ್ನು ಸೆಳೆದಿದ್ದರು. ಇಷ್ಟೊಂದು ಫಿಟ್ ಆಗಿದ್ದ ಜೋ ಲಿಂಡ್ನೆರ್ ದಿಢೀರನೇ ಸಾವನ್ನಪ್ಪಿದ್ದಾರೆ.

ಹಾರ್ಡ್‌ ಟ್ರೈನಿಂಗ್‌ ಹೆಸರು ವಾಸಿ

ಜೋ ಲಿಂಡ್ನೆರ್ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯ ವ್ಯಕ್ತಿ. ದೇಹದಾಡ್ಯತೆ ಬಗ್ಗೆ ಅಗಾಧವಾದ ಜ್ಞಾನವನ್ನು ಹೊಂದಿದ್ದರು. ವಿಶ್ವದ ಮೂಲೆ ಮೂಲೆಯಲ್ಲಿರೋ ಫಿಟ್ನೆಸ್ ಕಮ್ಯೂನಿಟಿಗೆ ಜೋ ಲಿಂಡ್ನೆರ್ ಪ್ರೇರಣೆಯಾಗಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೂ ಜೋ ಲಿಂಡ್ನೆರ್ ಸ್ಪೂರ್ತಿಯಾಗಿದ್ದರು.

ಬಾಡಿ ಬಿಲ್ಡಿಂಗ್ ಜೊತೆ ಫ್ಯಾಷನ್ ಐಕಾನ್ ಕೂಡ ಆಗಿದ್ದರು. ಯಾವಾಗಲೂ ಸ್ನೀಕರ್‌ ಅನ್ನು ಧರಿಸಲು ಇಷ್ಟ ಪಡುತ್ತಿದ್ದರು. ಜೊತೆ ತಲೆ ಕೂದಲಿಗೆ ಕಲರಿಂಗ್ ಮಾಡಿಕೊಂಡು ವಿಡಿಯೋ ಮಾಡುತ್ತಿದ್ದರು. ಇವರ ಸ್ಟೈಲ್‌ ಅನ್ನೂ ಫ್ಯಾನ್ಸ್ ಇಷ್ಟ ಪಡುತ್ತಿದ್ದರು.

ಜೋ ಲಿಂಡ್ನರ್ ಸಾವನ್ನಪ್ಪಿದ್ದು ಹೇಗೆ?

ಜೋ ಲಿಂಡ್ನರ್‌ಗೆ ಕಳೆದ ಮೂರು ದಿನಗಳಿಂದ ಕತ್ತಿನಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಈ ವಿಷಯವನ್ನು ತನ್ನ ಗರ್ಲ್‌ಫ್ರೆಂಡ್ ನಿಚಾ ಬಳಿ ಹೇಳಿಕೊಂಡಿದ್ದರು. ಈ ನೋವು ಹೆಚ್ಚಾದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಏನೂ ಪ್ರಯೋಜನ ಆಗಲಿಲ್ಲ ಎಂದು ಜೋ ಲಿಂಡ್ನರ್ ಗರ್ಲ್‌ಫ್ರೆಂಡ್ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಜೋ ಲಿಂಡ್ನರ್ ಸಾವಿಗೆ ಬ್ರೈನ್ ಎನ್ಯೂರಿಸಂ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಆದರೆ, ಗೆಳತಿ ಹೇಳಿದಂತೆ ಗುರುತು ಹಿಡಿಯಲು ಸಾಧ್ಯವಾಗದಂತಹ ಕತ್ತು ನೋವಿನಿಂದ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಜೋ ಲಿಂಡ್ನರ್ ಸಾವು ಅವರ ಅಭಿಮಾನಿಗಳಿಗೆ ಹಾಗೂ ಅವರನ್ನೇ ಪ್ರೇರಣೆಯಾಗಿಟ್ಟುಕೊಂಡು ದೇಹ ದಂಡಿಸುತ್ತಿದ್ದವರಿಗೆ ಶಾಕ್ ಆಗಿದೆ.

More from Filmibeat

English summary
Dhruva Sarja Starrer Pogaru actor Jo Lindner a German Bodybuilder has Died Aged 30, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X