Prerana-Dhruva Sarja: ಧ್ರುವ ಸರ್ಜಾ ಪತ್ನಿ ಪ್ರೇರಣಾಗೆ ಸೀಮಂತಾ.. ಕೃಷ್ಣ ಜನ್ಮಾಷ್ಟಮಿಯಂದೇ ಬೃಂದಾವನದಲ್ಲಿ ಬೇಬಿ ಶವರ್!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಹಾಲಕ್ಷ್ಮಿ ಹಬ್ಬದಂದು (ಆಗಸ್ಟ್ 25) ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ನೀಡಿದ್ದರು.
ಈ ವಿಷಯವನ್ನು ಕೇಳಿ ಧ್ರುವ ಸರ್ಜಾ ಅಭಿಮಾನಿಗಳು ಹಿರಿ ಹಿರಿ ಹಿಗ್ಗಿದ್ದರು. 'ಮಾರ್ಟಿನ್' ಹಾಗೂ 'ಕೆಡಿ' ಸಿನಿಮಾದಲ್ಲಿ ಬ್ಯುಸಿಯಾಗಿರೋ ಧ್ರುವ ಸರ್ಜಾ ತಮ್ಮ ವೈಯಕ್ತಿಕ ಬದುಕಿಗೂ ಹೆಚ್ಚು ಸಮಯ ನೀಡುತ್ತಿದ್ದಾರೆ. ತುಂಬು ಗರ್ಭಿಣಿಯಾಗಿರೋ ಪತ್ನಿ ಪ್ರೇರಣಾ ಜೊತೆಗೆ ಧ್ರುವ ಸರ್ಜಾ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ತುಂಬು ಗರ್ಭಿಣಿಯಾಗಿರೋ ಪ್ರೇರಣಾಗೆ ಇತ್ತೀಚೆಗಷ್ಟೇ ಸೀಮಂತಾ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ಈ ಕಾರ್ಯಕ್ರಮ ಹೇಗಿತ್ತು? ಯಾರೆಲ್ಲಾ ಬಂದಿದ್ದರು? ಇಂತಹ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
2ನೇ ಮಗುವಿಗೆ ನಿರೀಕ್ಷೆಯಲ್ಲಿ ಧ್ರುವ-ಪ್ರೇರಣಾ
ಧ್ರುವ ಸರ್ಜಾ ಹಾಗೂ ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿರೋ ಸುದ್ದಿಯನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುವುದಕ್ಕೆಂದೇ ಕ್ರಿಯೇಟಿವ್ ಆಗಿ ವಿಡಿಯೋ ಮಾಡಿದ್ದರು. ಪತ್ನಿ ಪ್ರೇರಣಾ, ಮಗಳೊಂದಿಗೆ ಧ್ರುವ ಸರ್ಜಾ ಕಾಣಿಸಿಕೊಂಡಿದ್ದರು. ಶೀಘ್ರದಲ್ಲಿಯೇ ತಮ್ಮ ಕುಟುಂಬಕ್ಕೆ ಮತ್ತೊಬ್ಬರ ಆಗಮನ ಆಗುತ್ತಿರೋ ವಿಷಯವನ್ನು ಆ ವಿಡಿಯೋ ಮೂಲಕ ಹೇಳಿ ಸಂಭ್ರಮಿಸಿದ್ದರು. ಕೆಲವೇ ದಿನಗಳ ಹಿಂದಷ್ಟೇ ಪತ್ನಿ ಪ್ರೇರಣಾಗೆ ಸೀಮಂತಾ ಕಾರ್ಯವನ್ನು ನೆರವೇರಿಸಿದ್ದಾರೆ.
ಸೀಮಂತಾ ಕಾರ್ಯಕ್ರಮದ ವಿಶೇಷತೆಯೇನು?
ಈ ಹಿಂದೆ ಸರ್ಜಾ ಕುಟುಂಬದ ಕಾರ್ಯಕ್ರಮ ಸ್ಟಾರ್ ಹೋಟೆಲ್‌ಗಳಲ್ಲಿ ಹೆಚ್ಚಾಗಿ ನಡೆಯುತ್ತಿತ್ತು. ಆದರೆ, ಈ ಬಾರಿ ಸೀಮಂತ ಕಾರ್ಯವನ್ನು ಕನಕಪುರದ ಸಮೀಪದ ನೆಲಗುಳಿಯಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್ ಬೃಂದಾನವನದಲ್ಲಿ ಸೀಮಂತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಧ್ರುವ ಸರ್ಜಾ ಹಾಗೂ ಪ್ರೇರಣಾ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೃಷ್ಣ ಜನ್ಮಾಷ್ಟಮಿಯಂದೇ ಸೀಮಂತಾ
ಇದೇ ಸೆಪ್ಟೆಂಬರ್ 6 ಹಾಗೂ 7ರಂದು ಕೃಷ್ಣ ಜನ್ಮಾಷ್ಟಮಿ ಹಬ್ಬ ಇತ್ತು. ಇದೇ ದಿನ ಧ್ರುವ ಸರ್ಜಾ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿತ್ತು. ಧ್ರುವ ಸರ್ಜಾ ಬೃಂದಾವನಾ ಫಾರ್ಮ್‌ಹೌಸ್ ಕೃಷ್ಣ ಜನ್ಮಾಷ್ಟಮಿ ಥೀಮ್‌ನಲ್ಲಿಯೇ ಸಿಂಗಾರಗೊಂಡಿತ್ತು. ಅದೇ ದಿನ ಸೀಮಂತಾ ಕಾರ್ಯವನ್ನು ನೆರವೇರಿಸಲಾಗಿದೆ. ಈ ವೇಳೆ ಧ್ರುವ ಸರ್ಜಾ ಧೋತಿ ಹಾಗೂ ಖುರ್ತಾದಲ್ಲಿ ಕಂಡರೆ, ಪ್ರೇರಣಾ ಹಸಿರು ಬಣ್ಣದ ರೇಷ್ಮೆ ಸೀರೆಯುಟ್ಟಿದ್ದರು. ಸರ್ಜಾ ಹಾಗೂ ಪ್ರೇರಣಾ ಎರಡೂ ಕುಟುಂಬದವರು ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಅಣ್ಣನ ಪುಣ್ಯಭೂಮಿ ಮುಂದೆನೇ ಸಂಭ್ರಮ
ಬೃಂದಾವನ ಫಾರ್ಮ್‌ಹೌಸ್‌ನಲ್ಲಿಯೇ ಅಣ್ಣ ಚಿರಂಜೀವಿ ಸರ್ಜಾ ಅವರ ಸಮಾಧಿ ಕೂಡ ಇದೆ. ಇಲ್ಲೇ ಸೀಮಂತಾ ಕಾರ್ಯಕ್ರಮ ನಡೆದಿರೋದು ವಿಶೇಷ. ಇಲ್ಲೇ ಫೋಟೊಶೂಟ್ ಕೂಡ ನಡೆದಿದೆ. ಕೆಲವು ದಿನಗಳ ಹಿಂದಷ್ಟೇ ಧ್ರುವ ಸರ್ಜಾ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಮುಂದೆ ಮಲಗಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.


Click it and Unblock the Notifications











