'ದೂರದರ್ಶನ' ನೋಡಲು ಮುಹೂರ್ತ ಫಿಕ್ಸ್: ತೆರೆಮೇಲೆ 90ರ ದಶಕ!

ದಿಯಾ ಖ್ಯಾತಿಯ ಪೃಥ್ವಿ ಅಂಬರ ಅಭಿನಯದ ಸಿನಿಮಾ 'ದೂರದರ್ಶನ' ಈಗಾಗಲೇ ಕುತೂಹಲ ಕೆರಳಿಸಿದೆ. ವಿಭಿನ್ನ ಕಥೆಯನ್ನು ಇಟ್ಟುಕೊಂಡು ತೆರೆಮೇಲೆ ಬರುವುದಕ್ಕೆ ಚಿತ್ರತಂಡ ಕೂಡ ತುದಿಗಾಲಲ್ಲಿ ನಿಂತಿದೆ.

ಇತ್ತೀಚೆಗಷ್ಟೇ 'ದೂರದರ್ಶನ' ಚಿತ್ರತಂಡ ಟ್ರೈಲರ್ ಅನ್ನೂ ರಿಲೀಸ್ ಮಾಡಿದೆ. ಯೂಟ್ಯೂಬ್‌ನಲ್ಲಿ ಟ್ರೈಲರ್‌ಗೆ ಮೆಚ್ಚುಗೆನೂ ಸಿಕ್ಕಿದೆ. ಈ ಬೆನ್ನಲ್ಲೇ ಸಿನಿಮಾದ ರಿಲೀಸ್ ಡೇಟ್ ಅನ್ನೂ ಚಿತ್ರತಂಡ ಅನೌನ್ಸ್ ಮಾಡಿದೆ.

'ದೂರದರ್ಶನ' ಸಿನಿಮಾವನ್ನು ಸುಕೇಶ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು. 80 ಹಾಗೂ 90ರ ದಶಕದಲ್ಲಿ ಸಂಚಲನ ಸೃಷ್ಟಿಸಿದ್ದ 'ದೂರದರ್ಶನ'ವನ್ನು ಆಧರಿಸಿದ ಈ ಸಿನಿಮಾ ಮಾಡಲಾಗಿದೆ.

Dia Fame Pruthvi Ambaar Starrer Doordarshan Movie Releasing On March 3rd

ಪೃಥ್ವಿ ಅಂಬರ್ ನಾಯಕನಾಗಿ ನಟಿಸಿರುವ 'ದೂರದರ್ಶನ' ಇದೇ ಮಾರ್ಚ್ 3ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಪೃಥ್ವಿ ಅಂಬರ್ ಜೊತೆ ನಾಯಕಿಯಾಗಿ ಅಯಾನಾ ನಟಿಸಿದ್ದಾರೆ. ಡ್ರಾಮಾ ಜೊತೆ ಹಾಸ್ಯದ ಸನ್ನಿವೇಶವನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದ್ದು, ಪ್ರೇಕ್ಷಕರು ಈ ಪ್ರಯತ್ನಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ನೋಡಬೇಕಿದೆ.

ನಾಯಕ ಪೃಥ್ವಿ ಅಂಬರ್ ಪ್ರಕಾರ ಈ ಸಿನಿಮಾ ಒಂದು ಕಾದಂಬರಿ ಓದಿದ ಅನುಭವವನ್ನು ನೀಡಲಿದೆಯಂತೆ. "ನಾನು ಮನು ಎಂಬ ಪಾತ್ರ ಮಾಡಿದ್ದೇನೆ. ಬಾಲ್ಯದಲ್ಲಿ ಮಾಡಿದ ತರಲೆ ಎಲ್ಲವನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ದೂರದರ್ಶನ ಒಂದು ಒಳ್ಳೆಯ ಕಟೆಂಟ್ ಸಿನಿಮಾ. ಲವ್ ಸ್ಟೋರಿ, ಕಾಮಿಡಿ, ಎಮೋಷನ್ಸ್ ಎಲ್ಲವೂ ಇದೆ." ಎನ್ನುತ್ತಾರೆ ಪೃಥ್ವಿ ಅಂಬರ್.

"ರೆಗ್ಯೂಲರ್ ಸ್ಟೈಲ್ ಬಿಟ್ಟು ತುಂಬಾ ಆಪ್ತವಾಗೋ ಹಾಗೆ ಸಿನಿಮಾವನ್ನು ನರೇಟ್ ಮಾಡಲಾಗಿದೆ. ಎರಡು ಕಾಲು ಗಂಟೆ ಒಂದು ಊರೊಳಗೆ ಹೋಗಿ ಎಂಜಾಯ್ ಮಾಡಿದ ಅನುಭವ ಈ ಸಿನಿಮಾದಿಂದ ಸಿಗುತ್ತೆ," ಎಂದು ಭರವಸೆ ನೀಡುತ್ತಾರೆ ನಿರ್ದೇಶಕ ಸುಕೇಶ್ ಶೆಟ್ಟಿ.

Dia Fame Pruthvi Ambaar Starrer Doordarshan Movie Releasing On March 3rd

ಪೃಥ್ವಿ ಜೊತೆ ಉಗ್ರಂ ಮಂಜು ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. "ಈ ಸಿನಿಮಾದಲ್ಲಿ ಕಿಟ್ಟಿ ಎಂಬ ಪಾತ್ರ ಮಾಡಿದ್ದೇನೆ. 80.90ರ ದಶಕದಲ್ಲಿ ನೋಡುವ ಸ್ನೇಹ, ದ್ವೇಷ ಜೊತೆಗೆ ಕುಟುಂಬದ ಕನಸನ್ನು ನೆರವೇರಿಸುವ ಹುಡುಗನ ಪಾತ್ರ. ನಿರ್ದೇಶಕ ಸುಕೇಶ್ ಶೆಟ್ಟಿ ನನಗೆ ಕಥೆ ಹೇಳುವಾಗ ಏನು ಪ್ರಾಮಿಸ್ ಮಾಡಿದ್ದರೋ ಹಾಗೆಯೇ ಸಿನಿಮಾ ಮೂಡಿ ಬಂದಿದೆ." ಎನ್ನುತ್ತಾರೆ ಉಗ್ರಂ ಮಂಜು.

'ದೂರದರ್ಶನ' ಸಿನಿಮಾವನ್ನು ರಾಜೇಶ್ ಭಟ್ ನಿರ್ಮಿಸಿದ್ದು, ಉಗ್ರಂ ಮಂಜು ಕಾರ್ಯಕಾರಿ ನಿರ್ಮಾಪಕರೂ ಆಗಿದ್ದಾರೆ. ಸುಂದರ್, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Dia Fame Pruthvi Ambaar Starrer Doordarshan Movie Releasing On March 3rd, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X