'ಕಾಟೇರ' ವಿವಾದದ ಬಳಿಕ 'ಸಿಂಧೂರ ಲಕ್ಷ್ಮಣ'ವನ್ನೂ ಕೈ ಬಿಟ್ರಾ ಉಮಾಪತಿ? ಟೈಟಲ್ ಈಗ ಯಾರಲ್ಲಿದೆ?

ಒಂದು ಕಡೆ ಉಮಾಪತಿ ಶ್ರೀನಿವಾಸ್ ಗೌಡ.. ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್. 'ರಾಬರ್ಟ್' ಸಿನಿಮಾ ಬಳಿಕ ಇನ್ನೂ ಎರಡು ಪ್ರಾಜೆಕ್ಟ್‌ಗಳು ಈ ಕಾಂಬಿನೇಷನ್‌ನಿಂದಲೇ ಬರಬೇಕಿತ್ತು. ಅದರಲ್ಲೊಂದು 'ಕಾಟೇರ'. ಈ ಮಾತನ್ನು ತರುಣ್ ಸುಧೀರ್ ಕೂಡ ಒಪ್ಪಿಕೊಂಡಿದ್ದಾರೆ. ಇನ್ನೊಂದು 'ವೀರ ಸಿಂಧೂರ ಲಕ್ಷ್ಮಣ'. ಈ ಎರಡೂ ಪ್ರಾಜೆಕ್ಟ್‌ಗಳ ಬಗ್ಗೆನೂ ನಿರ್ಮಾಪಕ ಉಮಾಪತಿ ಈ ಹಿಂದೆ ಹಲವು ಬಾರಿ ಮಾತಾಡಿದ್ದಾರೆ.

ಆದ್ರೀಗ 'ಕಾಟೇರ' ಸಿನಿಮಾದ ಟೈಟಲ್ ಬಗ್ಗೆ ವಿವಾದಗಳು ಹುಟ್ಟಿಕೊಂಡಿವೆ. ದರ್ಶನ್ ವೇದಿಕೆ ಮೇಲೆ ಆಡಿದ ಮಾತು ನಿರ್ಮಾಪಕ ಉಮಾಪತಿಯನ್ನು ಕೆರಳಿಸಿತ್ತು. ಹೀಗಾಗಿ ರಾಬರ್ಟ್ ನಿರ್ಮಾಪಕ ಕೆರಳಿ ಕೆಂಡವಾಗಿದ್ದರು. ಈ ಮಧ್ಯೆನೇ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾದ ಬಗ್ಗೆನೂ ಚರ್ಚೆ ಶುರುವಾಗಿದೆ. 'ಕಾಟೇರ' ಟೈಟಲ್ ವಿವಾದಕ್ಕೆ ಎಡೆ ಮಾಡಿಕೊಟ್ಮೇಲೆ 'ವೀರ ಸಿಂಧೂರ ಲಕ್ಷಣ' ಕಥೆಯೇನು? ಈ ವಿಚಾರಕ್ಕೂ ವಿವಾದ ಹುಟ್ಟಿಕೊಳ್ಳುತ್ತಾ? ಅನ್ನೋ ಪ್ರಶ್ನೆ ಎದ್ದಿದೆ.

Did Umapathy leave Veera Sindhoora Lakshmana after the announcement?

ದರ್ಶನ್ ಹಾಗೂ ಉಮಾಪತಿ ಇಬ್ಬರ ಸಂಬಂಧ ಉತ್ತಮವಿದ್ದಾಗ 'ವೀರ ಸಿಂಧೂರ ಲಕ್ಷಣ'ದ ಬಗ್ಗೆ ಚರ್ಚೆಯಾಗಿತ್ತು. ಆದ್ರೀಗ ಇಬ್ಬರೂ ನಾನೊಂದು ತೀರ. ನೀನೊಂದು ತೀರ ಅಂತಿದ್ದಾರೆ. ಈ ಮಧ್ಯೆ ಶೈಲಜಾ ನಾಗ್ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ತರುಣ್ ಸುಧೀರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈಗ 'ವೀರ ಸಿಂಧೂರ ಲಕ್ಷ್ಮಣ' ಟೈಟಲ್ ಯಾರ ಬಳಿ ಇದೆ? ಇದಕ್ಕೆ ಉಮಾಪತಿ ರಿಯಾಕ್ಷನ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಈ ಹಿಂದೆ ನಿರ್ಮಾಪಕ ಉಮಾಪತಿ 'ವೀರ ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆಗ ಈ ಪ್ರಾಜೆಕ್ಟ್ ದರ್ಶನ್ ಕೈ ತಪ್ಪಿ ಹೋಗಿದೆ ಅಂತಲೇ ಭಾವಿಸಲಾಗಿತ್ತು. "ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ಈಗಲೇ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಯಾರೋ ಹೀರೊ ಇದ್ದಾರೆ. ಅವರೊಂದಿಗೆ ಮಾತುಕತೆ ನಡೆದು ಅಡ್ವಾನ್ಸ್ ಕೊಟ್ಟು, ಅವರು ಒಪ್ಪಿಕೊಳ್ಳುವವರೆಗೂ ಏನನ್ನೂ ಹೇಳಲಾರೆ. ಒಮ್ಮೆ ಓಕೆ ಆದ ಕೂಡಲೇ ಅವರ ಹೆಸರನ್ನು ಅನೌನ್ಸ್ ಮಾಡುತ್ತೇನೆ" ಎಂದಿದ್ದರು

Did Umapathy leave Veera Sindhoora Lakshmana after the announcement?

ಆದ್ರೀಗ 'ಕಾಟೇರ' ವಿವಾದ ಬಳಿಕ ಈ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಮಾತಾಡುತ್ತಿಲ್ಲ. ಇತ್ತೀಚೆಗೆ ಸುದ್ದಿ ಮನೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆನೂ ಸಿಂಧೂರ ಲಕ್ಷ್ಮಣ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದೇಕೆ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಉಮಾಪತಿ ಕೊಟ್ಟ ಬೇರೆನೇ ಇತ್ತು. "ನಾವೇ ಅಲ್ಲಿ ಫಿಟ್ ಆಗಲ್ಲ ಅಂತ.. ನಾನು ಯಾವತ್ತೂ ಏನು ಯೋಚನೆ ಮಾಡೋದು ಅಂದರೆ, ನನಗೆ ಯಾರಿಂದಲೋ ಏನಾದ್ರು ತೊಂದರೆ ಆಯ್ತು ಅಂದ್ರೆ, ನನ್ನಲ್ಲೇ ಏನೋ ಸರಿಯಿಲ್ಲ ಬಿಡು ಅಂತ ಯೋಚನೆ ಮಾಡುತ್ತೇನೆ. ನಾನು ಮೋಸ ಹೋದೆ. ಅವರು ಮೋಸ ಮಾಡಿದ್ದಲ್ಲ. ನಾನು ಮೋಸ ಹೋಗಿದ್ದಕ್ಕೆ ತಾನೇ ಅವರು ಮೋಸ ಹೋಗಿದ್ದು," ಎಂಬ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇನ್ನೊಂದು ಕಡೆ ಇದೇ ಟೈಟಲ್ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ಜೊತೆ ಮಾತಾಡುವಾಗ "ಡಿಟೈಲ್ ಆಗಿ ನೋಡುತ್ತೇನೆ. ಬುಕ್‌ನಲ್ಲಿ ಏನೇನಿದೆ ಅಂತ ನೋಡ್ಬೇಕು. ಅಧಿಕೃತ ಮಾಹಿತಿ ಇಲ್ಲದೆ ಹೇಳುವುದಕ್ಕೆ ಆಗುವುದಿಲ್ಲ. ವೀರ ಸಿಂಧೂರ ಲಕ್ಷ್ಮಣದ ಬಗ್ಗೆ ಮುಂದಿನ ದಿನಗಳಲ್ಲಿ ಮಾತಾಡೋಣ. " ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯಕ್ಕೆ 'ವೀರ ಸಿಂಧೂರು ಲಕ್ಷ್ಮಣ' ಟೈಟಲ್ ಯಾರ ಬಳಿ ಇದೆ? ತರುಣ್ ಸುಧೀರ್ ಯಾವ ಟೈಟಲ್ ಇಡ್ತಾರೆ. ಈ ಟೈಟಲ್‌ಗೂ ಗೊಂದಲ ಆಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. 'ವೀರ ಸಿಂಧೂರು ಲಕ್ಷ್ಮಣ' ಯಾರ ಬಳಿ ಇದೆ ಅನ್ನೋದು ಗೊತ್ತಾದರೆ, ಮುಂದೇನಾಗಬಹುದು? ಅನ್ನೋದಕ್ಕೆ ಕ್ಲಾರಿಟಿ ಸಿಗಬಹುದು.

More from Filmibeat

English summary
Umapathy Srinivas Gowda leave Veera Sindhoora Lakshmana project
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X