ಪುನೀತ್ ರಾಜ್‌ಕುಮಾರ್ ಸಿನಿಮಾದಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು: ಆ ಸಿನಿಮಾ ಯಾವುದು ಗೊತ್ತೇ?

ವಿಶಿಷ್ಟ ಪ್ರತಿಭೆ ಇರುವವರಿಗೆ ಸೋಶಿಯಲ್ ಮೀಡಿಯಾ ವೇದಿಕೆಯಾಗುತ್ತಿದೆ. ಪ್ರಪಂಚದಾದ್ಯಂತ ಅದೆಷ್ಟೋ ಮಂದಿ ಸೋಶಿಯಲ್ ಮೀಡಿಯಾದಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಪ್ರತಿಭೆಯನ್ನು ತೋರಿಸುತ್ತಾ ಹಣವನ್ನೂ ಸಂಪಾದನೆ ಮಾಡುತ್ತಿದ್ದಾರೆ. ಇನ್ನು ಕೆಲವರಿಗೆ ಅವರು ಊಹಿಸಿದ್ದಕ್ಕಿಂತ ಹೆಚ್ಚು ಜನಪ್ರಿಯತೆನೂ ಸಿಕ್ಕಿದೆ.

ಸೋಶಿಯಲ್ ಮೀಡಿಯಾದಿಂದಲೇ ಫೇಮಸ್ ಆಗಿರುವ ಅದೆಷ್ಟೋ ಪ್ರತಿಭೆಗಳಲ್ಲಿ ಬೆಳ್ಳುಳ್ಳಿ ಕಬಾಬ್ ಚಂದ್ರು ಕೂಡ ಒಬ್ಬರು. ಕಳೆದ ಕೆಲವು ತಿಂಗಳುಗಳಿಂದ ಬೆಳ್ಳುಳ್ಳಿ ಕಬಾಬ್ ಮಾಡಿ ಚಂದ್ರು ಫೇಮಸ್ ಆಗಿದ್ದರು. ಅಷ್ಟೇ ಅಲ್ಲದೆ, ಅವರ ಮ್ಯಾನರಿಸಂಗೂ ನೆಟ್ಟಿಗರು ಫಿದಾ ಆಗಿದ್ದರು. ಹೊಟೇಲ್ ಉದ್ಯಮಿಯೂ ಆಗಿರುವ ಚಂದ್ರು ಅವರನ್ನು ಕಾಲಿಟ್ಟ ಕಡೆಯಲ್ಲೆಲ್ಲಾ ಗುರುತಿಸುತ್ತಾರೆ.

Did you know Social Media star Bellulli Kabab Chandru seen in Puneeth Rajkumar Arasu movie

ಚಂದ್ರು ಹೊಟೇಲ್ ಉದ್ಯಮ ಆರಂಭ ಮಾಡುವುದಕ್ಕೂ ಮುನ್ನ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು ಅನ್ನೋದು ಈಗಾಗಲೇ ಗೊತ್ತಿದೆ. ಕನ್ನಡದ ತಾರೆಯರಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಬಳಿಕ ಹೊಟೇಲ್ ಉದ್ಯಮಕ್ಕೆ ಕಾಲಿಟ್ಟಿದ್ದರು. ಈ ಗ್ಯಾಪ್‌ನಲ್ಲಿ ಕನ್ನಡದ ಸಿನಿಮಾವೊಂದರಲ್ಲಿ ಸೈಡ್ ಆರ್ಟಿಸ್ಟ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಅದೂ ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾ. ಆ ಸಿನಿಮಾ ತುಣುಕನ್ನು ಹುಡುಕಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

ಬೆಳ್ಳುಳ್ಳಿ ಕಬಾಬ್ ಚಂದ್ರು ಕನ್ನಡ ಚಿತ್ರರಂಗಕ್ಕೆ ತುಂಬಾನೇ ಚಿರಪರಿಚಿತ. ಅದರಲ್ಲೂ ಚಂದ್ರು ಮಾಡುವ ಅಡುಗೆ ರುಚಿಯನ್ನು ಕನ್ನಡದ ಬಹುತೇಕ ತಾರೆಯರೆಲ್ಲರೂ ಸವಿದಿದ್ದಾರೆ. ಅದರಲ್ಲೂ ಅಣ್ಣಾವ್ರ ಕುಟುಂಬಕ್ಕೆ, ಅಂಬರೀಶ್ ಫ್ಯಾಮಿಲಿಗೆ ಚಂದ್ರು ಮಾಡುವ ಅಡುಗೆಯ ರುಚಿ ಚೆನ್ನಾಗಿಯೇ ಗೊತ್ತಿದೆ. ಇನ್ನು ಪುನೀತ್ ರಾಜ್‌ಕುಮಾರ್‌ಗಂತೂ ಚಂದ್ರು ಅಡುಗೆ ತುಂಬಾನೇ ಇಷ್ಟ.

ಹೀಗಾಗಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಅವರದ್ದು ಉತ್ತಮ ಒಡನಾಟವಿತ್ತು. ಚಂದ್ರು ಮಾಡುವ ನಾನ್ ವೆಜ್ ಅಡುಗೆಯನ್ನು ಅಪ್ಪು ತುಂಬಾನೇ ಇಷ್ಟ ಪಡುತ್ತಿದ್ದರು. ಬಹಳ ವರ್ಷಗಳಿಂದ ಚಂದ್ರು ಕೈ ರುಚಿಯನ್ನು ಅಪ್ಪು ಇಷ್ಟ ಪಟ್ಟಿದ್ದರು. ಈ ಆತ್ಮೀಯತೆಯಿಂದಲೋ ಏನೋ ಅಪ್ಪು ನಟಿಸಿದ 'ಅರಸು' ಸಿನಿಮಾದ ಚಿಕ್ಕ ದೃಶ್ಯದಲ್ಲಿ ಬೆಳ್ಳುಳ್ಳಿ ಕಬಾನ್ ಚಂದ್ರು ನಟಿಸಿದ್ದಾರೆ. ಅದೇ ವಿಡಿಯೋವನ್ನು ಟ್ರೋಲ್ ಪೇಜ್‌ಗಳು ಹುಡುಕಿ ವೈರಲ್ ಮಾಡುತ್ತಿದ್ದಾರೆ.

ಈ ವಿಡಿಯೋ ನೋಡುತ್ತಿದ್ದಂತೆ ಲೆಕ್ಕವಿಲ್ಲದಷ್ಟು ಕಾಮೆಂಟ್‌ಗಳು ಕೂಡ ಬರುತ್ತಿವೆ. "ಯಾರೋ ಹುಡುಕಿದ್ದು. ಇವನಿಗೆ ಒಂದು ಪ್ಲೇಟ್ ಬೆಳ್ಳುಳ್ಳಿ ಕಬಾಬ್ ಕೊಡ್ರೋ", "ಸಿಲ್ಕ್ ಸಾರಿ ತಗೊಂಡ್ವ... One more one more ಅಂದ್ವಾ.." ಅಂತ ಮತ್ತೊಂದು ಕಾಮೆಂಟ್ ಮಾಡಿದ್ದಾರೆ. ಹಾಗೇ "ಬುದ್ದಿ ಈ figure ಎಲ್ಲೋ ನೋಡಿದ್ನಲ್ಲ", "ಅಯ್ಯೋ ದೇವ್ರೇ ಎಲ್ಲೆಲ್ಲಿಂದ ಹುಡುಕುತೀರಾ ಇದನೆಲ್ಲಾ..", "ಚಂದ್ರು ಅಣ್ಣ ಆವಾಗ್ಲೇ ಎಲೆ-ಅಡಿಕೆ ಪ್ರಿಯ" , "ಅಪ್ಪು ಸರ್‌ಗೆ ಬೆಳ್ಳುಳ್ಳಿ ಕಬಾಬ್ ಕೊಡೋಕೆ ಹೋದಾಗ ಅರಳಿದ ಪ್ರತಿಭೆ" ಎಂದು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಮೊದಲು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದಲೇ ಇವರಿಗೆ ಚಿತ್ರರಂಗದ ಪರಿಚಯವಿದೆ. ಪುನೀತ್ ರಾಜ್‌ಕುಮಾರ್ ಹಾಗೂ ಅಂಬರೀಶ್ ಅವರಿಗೆ ಚಂದ್ರು ಮಾಡುವ ನಾನ್ ವೆಬ್ ಐಟಂಗಳು ಫೇವರಿಟ್ ಆಗಿದ್ದವು. ಈಗ ಚಂದ್ರು ಹೊಟೇಲ್‌ಗೆ ಜನರು ಹುಡುಕಿಕೊಂಡು ಹೋಗಿ ಕೈ ರುಚಿ ಸವಿದು ಬರುತ್ತಾರೆ.

More from Filmibeat

English summary
Bellulli Kabab Chandru acted with Puneeth Rajkumar movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X