"ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್.. ಆಗಲೇ ಜನ ಥಿಯೇಟರ್‌ಗೆ ಬರೋದು" ದಿಗಂತ್ ಡೈಲಾಗ್ ಬಿಟ್ಟಿದ್ಯಾರಿಗೆ?
ಪ್ಯಾನ್ ಇಂಡಿಯಾ, ಬಿಗ್ ಬಜೆಟ್ ಸಿನಿಮಾಗಳ ಮಧ್ಯೆ ಹೊಸಬರ ಸಿನಿಮಾವೊಂದು ಬೇಜಾನ್ ಸದ್ದು ಮಾಡುತ್ತಿದೆ. ಇದಕ್ಕೆ ಕನ್ನಡದ ಸ್ಟಾರ್ ನಟರುಗಳೆಲ್ಲಾ ಸಾಥ್ ಕೊಡುತ್ತಿದ್ದಾರೆ. ಆ ಸಿನಿಮಾ ಮತ್ಯಾವುದೂ ಅಲ್ಲ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'.
ಈಗಾಗಲೇ ಹಾಸ್ಟೆಲ್ ಹುಡುಗರು ಊರೆಗೆಲ್ಲ ಫೇಮಸ್ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್, ರಮ್ಯಾ ಸೇರಿದಂತೆ ಸೂಪರ್‌ಸ್ಟಾರ್‌ಗಳೆಲ್ಲರೂ ಹೊಸಬರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೆ ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ದಿಗಂತ್ ಅಂತಹ ಕನ್ನಡ ತಾರೆಯರು ನಟಿಸಿದ್ದಾರೆ.

ಹೊಸಬರ ಸಿನಿಮಾವೇ ಆಗಿದ್ದರೂ, ಕನ್ನಡ ತಾರೆಯರೆಲ್ಲರೂ ಹೊಸಬರ ಸಿನಿಮಾಗೆ ಸಪೋರ್ಟ್ ಮಾಡುತ್ತಿದ್ದಾರೆ. ಈಗ್ಯಾಕೆ ಮಾತು ಅಂದ್ರೆ, ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡಾ ದಿಗಂತ್ ಪ್ರತ್ಯಕ್ಷ ಆಗಿದ್ದು, ಕಪ್ಪು ಕಪ್ಪಾಗಿರೋ ಸಿನಿಮಾ ಬಗ್ಗೆ ಜಬರ್ಧಸ್ತ್ ಡೈಲಾಗ್ ಬಿಟ್ಟಿದ್ದಾರೆ. ಅಷ್ಟಕ್ಕೂ ದಿಗಂತ್ ಪಾತ್ರವೇನು? ಈ ಡೈಲಾಗ್ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ.
ಹಾಸ್ಟೆಲ್‌ಗೆ ಎಂಟ್ರಿ ಕೊಟ್ಟ ದಿಗಂತ್
ಹಾಸ್ಟೆಲ್ ಹುಡುಗರ ಜೊತೆ ರಿಷಬ್ ಶೆಟ್ಟಿ, ಪವನ್ ಕುಮಾರ್ ಹಾಗೂ ಶೈನ್ ಶೆಟ್ಟಿ ಶೈನ್ ಆಗ್ತಿರೋದು ಗೊತ್ತೇ ಇದೆ. ಇನ್ನೊಂದು ಕಡೆ ದೂದ್ ಪೇಡಾ ದಿಗಂತ್ ಕೂಡ ಎಂಟ್ರಿ ಕೊಡೋಕೆ ರೆಡಿಯಾಗಿದ್ದರು. ಅದರಂತೆಯೇ ಹಾಸ್ಟೆಲ್ ಹುಡುಗರ ಜೊತೆ ದಿಗಂತ್ ಕಾಣಿಸಿಕೊಂಡಿದ್ದಾರೆ. ಸದ್ಯ ಹಾಸ್ಟೆಲ್ ಹುಡುಗರ ತಂಡ ಚಿಕ್ಕದೊಂದು ತುಣುಕನ್ನು ರಿಲೀಸ್ ಮಾಡಿದೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ದಿಗಂತ್ ಪಾತ್ರವೇನು? ಅನ್ನೋ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಅದು ರಿವೀಲ್ ಆಗಿದೆ. ದಿಗಂತ್ ಈ ಸಿನಿಮಾದಲ್ಲಿ ಬಂಟಿ ಗೌಡ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ಕಿಚ್ಚ ತುಣುಕಿನಲ್ಲಿ ಇಂಟ್ರುಡ್ಯೂಸ್ ಮಾಡಲಾಗಿದೆ.

ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್..ಟ್ರೈಲರ್‌ಗೆ ಲೀಡ್
ಹಿಂದೆಲ್ಲಾ ಬಂದಂತೆ, ಇಂದು (ಜುಲೈ 8) ಹೊರಬಿದ್ದರೋ ಹಾಸ್ಟೆಲ್ ಹುಡುಗರ ವಿಡಿಯೋ ಕೂಡ ಟ್ರೆಂಡಿಂಗ್‌ನಲ್ಲಿದೆ. ಅದರಲ್ಲೂ ದಿಗಂತ್ ಕಾಣಿಸಿಕೊಂಡಿರೋದು ಕ್ಯಾಚಿಯಾಗಿದ್ದು, ಸಿನಿಪ್ರಿಯರಿಗೆ ಕಾಮಿಡಿ ಕಿಕ್ ಕೊಟ್ಟಿದೆ. ದಿಗಂತ್ ಲುಕ್ ಮ್ಯಾನರಿಸಂ, ಡೈಲಾಗ್ ಡಿಲೇವರಿ ಎಲ್ಲವೂ ಮಜವಾಗಿದೆ.
"ಈಗೆಲ್ಲ ಕಪ್ಪು ಕಪ್ಪಾಗಿರೋದೇ ಟ್ರೆಂಡ್.. ಆಗಲೇ ಜನ ಥಿಯೇಟರ್‌ಗೆ ಬರೋದು" ಅಂತ ಹೇಳಿರೋ ಡೈಲಾಗ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಅಲ್ಲದೆ, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಟ್ರೈಲರ್‌ಗೆ ಲೀಡ್ ಕೊಟ್ಟಿದೆ.
ಟ್ರೈಲರ್ ಯಾವಾಗ?
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಹಾಡು ಹಾಗೂ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೇ ಬೆನ್ನಲ್ಲೇ ಟ್ರೈಲರ್ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಇದೇ ಜುಲೈ 10ರಂದು ಸಂಜೆ 6 ಗಂಟೆಗೆ ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಇದನ್ನು ದಿಗಂತ್ ವಿಡಿಯೋ ಮೂಲಕವೇ ಅನೌನ್ಸ್ ಮಾಡಲಾಗಿದೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಹುತೇಕ ಹೊಸಬರ ತಂಡ. ಆರಂಭದಿಂದಲೂ ಭರ್ಜರಿಯಾಗಿಯೇ ಪ್ರಮೋಷನ್ ಮಾಡಿಕೊಂಡು ಬಂದಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಸಹಜವಾಗಿ ಕುತೂಹಲ ದುಪ್ಪಟ್ಟಾಗಿದೆ. ಟೈಲರ್ ಬಿಡುಗಡೆ ವೇಳೆನೇ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗುವ ಸಾಧ್ಯತೆಯಿದೆ.


Click it and Unblock the Notifications











