'ಎಡಗೈಯೇ ಅಪಘಾತಕ್ಕೆ ಕಾರಣ' ಟ್ರೈಲರ್‌ಗೆ ಕಿಚ್ಚನ ಸಾಥ್: ನಮಸ್ಕಾರ ದೇವ್ರು ಎಂದು ಖುಷಿಪಟ್ಟ ನೆಟ್ಟಿಗರು

ಸೋಲಿನ ಸುಳಿಗೆ ಸಿಲುಕಿ ಸ್ಯಾಂಡಲ್‌ವುಡ್‌ ಸೊರಗಿ ಹೋಗಿರಬಹುದು. ಆದರೆ, ವಿಭಿನ್ನ ಪ್ರಯತನ್ನ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಕೆಲವು ಸಿನಿಮಾಗಳು ಸೋತಿವೆ. ಮತ್ತೆ ಕೆಲವು ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಕ್ಸಾಫೀಸ್‌ನಲ್ಲಿ ಸೋತಿರುವ ಸಿನಿಮಾಗಳು ಓಟಿಟಿಯಲ್ಲಿ ಚಿಂದಿ ಉಡಾಯಿಸಿವೆ. ಸದ್ಯ ಇಂತಹದ್ದೇ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ ಸಿನಿಮಾವೊಂದು ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ.

ಅಂದ್ಹಾಗೆ, ಈ ವಾರ ಬಿಡುಗಡೆ ಸಜ್ಜಾಗಿರುವ ಮತ್ತೊಂದು ವಿಭಿನ್ನ ಕಂಟೆಂಟ್ ಸಿನಿಮಾ 'ಎಡಗೈಯೇ ಅಪಘಾತಕ್ಕೆ ಕಾರಣ'. ಸೈಲೆಂಟ್ ಆಗಿರುವ ಸ್ಯಾಂಡಲ್‌ವುಡ್‌ಗೆ ಮೈಲೇಜ್ ಕೊಡಲು ಕೊಡುವುದಕ್ಕೆ ಈ ಸಿನಿಮಾ ಸಜ್ಜಾಗಿದೆ. ದೂದ್‌ ಪೇಡಾ ದಿಗಂತ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಪ್ರತಿಭೆ ಸಮರ್ಥ್ ಕಡ್ಕೊಳ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹಾಗೇ ನಿರ್ಮಾಣ ಕೂಡ ಇವೇ ಮಾಡಿದ್ದಾರೆ.

Diganth Nidhi Subbaiah starrer Edagaiye Apaghatakke Karana trailer getting good response

'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಪೋಸ್ಟ್‌ಪೋಸ್ ಆಗುತ್ತಿತ್ತು. ಕೊನೆಗೂ ಈಗ ಈ ಸಿನಿಮಾ ರಿಲೀಸ್‌ ಆಗುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಇದೇ ಜೂನ್ 13ಕ್ಕೆ 'ಎಡಗೈಯೇ ಅಪಘಾತಕ್ಕೆ ಕಾರಣ' ಅದ್ಧೂರಿಯಾಗಿ ತೆರೆಮೇಲೆ ಬರುತ್ತಿದೆ. ಇದೇ ಜೋಷ್‌ನಲ್ಲಿ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ಟೀಸರ್ ಮತ್ತು ಪೋಸ್ಟರ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿವೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾದ ಮೇಲಿನ ಕುತೂಹಲವನ್ನು ಡಬಲ್ ಮಾಡಿದೆ.

'ಎಡಗೈಯೇ ಅಪಘಾತಕ್ಕೆ ಕಾರಣ' ಟೈಟಲ್ ಹೇಳುವಂತೆ ಎಡಗೈ ಬಳಸುವ ವ್ಯಕ್ತಿಗಳ ಕುರಿತಾದ ಸಿನಿಮಾ. ಎಡಗೈ ಹೆಚ್ಚು ಬಳಸುವ ವ್ಯಕ್ತಿಗಳ ಕಷ್ಟದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಇದೊಂತರ ಡಾರ್ಕ್ ಕಾಮಿಡಿ ಸಿನಿಮಾ ಎನ್ನಬಹುದು. ಈ ಸಿನಿಮಾದಲ್ಲಿ ದೂದ್‌ ಪೇಡಾ ದಿಗಂತ್ ಜೊತೆ ನಿಧಿ ಸುಬ್ಬಯ್ಯ, ಧನು ಹರ್ಷ ಇಬ್ಬರೂ ನಟಿಯರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 'ಪಂಚರಂಗಿ'ಯಂತಹ ಸೂಪರ್ ಹಿಟ್ ಸಿನಿಮಾದ ಬಳಿಕ ಮತ್ತೆ ದಿಗಂತ್ ಹಾಗೂ ನಿಧಿ ಸುಬ್ಬಯ್ಯ ಒಂದಾಗಿದ್ದಾರೆ. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್‌ಗಳಿರುವ ದಿಗಂತ್‌ಗೆ ಇಲ್ಲಿ ಜೋಡಿ ಯಾರು ಎನ್ನುವುದು ಸದ್ಯ ಕುತೂಹಲವನ್ನು ಮೂಡಿಸಿದೆ.

ಇನ್ನು ಬಿಡುಗಡೆಯನ್ನು ಪೋಸ್ಟ್‌ಪೋನ್ ಮಾಡುತ್ತಿದ್ದ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾಗೆ 'ಬ್ಲಿಂಕ್' ಹಾಗೂ 'ಶಾಖಹಾರಿ' ಸಿನಿಮಾದ ನಿರ್ಮಾಪಕರು ಬೆಂಬಲ ನೀಡಿದ್ದಾರೆ. ಇಬ್ಬರು ಒಟ್ಟಿಗೆ ಸೇರಿ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. 'ಶಾಖಹಾರಿ' ಸಿನಿಮಾದ ನಿರ್ಮಾಪಕ ರಾಜೇಶ್ ಕೀಳಂಬಿ ಮತ್ತು 'ಬ್ಲಿಂಕ್' ಸಿನಿಮಾ ನಿರ್ಮಾಪಕ ರವಿಚಂದ್ರ ಇಬ್ಬರೂ ಈ ಸಿನಿಮಾ ನೋಡಿ ಸಿಕ್ಕಾಪಟ್ಟೆ ಪಟ್ಟು ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.

ನಿರ್ದೇಶಕ ಸಮರ್ಥ್ ಕಡ್ಕೋಳ್ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಕಾನ್ಸೆಪ್ಟ್‌ ಅನ್ನು ಪರಿಚಯಿಸುವುದಕ್ಕೆ ಹೊರಟಿದ್ದಾರೆ. ಒಂದು ವೇಳೆ ಈ ಸಿನಿಮಾ ಗೆದ್ದರೆ, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಟ್ರೆಂಡ್‌ ಅನ್ನು ಸೃಷ್ಟಿ ಮಾಡಿದ ಹಾಗೇ. ಇನ್ನು ಇಷ್ಟು ದಿನ ನಟ ದಿಗಂತ್ ಲವರ್ ಬಾಯ್ ಆಗಿ ತೆರೆಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆಮ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ದೂದ್ ಪೇಡಾ ದಿಗಂತ್‌ಗೆ ಮತ್ತೆ ಗೆಲುವು ಸಿಗುತ್ತೆ ಎನ್ನುವ ಭರವಸೆ ಸಿನಿಮಾ ಮಂದಿ ವ್ಯಕ್ತಪಡಿಸುತ್ತಿದ್ದಾರೆ. 'ಎಡಗೈಯೇ ಅಪಘಾತಕ್ಕೆ ಕಾರಣ' ಜೂನ್ 13ಕ್ಕೆ ರಿಲೀಸ್ ಆಗಲಿದ್ದು, ಅಂದೇ ಎಲ್ಲವೂ ರಿವೀಲ್ ಆಗಲಿದೆ.

More from Filmibeat

English summary
Diganth Nidhi Subbaiah starrer Edagaiye Apaghatakke Karana trailer getting good response
Read more about: diganth nidhi subbaiah trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X